ಯುವಕರು ಸಮಾಜ ಸೇವೆ ಮಾಡಲು ಮುಂದೆ ಬನ್ನಿ: ಮಾಜಿ ಸೈನಿಕ ವಿ. ಪ್ರಕಾಶ್ ಕರೆ
ಕೆಜಿಎಫ್: ಈಗಿನ ಯುವ ಪೀಳಿಗೆ ಯುವಕರು ಸಮಾಜ ಸೇವೆ ಮಾಡಲು ಉತ್ಸುಕರಾಗಿರಬೇಕು. ತಮ್ಮ ವೃತ್ತಿಯ ಜೊತೆಯಲ್ಲಿ ಇದನ್ನು ಅಳವಡಿಸಿಕೊಳ್ಳಿ ಆಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ನಗರದ ಸನ್ ಮೇರಿ ಶಾಲೆಯಲ್ಲಿ ಗೋಲ್ಡನ್ ಜ್ಯೂಬ್ಲಿ ಟ್ರಸ್ಟ್ 83-95 ಹಾಗೂ collaboration with Ebinezer Ministries Society ಹಮ್ಮಿಕೊಂಡಿದ್ದ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸೈನಿಕರು. ವಿ. ಪ್ರಕಾಶ್ ಪ್ರತಿಯೊಬ್ಬರೂ ಜೀವನದಲ್ಲಿ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸಬೇಕು. ತಾವು ಸಂಪಾದನೆ ಮಾಡುವ ಹಣದಲ್ಲಿ ತಮ್ಮ ಆಸು ಪಾಸಿನಲ್ಲಿರುವ ಬಡ ಕುಟುಂಬಗಳಿಗೆ ಅಂಗವಿಕಲರಿಗೆ ಬಡ ವಿದ್ಯಾರ್ಥಿಗಳಿಗೆ ತಮ್ಮ ಕೈಯಲ್ ಆಗುವ ಸಹಾಯವನ್ನು ಮಾಡಿ ತಮಗೆ ಯಾವುದೇ ಒಂದು ಕಷ್ಟ ಇದ್ದರೂ ಅದರಲ್ಲಿ ಅವರು ಒಬ್ಬರು ಎಂದು ಭಾವಿಸಿ ಆಗ ನಮ್ಮ ಮನಸ್ಸಿಗೆ ಉಲ್ಲಾಸವಾಗುತ್ತದೆ ಎಂದರು.
ಗೋಲ್ಡನ್ ಜ್ಯೂಬ್ಲಿ 83-95 ಟ್ರಸ್ಟ್ ಅಧ್ಯಕ್ಷರು. ದಿನೇಶ್. ಮಾತನಾಡಿ ನಮ್ಮ ಟ್ರಸ್ಟ್ ಮೂಲಕ 20 ವರ್ಷಗಳಿಂದ ಸಮಾಜ ಸೇವೆ ಸಲ್ಲಿಸಿಕೊಂಡು ಬಂದಿದ್ದು, ನಮ್ಮ ಸ್ನೇಹಿತರ ಜೊತೆಗೂಡಿ ಚಿಕ್ಕದಾಗಿ ಪ್ರಾರಂಭ ಮಾಡಿದ್ದು, ಆಗ ಹತ್ತು ಕಿಟ್ಟು ನೀಡುವುದು ಇಂದು 80ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಮತ್ತು ಅಂಗವಿಕಲರಿಗೆ ಆಹಾರ ಸಾಮಗ್ರಿ ಕಿಟ್ ಹಾಗೂ ಕಂಬಳ್ಳಿ ನೀಡುವಷ್ಟು ಬೆಳೆದಿದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಸ್ನೇಹಿತರು. ನಮ್ಮ ಉದ್ದೇಶ ಒಂದೇ ನಮ್ಮ ಕೈಯಲ್ಲಿ ಆಗುವ ಸಹಾಯವನ್ನು ಮಾಡೋಣ ಎನ್ನುವುದು. ನಾವು ನಿರುದ್ಯೋಗಿ ಯುವಕರಿಗೆ ಹಾಗೂ ಯುವತಿಯರಿಗೆ ಕೆಲಸವನ್ನು ನೀಡುತ್ತೇವೆ. ಈಗಿನ ಯುವ ಪೀಳಿಗೆ ಮೊಬೈಲು ಮಾದಕ ವಸ್ತುಗಳಿಂದ ನಮ್ಮ ಜೀವನವನ್ನು ಹಾಳು ಮಾಡಿಕೊಂಡಿದ್ದು, ಅದರಿಂದ ಹೊರ ಬರಬೇಕು. ಅದಕ್ಕೆ ಯುವಕರು ಕೆಲಸಕ್ಕೆ ಹೋಗಬೇಕು ತಮ್ಮ ಕುಟುಂಬದ ಸದಸ್ಯರಿಗೆ ಸಹಾಯ ಮಾಡಬೇಕು. ತಮ್ಮ ಕುಟುಂಬಕ್ಕೆ ಬೆನ್ನೆಲುಬಾಗಿರಬೇಕು. ಯುವಕರಿಗೆ ಮನವಿ ಮಾಡಿದರು.
ವಿಕಲಕ್ಷೇತನ ಕ್ಷಮಾಭಿವೃದ್ಧಿ ಸಂಘದ ಅಧ್ಯಕ್ಷರು. ಜೋಸೆಫ್ ಮಾತನಾಡಿ ನಮ್ಮ ಸಂಘಟನೆಯಿಂದ ವಿಕಲ ಚೇತನರಿಗೆ ಹಲವಾರು ರೀತಿಯ ಸೇವೆಗಳನ್ನು ನೀಡುತ್ತಿದ್ದು, ಅದರಲ್ಲಿ ಪ್ರಮುಖವಾಗಿ ವೀಲ್ ಚೇರ್ ವಿತರಣೆ. ಕೃತಕ ಕೈ. ಕಾಲು. ಸರ್ಕಾರದಿಂದ ವಿವಿಧ ಸೌಲಭ್ಯಗಳ ಸೇವೆಗಳನ್ನು ನೀಡುತ್ತೇವೆ. ಈಗ ಇವರು ನೀಡುತ್ತಿರುವ ಸೇವೆಗಳಲ್ಲಿ ನಮ್ಮ ಸಹಕಾರನು ಇರುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿಇದೇ ಸಂದರ್ಭದಲ್ಲಿಗೋಲ್ಡನ್ ಜ್ಯೂಬ್ಲಿ 83-95 ಟ್ರಸ್ಟ್ ನ ಪದಾಧಿಕಾರಿಗಳು ಭಾಗವಹಿಸಿದ್ದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
