ಭಾಗ್ಯವಂತನಿಂದ ಒಳಿತ ಭಾಗ್ಯನಗರ-ಭಗವಂತನಿಂದ ಒಳಿತಾಗಲಿ ಸಚಿವಸ್ಥಾನ-ಮಾರ್ಕೆಟ್ ನರೇಂದ್ರ
ಭಾಗ್ಯನಗರ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ, ಇತಿಹಾಸದಲ್ಲಿ ಎಂದಿಗೂ ಮರೆಯಲಾರದ ಕೊಡುಗೆಯನ್ನು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ನೀಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ನರೇಂದ್ರ ಅಭಿಪ್ರಾಯಪಟ್ಟರು.
ಪಟ್ಟಣದ ಟಿಬಿ ಕ್ರಾಸ್ ಬಳಿ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಮಂಡಿ ಮಾಲೀಕರ ಮತ್ತು ರೈತರ ವತಿಯಿಂದ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕರ್ನಾಟಕ ಸರ್ಕಾರದ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡೆಪ್ಯೂಟಿ ಸಿ.ಎಂ. ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಈ ಭಾಗಕ್ಕೆ ವಿಶೇಷವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಶ್ಲಾಘಿಸಿದ ಅವರು ಗಂಟ್ಲಮಲ್ಲಮ್ಮ ಕಣಿವೆಯಲ್ಲಿ ಬ್ಯಾರೇಜ್ ನಿರ್ಮಿಸಲು 189 ಕೋಟಿ, ಬಾಗೇಪಲ್ಲಿ ಆಸ್ಪತ್ರ್ರೆಗೆ 16.5 ಕೋಟಿ, ಚೇಳೂರು ಆಸ್ಪತ್ರೆöಗೆ 6.5 ಕೋಟಿ ಮಂಜೂರು ಮಾಡಿದ್ದಾರೆ ಹಾಗೂ ಅದೇ ರೀತಿಯಲ್ಲಿ ಕೃಷಿ, ನೀರಾವರಿ, ಮೂಲಭೂತ ಸೌಕರ್ಯ ಅಭಿವೃದ್ಧಿ. ಶಿಕ್ಷಣ, ಕೈಗಾರಿಕೆಗಳಿಗೆ ಒತ್ತು ನೀಡುತ್ತಿರುವುದು ಅಭಿನಂದನಿಯ.
ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಈ ಭಾಗದ ರೈತನ ಮಗನಾಗಿದ್ದು, ಈ ಭಾಗದ ರೈತರ ಸಮಸ್ಯೆಗಳನ್ನು ಮನದಟ್ಟು ಮಾಡಿಕೊಂಡು, ಗಂಟ್ಲಮಲ್ಲಮ್ಮ ಕಣಿವೆಯಲ್ಲಿ ಜಲಾಶಯ ನಿರ್ಮಾಣ ಮಾಡುವ ಕಾರ್ಯ ಕೈಗೆತ್ತಿಕೊಂಡಿರುವುದರ ಮುಖೇನ ಈ ಭಾಗಕ್ಕೆ ಅವರು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ, ಅದೇ ರೀತಿಯಲ್ಲಿ ಹಲವಾರು ವರ್ಷಗಳ ಬೇಡಿಕೆಯಾದ ಬಾಗೇಪಲ್ಲಿಗೆ ಭಾಗ್ಯನಗರ ಮರುನಾಮಕರಣ ಮಾಡುವ ಕೆಲಸಕ್ಕೆ ರಾಜ್ಯ ಸರ್ಕಾರ ಅಸ್ತು ಎಂದಿರುವುದು ಶ್ಲಾಘನೀಯ ಎಂದರು.
ಇದೇ ಸಂಧರ್ಭದಲ್ಲಿ ಕೇಕ್ ಕಟ್ ಮಾಡಿ, ಕೇಕ್ ಮತ್ತು ಸಿಹಿಯನ್ನು ರೈತರಿಗೆ ವಿತರಿಸಿದರು, ಕಿವಿಗಡುಚಿಕ್ಕುವಂತೆ ಪಟಾಕಿಗಳನ್ನು ಸಿಡಿಸಿ, ಸಂಭ್ರಮಿಸಿದರು. ಕಾಂಗ್ರೆಸ್ ಸರ್ಕಾರಕ್ಕೆ ಜಯಘೋಷಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಸೋಮಶೇಖರ್, ನಂಜುoಡಪ್ಪ, ಅಂಬರೀಷ್, ನರೇಂದ್ರ,ಸೇರಿದಂತೆ ಹಲವಾರು ರೈತರು ಭಾಗವಹಿಸಿದ್ದರು...
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
