ಭಾರತ ದೇಶ ಸದೃಢವಾಗಲು ಗಾಂಧಿ ವಿಚಾರಧಾರೆ ಮುಖ್ಯ ; ಇಂದಿರಾ ಕೃಷ್ಣಪ್ಪ.
ಗಾಂಧಿ ವಿಚಾರಧಾರೆಗಳು ಪ್ರಾಥಮಿಕ ಶಾಲಾ ಹಂತದಿಂದ ಉನ್ನತ ಶಿಕ್ಷಣದ ವರೆಗೆ ಅಭ್ಯಾಸ ಮಾಡುವುದು ಸರ್ವೇಸಾಮಾನ್ಯವಾಗಿದೆ. ಇಂದು ಸ್ವತಂತ್ರವಾಗಿ ನಾವು ಬಾಳುತ್ತಿದ್ದೇವೆಂದರೆ ಸ್ವಾತಂತ್ರ್ಯಕ್ಕಾಗಿ ತಮ್ಮ ಬಲಿದಾನ ಮಾಡಿದ ಅನೇಕ ಗಣ್ಯರು ಕಾರಣಕರ್ತರಾಗುತ್ತಾರೆ. ಇದರಲ್ಲಿ ಮೋಹನದಾಸ ಕರಮ ಚಂದ ಗಾಂಧಿ ಪ್ರಮುಖರು ಎಂದರೆ ತಪ್ಪಾಗಲಾರದು.
ವಿದೇಶದಲ್ಲಿ ವ್ಯಾಸಂಗ ಮುಗಿಸಿ ಅಲ್ಲಿನ ಸ್ವೇಚ್ಛಾಚಾರಕ್ಕೆ ಮಾರುಹೋಗದೆ, ತನ್ನ ದೇಶ, ತನ್ನ ಜನಗಳ ಉದ್ಧಾರಕ್ಕಾಗಿ ತನ್ನ ಸರ್ವಸ್ವನ್ನೇ ಮುಡುಪಾಗಿಟ್ಟ ಗಾಂಧಿ. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಲು ಕಾರಣಕರ್ತರಾದರು. ಸರ್ದಾರ ಪಟೇಲ್, ಲಾಲಾ ಲಜಪತ ರಾಯ್, ನೆಹರು, ಭಗತ್ ಸಿಂಗ್ ಸುಭಾಷ್ ಚಂದ್ರ ಬೋಸ್ ಮುಂತಾದವರ ಬಲಿದಾನವೇ ಕಾರಣವಾಗಿದೆ. ಸ್ವದೇಶಿ ಚಳುವಳಿಗೆ ಜನರನ್ನು ಪ್ರೇರೆಪಿಸಿದರು. ಆಯುಧವಿಲ್ಲದೆ ಸ್ವಾತಂತ್ರ್ಯ ಪಡೆದ ದೇಶವೆಂದರೆ ಭಾರತ. ಗಾಂಧಿ, ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಸರ್ದಾರ ಪಟೇಲ್ ಮುಂತಾದವರ ಚರಿತ್ರೆಯನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡಿದರೆ ದೇಶಭಕ್ತಿ ಮೈಗೂಡುತ್ತದೆ ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯು ಎಂಇಎಸ್ ವಿದ್ಯಾಸಾಗರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಪ್ರಾಸ್ತಾವಿಕ ನುಡಿಯನ್ನು ಚಕೋರ ಸಂಚಾಲಕರಾದ ಲಕ್ಷ್ಮಿ ಶ್ರೀನಿವಾಸ್ ರವರು ಮಾಡಿದರು. ಕಾ.ವೆಂ. ಶ್ರೀನಿವಾಸಮೂರ್ತಿ ಆಶಯ ನುಡಿಗಳನ್ನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್. ಕೆ. ಶಾಂತಲಾ ವಹಿಸಿದ್ದರು. ಅಧ್ಯಾಪಕರಾದ ಶ್ರೀಮತಿ ಕೆ.ಜಿ. ರಶ್ಮಿ ಸ್ವಾಗತಿಸಿದರು, ನಿರೂಪಣೆಯನ್ನು ಬಿ. ಕೆ. ಕಿರಣ್ ನಿರ್ವಹಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
