ಮಾಡಶಿರವಾರ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ವಿರೋಧಿಸಿ ಮಹಿಳೆಯರಿಂದ ತಹಶೀಲ್ದಾರರಿಗೆ ಆಗ್ರಹ

Feb 28, 2026 - 15:04
 0  6
ಮಾಡಶಿರವಾರ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ವಿರೋಧಿಸಿ ಮಹಿಳೆಯರಿಂದ ತಹಶೀಲ್ದಾರರಿಗೆ ಆಗ್ರಹ

ಸರಾಯಿ ಬೇಡ ಶಿಕ್ಷಣ ಬೇಕು. ಬೀರು ಬೇಡ ನೀರುಬೇಕು ಕೂಗು)

ಸಿಂಧನೂರು ತಾಲೂಕಿನ ಮಾಡಶಿರವಾರ ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟವನ್ನು ತಡೆಯುವಂತೆ ಒತ್ತಾಯಿಸಿ ಗ್ರಾಮದ ನೂರಾರು ಮಹಿಳೆಯರು ಮತ್ತು ಯುವಕರ ಜೊತೆಗೆ ಕೆ ಆರ್ ಎಸ್ ಪಕ್ಷದ ಮುಖಂಡರು ತೆರಳಿ ಮಾನ್ಯ ತಹಶೀಲ್ದಾರರು,ಅಬಕಾರಿ ನಿರೀಕ್ಷಕರು,ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮಾಡಶಿರವಾರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧಿಸುವಂತೆ ತಹಶೀಲ್ದಾರರಿಗೆ ಆಗ್ರಹ ಮಾಡಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ಮುಖಂಡ ನಿರುಪಾದಿ ಕೆ ಗೋಮರ್ಸಿ ಗ್ರಾಮದಲ್ಲಿ ಕೆಲವು ವ್ಯಕ್ತಿಗಳು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ವಸತಿ ಪ್ರದೇಶಗಳ ಸಮೀಪ ಅಕ್ರಮವಾಗಿ ಮಧ್ಯವನ್ನು ಮಾರಾಟ ಮಾಡುತ್ತಿದ್ದಾರೆ.ಇದರ ಪರಿಣಾಮವಾಗಿ ಊರಿನ ಯುವಕರು,ಕಾರ್ಮಿಕ ವರ್ಗದವರು, ರೈತಪಿ ಕೂಲಿಕಾರರು ದಿನ ನಿತ್ಯ ಮಧ್ಯ ಸೇವಿಸುವಂತಾಗುತ್ತಿದ್ದು ಇದರಿಂದ ಕುಟುಂಬದಲ್ಲಿ ಕಲಹ, ಸಾರ್ವಜನಿಕ ಅಶಾಂತಿ ಹಾಗೂ ಕಾನೂನು ವ್ಯವಸ್ಥೆಗೆ ಗ್ರಾಮದಲ್ಲಿ ಬಂಗ ಉಂಟಾಗುತ್ತಿದೆ. ವಿಶೇಷವಾಗಿ ಮಹಿಳೆಯರು,ಮಕ್ಕಳು ಮತ್ತು ವೃದ್ಧರಿಗೆ ತೊಂದರೆಯಾಗುತ್ತಿದ್ದು ಇದರಿಂದ ಗ್ರಾಮದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. 

ಗ್ರಾಮದಲ್ಲಿನ ಈ ಅಕ್ರಮ ಮಧ್ಯ ಮಾರಾಟವು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದ್ದು ಸಮಾಜಕ್ಕೆ ಗಂಭೀರ ಹಾನಿ ಉಂಟು ಮಾಡುತ್ತಿದೆ ಗ್ರಾಮದ ಹಲವು ಅಂಗಡಿ ಮುಂಗಟಗಳಲ್ಲಿ,ಕಿರಾಣಿ ಅಂಗಡಿಯಗಳಲ್ಲಿ,ಮನೆಗಳಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡಲಾಗುತ್ತಿದ್ದು ಇದರ ಪರಿಣಾಮ ಮಧ್ಯವು ಗ್ರಾಮಸ್ಥರಿಗೆ ಸುಲಭವಾಗಿ ದೊರೆಯುವಂತಾಗುತ್ತಿದೆ,ಆದ್ದರಿಂದ ದಯವಿಟ್ಟು ಸಂಬಂಧಿಸಿದ ಸ್ಥಳಗಳಲ್ಲಿ ತಕ್ಷಣ ದಾಳಿ ನಡೆಸಿ ಅಕ್ರಮ ಮಧ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಅವರನ್ನ ಶಿಕ್ಷೆಗೆ ಒಳಪಡಿಸಿ ಸಾರಾಯಿ ಮುಕ್ತ ಮಾಡಶಿರವಾರ ಗ್ರಾಮವನ್ನಾಗಿ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಸಮಾಜಿಕ ಹೋರಾಟಗಾರರಾದ ವಿರುಪಮ್ಮ ಉದ್ಭಳ,ಬಸವರಾಜ ಗೋಡಿಹಾಳ,ಮದ್ಯ ನಿಷೇಧ ಆಂದೋಲನದ ಸಂಚಾಲಕರಾದ ಮೋಕ್ಷಮ್ಮ,ಮರಿಯಮ್ಮ,ಇಂದಿರಮ್ಮ,ಶಿವಮ್ಮ,ಈರಮ್ಮ,ವಿಜಯಲಕ್ಷ್ಮಿ,ಯಂಕಮ್ಮ,ಅಂಬಮ್ಮ,ಸಾವಿತ್ರಮ್ಮ,ಯಮನಮ್ಮಗ್ರಾಮದ ಮುಖಂಡರಾದ ವೀರೇಶ,ಜಗದೀಶ್,ಶಿವರಾಜ್,ನಾಗರಾಜ್, ಬಾಳಪ್ಪ,ರಾಮಣ್ಣ,ಸೇರಿದಂತೆ ಅನೇಕರು ಭಾಗವಹಿಸಿದ್ದರು

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456