ಮಳೆಗಾಲದಲ್ಲಿ ಗಿಡಮರಗಳ ಕೆಳಗಡೆ ವಾಹನಗಳನ್ನು ನಿಲ್ಲಿಸಬೇಡಿ: ಅಮರೇಗೌಡ ಮಲ್ಲಾಪುರ ಮನವಿ

Jun 9, 2025 - 14:06
 0  11
ಮಳೆಗಾಲದಲ್ಲಿ ಗಿಡಮರಗಳ ಕೆಳಗಡೆ ವಾಹನಗಳನ್ನು ನಿಲ್ಲಿಸಬೇಡಿ: ಅಮರೇಗೌಡ ಮಲ್ಲಾಪುರ ಮನವಿ

ಸಿಂಧನೂರು ನಗರದಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಿಂಧನೂರು ನಗರದೆಲ್ಲಡೆ ಗಿಡಮರಗಳು ನೆಲಕ್ಕುರುಳಿವೆ.ಅದಲ್ಲದೆ ಗಿಡಮರಗಳ ಕೆಳಗಡೆ ನಿಲ್ಲಿಸಿರುವ ವಾಹನಗಳ ಮೇಲೆ ಬಿದ್ದಿವೆ.ದಯವಿಟ್ಟು ಎಲ್ಲ ಸಾರ್ವಜನಿಕರು ಮಳೆ ಬರುವ ಸಮಯದಲ್ಲಿ ಗಿಡಮರಗಳ ಕೆಳಗಡೆ ವಾಹನಗಳನ್ನು ನಿಲ್ಲಿಸಬೇಡಿ ಎಂದು ವನಸಿರಿ ಅಮರೇಗೌಡ ಮಲ್ಲಾಪುರ ಮನವಿ ಮಾಡಿದರು.

ರಾಜ್ಯದಲ್ಲಿ ಮುಂಗಾರು ಮಳೆ ಪ್ರಾರಂಭಗೊಂಡಿದ್ದು,ರಾಜ್ಯದಲ್ಲಿ ಇನ್ನೂ ಕೆಲ ದಿನಗಳ ಕಾಲ ಅತೀ ಹೆಚ್ಚು ಮಳೆ ಬೀಳಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.ಇದರಿಂದ ನಿನ್ನೆ ಸಿಂಧನೂರಿನಲ್ಲಿ ರಾತ್ರಿ ಪ್ರಾರಂಭಗೊಂಡ ಮಳೆ ಗುಡುಗು ಸಿಡಿಲಿನೊಂದಿಗೆ ರಾತ್ರಿವಿಡೀ ಸುರಿದು ಮಳೆಗೆ ನಗರದ ಹಲವಡೆ ಸುಮಾರು ಗಿಡಮರಗಳು ನೆಲಕ್ಕುರುಳಿವೆ. ಇದರಿಂದ ಗಿಡದ ಕೆಳಗಡೆ ಸಾರ್ವಜನಿಕರು ನಿಲ್ಲಿಸಿರುವ ಕಾರು,ಬೈಕ್ ಹಾಗೂ ಇನ್ನಿತರ ವಾಹನಗಳ ಮೇಲೆ ಗಿಡಗಳು ಬಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ.ಗುಡುಗು ಸಿಡಿಲಿನಿಂದ ಸಾರ್ವಜನಿಕರು,ಪ್ರಾಣಿಗಳಿಗೆ ಹಾನಿ ಉಂಟಾಗುತ್ತದೆ.ಸಾರ್ವಜನಿಕರು ಯಾವುದೇ ಕಾರಣಕ್ಕೂ ಮಳೆಗಾಲದ ಸಮಯದಲ್ಲಿ ಗಿಡಮರಗಳ ಕೆಳಗಡೆ ವಾಹನಗಳನ್ನು ನಿಲ್ಲಿಸಬಾರದು,ಹಸು,ಎಮ್ಮೆ, ಕರುಗಳಂತಹ ಪ್ರಾಣಿಗಳನ್ನು ಗಿಡಕ್ಕೆ ಕಟ್ಟಬಾರದು ಮತ್ತು ತಾವೂ ಕೂಡಾ ನಿಂತುಕೊಳ್ಳಬಾರದು ಎಂದು ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಸಾರ್ವಜನಿಕರಲ್ಲಿ ಮನವಿ ಮಾಡಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456