"ಭಾಗ್ಯವಿದಾತ ಅಂಬೇಡ್ಕರ"
ಜಗದೊಳು ಭೀಮ ಹುಟ್ಟಿ ಬಂದನೋ
ಭಾರತದ ಭಾಗ್ಯವ ತಂದನೋ ಬಂಧು ಬಾಂಧವರಿಗೆ ಅಂದನೋ ಬೌದ್ಧ ಧರ್ಮಕ್ಕೆ ಶರಣಾಗಂದನು.!!
ಭೀಮಾ ದೇವಿಯ ಕಂದನೋ ಬುದ್ಧಿಯಲಿ ಬಹಳ ಮುಂದನೋ
ಹಲವಾರು ಪುಸ್ತಕಗಳನ್ನು ಓದಿ ಅನೇಕ
ಪದವಿಗಳ ಪಡೆದವನೋ..!!
ಮನುಸ್ಮೃತಿಯ ದಹನ ಮಾಡಿದನು,
ಸಮಾನತೆಯ ಸಂವಿಧಾನ ಬರೆದನು
ಜಾತಿ ಬೇಧವನು ಬುಡದಿಂದ ಕತ್ತರಿಸಿದನು
ಮಾನವರೆಲ್ಲಾ ಒಂದೇ ಎಂಬ
ಸಾರವನ್ನು ತಿಳಿಸಿದನು..!!
ಸಮಾನತೆಯ ಹರಿಕಾರನಿವನು
ಎಲ್ಲರೂ ಸಮಾನತೆಯಿಂದ ಬಾಳಲಿ ಎಂದು ಆಶಿಸಿದವನು
ಸಮಾನತೆಯ ಶ್ರೇಷ್ಠ ಸಂವಿಧಾನವನ್ನೇ ಬರೆದಿಟ್ಟವ ನೀನು, ನಿಮಗೆ ನಾನು ಶರಣು ಶರಣು
ಜೈ ಭೀಮಗೆ ನಾನು ನಮಿಪೆನು..!!
"ವಿಶಾಲಾಕ್ಷಿ ಕಾಳೆ"
ತಾ ಇಂಡಿ ಜಿಲ್ಲಾ ವಿಜಾಪುರ.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
