ವಿಚ್ಛೇದನ ಕೋರಿದ 8 ಜೋಡಿಗೆ ಮತ್ತೆ ಹೊಸ ಜೀವನ, 2,497 ಕೇಸ್ ಇತ್ಯರ್ಥ 

Jul 14, 2025 - 11:30
 0  5
ವಿಚ್ಛೇದನ ಕೋರಿದ 8 ಜೋಡಿಗೆ ಮತ್ತೆ ಹೊಸ ಜೀವನ, 2,497 ಕೇಸ್ ಇತ್ಯರ್ಥ 
ಕೆಜಿಎಫ್: ನ್ಯಾಯಾಲಯದ ಆವರಣದಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ದಾವೆಗಳ ತ್ವರಿತ ವಿಲೇವಾರಿಗಾಗಿ ಹಮ್ಮಿಕೊಳ್ಳಲಾಗಿದ್ದ ಮೆಗಾ ಲೋಕ ಅದಾಲತ್ನಲ್ಲಿ ಒಂದೇ ದಿನ ಕೈಗೆತ್ತಿಕೊಳ್ಳಲಾದ 2,579 ಪ್ರಕರಣಗಳ ಪೈಕಿ 2,497 ಪ್ರಕರಣ ಇತ್ಯಾರ್ಥಗೊಂಡು ಒಟ್ಟು 1,71,79,321 ಕೋಟಿ ರೂ ಹಣ ಸಂಗ್ರಹ ಮಾಡಲಾಗಿದೆ. 
ನಗರದ ನ್ಯಾಯಾಲಯದಲ್ಲಿ ಆವರಣದಲ್ಲಿ ರಾಜಿ ಮಾಡಿಕೊಳ್ಳಬಹುದಾದ, ಕೋರ್ಟ್ನಲ್ಲಿ ಬಾಕಿ ಪ್ರಕರಣ. ವ್ಯಾಜ್ಯ ಪೂರ್ವ ಬಾಕಿ ಪ್ರಕರಣ ಇತ್ಯಾರ್ಥಕ್ಕೆ ಲೋಕ ಅದಾಲತ್ ನಲ್ಲಿ ಅವಕಾಶ ನೀಡಲಾಗಿತ್ತು.
ಬಾಕಿ ಬಿಲ್ ಪಾವತಿ ಇತ್ಯರ್ಥ: ಇನ್ನು ಮೋಟರು ವಾಹನ ಕಾಯ್ದೆ. ಅಪಘಾತ ಪರಿಹಾರ ನ್ಯಾಯಮಂಡಳಿ ಪ್ರಕರಣ. ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮ್, ವೈವಾಹಿಕ/ ಕೌಟುಂಬಿಕ ಪ್ರಕರಣ (ವಿಚ್ಛೇದನ ಹೊರತುಪಡಿಸಿ) ಚೆಕ್ ಬೌನ್ಸ್. ಆಸ್ತಿಯಲ್ಲಿ ಪಾಲು. ವಿಭಾಗ. ಬೆಸ್ಕಾಂ ದೂರವಾಣಿ ಬಾಕಿ ಬಿಲ್ಲುಗಳ ಪಾವತಿ ಪ್ರಕರಣ ಇತ್ಯರ್ಥವಾದವು. 
ಲೋಕ ಅದಾಲತ್ ಬಗ್ಗೆ ವಿವಿಧ ಇಲಾಖೆಗಳ ವತಿಯಿಂದ ವ್ಯಾಪಕ ಪ್ರಚಾರ. ನಡೆದಿದ್ದರಿಂದ ಇಷ್ಟೊಂದು ಬೃಹತ್ ಮೊತ್ತದ ಪ್ರಕರಣ ಇತ್ಯರ್ಥವಾಗಲು ಸಾಧ್ಯವಾಯಿತು ಎನ್ನಲಾಗಿದೆ. ನಗರಸಭೆಯ ಮತ್ತು ಗ್ರಾಮ ಪಂಚಾಯತಿಯ ದಿನನಿತ್ಯ ಕಸದ ವಾಹನಗಳ ಮೂಲಕ ಲೋಕ ಅದಾಲತ್ ಕಾರ್ಯಕ್ರಮ ಬಗ್ಗೆ ಪ್ರಚಾರ ಕೈಗೊಳ್ಳಲಾಗಿತ್ತು. ಅಲ್ಲದೆ ಬೆಸ್ಕಾಂ ಮತ್ತು ಬಿಎಸ್ಎನ್ಎಲ್. ಬಾಕಿ ಕಟ್ಟೆ ಬೇಕಾಗಿರುವ ಗ್ರಾಹಕರಿಗೆ ಬಿಲ್ ಗಳ ಹಿಂಭಾಗದಲ್ಲಿ ಲೋಕ ಅದಾಲತ್ ಬಗ್ಗೆ ಪ್ರಚಾರ ಕೈಗೊಳ್ಳಲಾಗಿತ್ತು. 
ಈ ಜೋಡಿಗಳನ್ನು ಒಂದು ಗೂಡಿಸಿ ಮಾತನಾಡಿದ ನ್ಯಾಯಾಧೀಶರು. ಎಂ. ವಿನೋದ್ ಕುಮಾರ್. ಜೀವನದಲ್ಲಿ ಕೆಲವೊಂದು ಕಹಿ ಘಟನೆಗಳು ನಡೆಯುತ್ತದೆ ಅವುಗಳನ್ನು ಸೂಕ್ತವಾಗಿ ನಿಭಾಯಿಸಿಕೊಂಡು ಉತ್ತಮ ಸಂಸಾರ ನಡೆಸಬೇಕು ಎಂದರು. ಮದುವೆಯಾದ ಮೇಲೆ. ಹೆಂಡತಿ ಮತ್ತು ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಬೇಕು. ಅವರ ಮನಸ್ಸಿಗೆ ನೋವನ್ನು ಉಂಟುಮಾಡಬಾರದು. ಸಂಸಾರದಲ್ಲಿ ಹೊಂದಾಣಿಕೆಯನ್ನು ಇಟ್ಟುಕೊಂಡು ಜೀವನ ವನ್ನು ಮುಂದುವರಿಸಬೇಕು. ಮುಂದೆ ಯಾವುದೇ ಕಾರಣಕ್ಕೂ ನ್ಯಾಯಾಲಯದ ಮೆಟ್ಟಿಲು ಹತ್ತಬಾರದು ಒಳ್ಳೆಯ ದಂಪತಿಗಳಾಗಿ ಜೀವನ ನಡೆಸಿ ಎಂದು ಬುದ್ಧಿವಾದ ಹೇಳಿದರು. ನಿಮ್ಮ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
"ಕರುಣಾಂತರದಿಂದ ಕೋರ್ಟ್ ಮೆಟ್ಟಿಲೇರಿತ್ತು ಎಂಟು ಜೋಡಿ"
: ಮತ್ತೆ ಒಂದಾಗಿಸುವಲ್ಲಿ ನ್ಯಾಯಾಧೀಶರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಖ್ಯೆ 117/2022 ರಂತೆ ಶಿಲ್ಲೆ ಚಿಟ್ಟು ಮತ್ತು ನವೀನ್ ಕುಮಾರ್. ಪ್ರಕರಣ ಸಂಖ್ಯೆ 224/2022 ರಂತೆ ಉಮಾ ಮಹೇಶ್ವರಿ ಮತ್ತು ಶಾಂತಕುಮಾರ್. ಪ್ರಕರಣ ಸಂಖ್ಯೆ 169/2024 ರಂತೆ ಸುಧಾಕರನ್ ಮತ್ತು ಕೋಮಲ ದರ್ಶಿನಿ, ಪ್ರಕರಣ ಸಂಖ್ಯೆ 179/2024 ರಂತೆ ನರೇಶ್ ಮತ್ತು ಅಂಜು, ಪ್ರಕರಣ ಸಂಖ್ಯೆ 188/2024 ರಂತೆ ಪ್ರಿಯಾ ಮತ್ತು ಶಿವಕುಮಾರ್, ಪ್ರಕರಣ ಸಂಖ್ಯೆ88/2025 ರಂತೆ ಲೇಖನ ಮತ್ತು ಸುರೇಶ್ ಬಾಬು. ಪ್ರಕರಣ ಸಂಖ್ಯೆ 126/2025 ರಂತೆ ಶ್ವೇತ ಮತ್ತು ಹರೀಶ್, ಪ್ರಕರಣ ಸಂಖ್ಯೆ 170/2025 ರಂತೆ ಸವಿತಾ ಮತ್ತು ಆಂತೋನಿ ಅವರ ಮನವೊಲಿಸಿ, ರಾಜಿ ಸಂಧಾನದಿಂದ ಮತ್ತೆ 8 ಜೋಡಿಗಳನ್ನು ಒಂದು ಮಾಡಲಾಯಿತು. 3ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರು ಇಂದು ನಡೆದ ಲೋಕ ಅದಾಲತ್ನಲ್ಲಿ ಹೆಚ್ಚು ಪ್ರಕರಣಗಳು ಇತ್ಯರ್ಥ ಗೊಂಡಿದ್ದು, ಇದಕ್ಕೆ ಸಹಕರಿಸಿದ ಎಲ್ಲಾ ವಕೀಲರು ಮತ್ತು ಕಕ್ಷಿಧಾರರಿಗೆ ರವರಿಗೆ ಧನ್ಯವಾದಗಳು. ಕಕ್ಷಿಧಾ ರವರು ವಿಚಾರಣಾ ಹಂತದಲ್ಲಿರುವ ವ್ಯಾಜ್ಯಗಳನ್ನು ಅದಾಲತ್ನಲ್ಲಿ ರಾಜಿ ಸಂಧನ ಮೂಲಕ ಇತ್ಯರ್ಥ ಪಡೆಸಿಕೊಂಡರೆ ಮುಂದಿನ ಹಂತಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ. ನಿಮ್ಮ ಅಮೂಲ್ಯವಾದ ಸಮಯ ಮತ್ತು ಹಣದ ವ್ಯರ್ಥವನ್ನು ತಡೆಯಬಹುದು. ಇದರಿಂದ ನ್ಯಾಯಾಲಯದಲ್ಲಿ ಪ್ರಕರಣ ಸಂಖ್ಯೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ನ್ಯಾಯಾಧೀಶರು ಹಿರಿಯ ಶ್ರೇಣಿ ನ್ಯಾಯಾಧೀಶರು. ಮುಜಫರ್ ಎ ಮಂಜರಿ. ನ್ಯಾಯಾಧೀಶೆ. ಜಯಲಕ್ಷ್ಮಿ. ನ್ಯಾಯಾಧೀಶೆ. ಶಮಿದಾ ಮತ್ತು ವಕೀಲರ ಸಂಘದ ಅಧ್ಯಕ್ಷರು. ಎಸ್. ಎನ್ ರಾಜಗೋಪಾಲ್ ಗೌಡ. ವಕೀಲರು ಪದ್ಮನಾಭ . ಮಗೇಂದ್ರನ್. ದಿನೇಶ್. ರವಿ. ವೆಂಕಟರಾಮಯ್ಯ.ಇತರರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456