ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಲಕ್ಕೂರು ಹೋಬಳಿಯ ಆಲಂಬಾಡಿ ಭಾಗದಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕ್ರೈಸ್ಟ್ ಇಂಟರ್ ನ್ಯಾಷನಲ್ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ, ವಿಶ್ವಮಟ್ಟದಲ್ಲಿ ಈಗಾಗಲೇ ಮಹತ್ತರವಾದ ಸಾಧನೆಯನ್ನು ಮಾಡಿರುವ ಈ ಪುಟ್ಟ ಬಾಲಕ ಗ್ರ್ಯಾಂಡ್ ಮಾಸ್ಟರ್ ತಾನೀಶ್.ಎನ್ ಗೆ ರಾಜ್ಯ ಮಟ್ಟದ ಅಂತರ್ ಶಾಲಾ ಸ್ಪರ್ಧೆಯಲ್ಲಿ ಭರತನಾಟ್ಯ ವಿಭಾಗದಲ್ಲಿ ದ್ವೀತಿಯ ಬಹುಮಾನವನ್ನು ಪಡೆದಿದ್ದಾನೆ.
ಬೆಂಗಳೂರಿನ ಡೈರಿ ಸರ್ಕಲ್ ಸಮೀಪದ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನಡೆದ ದೀಪಿಕಾ ಚಿಲ್ಡ್ರನ್ಸ್ ಲೀಗ್ (ಡಿ.ಸಿ.ಎಲ್) ಅಂತರ ಶಾಲಾ ಏಕವ್ಯಕ್ತಿ ಶಾಸ್ತ್ರೀಯ ಭರತನಾಟ್ಯ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವೀತಿಯ ಬಹುಮಾನ ಪಡೆಯಲಾಗಿದೆ.
ಜೆ.ಬಿ.ಸಿ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ತಾನೀಶ್.ಎನ್ ಗೆ ದ್ವೀತಿಯ ಬಹುಮಾನವಾಗಿ ಪ್ರಶಸ್ತಿ ಪತ್ರ, ಪದಕವನ್ನು ಡಿ.ಸಿ.ಎಲ್ ನಿರ್ದೇಶಕರಾದ ಫಾದರ್ ಬಾಬು ಕಲತುಪರಂಬಿಲ್, ಕಾರ್ಯದರ್ಶಿ ರೂಬಲ್‌ಜಾರ್ಜ್ ರವರು ನೀಡಿ ಗೌರವಿಸಲಾಯಿತು.
ಡಿ.ಸಿ.ಎಲ್ ನಲ್ಲಿ ತಾನೀಶ್.ಎನ್ ಗೆ ಬಂದಿರುವ ಬಹುಮಾನಕ್ಕಾಗಿ ಕ್ರೈಸ್ಟ್ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಹಾಗೂ ತಂದೆ ಯುವಕವಿ ಲಕ್ಕೂರು ಎಂ.ನಾಗರಾಜ್ ತಾಯಿ ಶ್ವೇತಾಂಜಲಿ ಭರತನಾಟ್ಯ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ಶುಭಹಾರೈಸಿದ್ದಾರೆ.