ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ ನ್ಯಾ. ವಿನೋದ್ ಕುಮಾರ್

Jun 12, 2025 - 17:43
 0  5
ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ ನ್ಯಾ. ವಿನೋದ್ ಕುಮಾರ್

ಕೆಜಿಎಫ್: ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ ಮಕ್ಕಳನ್ನು ದೇಶದ ಉತ್ತಮ ಪ್ರಜೆಯಾಗಿ ಮಾಡಬೇಕು. ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಕೆಜಿಎಫ್ ಹಾಗೂ ವಕೀಲರ ಸಂಘ ಕೆ ಜಿ ಎಫ್ ಮತ್ತು ಶಿಕ್ಷಣ ಇಲಾಖೆ ಜಂಟಿ ಸಹಯೋಗದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಶ್ರೇಣಿ ನ್ಯಾಯಾಧೀಶರು. ಎಂ. ವಿನೋದ್ ಕುಮಾರ್. ರವರು. ಮಕ್ಕಳ ರಕ್ಷಣೆಗೆ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದನ್ನು ಸಂಬಂಧಪಟ್ಟ ಇಲಾಖೆಯವರು. ಮಕ್ಕಳ ಬಗ್ಗೆ ಕಾಳಜಿ ವಹಿಸಿ ಕಾರ್ಯರೂಪಕ್ಕೆ ತಂದರೆ ಸಾಕು. ಇಂದು ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಮಾಡುತ್ತಿರುವ ಉದ್ದೇಶ. ಈಗಿನ ಕಾಲದಲ್ಲೂ ಬಾಲ್ಯ ವಿವಾಹ. ಬಾಲ ಕಾರ್ಮಿಕರನ್ನು ದುಡಿಮೆಯಲ್ಲಿ ತೊಡಗಿಸಿಕೊಳ್ಳುವುದು. ಕಾನೂನಿನ ಅಡಿಯಲ್ಲಿ ಅಪರಾಧ. ಇಂತಹ ವರದಿಗಳು ಕಂಡು ಬಂದರೆ ಸಂಬಂಧಪಟ್ಟ ಪೊಲೀಸ್ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಮತ್ತು ಕಾನೂನು ಸೇವೆಗಳ ಸಮಿತಿಗೆ ದೂರು ನೀಡಬಹುದು ಎಂದರು. ನ್ಯಾಯಾಧೀಶರು ಶಾಮಿದ ಮಾತನಾಡಿ. ಈಗಿನ ಮಕ್ಕಳು ಪ್ರೌಢ ವ್ಯವಸ್ಥೆಗೆ ಬಂದ ಕೂಡಲೇ. ದೈಹಿಕವಾಗಿ ಹಲವು ಬದಲಾವಣೆಗಳು ಕಾಣುತ್ತದೆ. ಆ ಸಂದರ್ಭದಲ್ಲಿ ಯಾರೇ ಮಾತನಾಡಿದರು. ಕೋಪಗೊಳ್ಳುವುದು ಸಹಜ ಆಗ ತಮ್ಮ ಮನಸ್ಸನ್ನು ಏಕಾಗ್ರತೆ ಇಂದ ಇನ್ನೊಂದು ಕಡೆಗೆ ಯೋಚಿಸಿ ಕೋಪವನ್ನು ಕಡಿಮೆ ಮಾಡಬೇಕು. ಎಂದು ಸಲಹೆ ನೀಡಿದರು. ಹೆಣ್ಣು ಮಕ್ಕಳ ಮೇಲೆ ಹಲವು ರೀತಿಯಲ್ಲಿ ದೌರ್ಜನಗಳ ನಡೆಯುತ್ತದೆ. ಆದರೆ ಅದನ್ನು ಮಕ್ಕಳು ದೊಡ್ಡವರ ಗಮನಕ್ಕೆ ತರುವುದಿಲ್ಲ. ಅದರಿಂದ ಮಕ್ಕಳಲ್ಲಿ ಹಲವು ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಏನೇ ಸಮಸ್ಯೆ ಇದ್ದರೂ ಮಕ್ಕಳು ತಂದೆಗೆ ಹಾಗೂ ತಾಯಿಗೆ ಪೋಷಕರಿಗೆ ತಿಳಿಸಬೇಕು. ಇಲ್ಲದಿದ್ದರೆ ಶಿಕ್ಷಕರ ಗಮನಕ್ಕೆ ತರಬೇಕು. ಆಗ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬಹುದು ಎಂದು ಮಕ್ಕಳಿಗೆ ಧೈರ್ಯ ತುಂಬಿದರು. ವಕೀಲರ ಸಂಘದ ಅಧ್ಯಕ್ಷರು. ರಾಜಗೋಪಾಲಗೌಡ ಮಾತನಾಡಿ ಮಕ್ಕಳಿಗೆ ಕಾನೂನು ಅಡಿಯಲ್ಲಿ ಅವರ ಹಕ್ಕುಗಳನ್ನು ಕಾಪಾಡಲು ಹಲವಾರು ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳು ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು. ಯಾವುದೇ ಕೆಟ್ಟ ಚಟಕ್ಕೆ ಬಲಿಯಾಗಬಾರದು. ಈಗಿನ ಮಕ್ಕಳು ದೇಶದ ಮುಂದಿನ ಭವಿಷ್ಯದ ಪ್ರಜೆಗಳಾಗಿ  ನೀವು ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದರು ಈ ಸಂದರ್ಭದಲ್ಲಿ. ಕ್ಷೇತ್ರ ಶಿಕ್ಷಣಾಧಿಕಾರಿ ಬಿ ಎನ್.ಅನಿತಾ ವಕೀಲರು. ಕಲೈ ಸೆಲ್ವಿ. ಮಣಿವಣ್ಣನ್. ಪರಮೇಶ್ .ಅಶ್ವಥ್ ಮೊದಲಾದವರಿದ್ದರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456