ವ್ಯಕ್ತಿಯ ವಿಕಾಸವೇ ಸಮಾಜದ ವಿಕಾಸಕ್ಕೆ ಅಡಿಪಾಯ: ಸುಧಾಕರ್ ಸಂಜೀವ್
ಮಾನ್ವಿ: ಜೂ ೨೧
ಇಂದು ಮಾನ್ವಿಯ ಝೇವಿಯರ್ ಸಿ.ಬಿ.ಎಸ್.ಇ ಶಾಲೆಯಲ್ಲಿ ಜರುಗಿದ ವಿದ್ಯಾರ್ಥಿ ಸಂಸತ್ತಿನ ಪದಾಧಿಕಾರಿಗಳ ಪದಗ್ರಹಣ ಹಾಗೂ ನೂತನ ಶೈಕ್ಷಣಿಕ ವರ್ಷದ ಆರಂಭೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾನ್ವಿಯ ಸರಕಾರಿ ಸಂಯುಕ್ತ ಪದವಿಪೂರ್ವ ವಿದ್ಯಾಲಯದ ಉಪಪ್ರಾಚಾರ್ಯರಾದ ಶ್ರೀ ಸುಧಾಕರ್ ಸಂಜೀವ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ‘ಸಮಾಜದಲ್ಲಿ ಸದೃಢ ವ್ಯಕ್ತಿಯಾಗಿ ರೂಪಗೊಳ್ಳಬೇಕಾದರೆ ಕಲಿಕೆಯಲ್ಲಿ ಆಸಕ್ತಿ, ತೊಡಗಿಸಿಕೊಳ್ಳುವಿಕೆ ಮತ್ತು ಧನಾತ್ಮಕ ಬದಲಾವಣೆಯ ತುಡಿತ ಇದ್ದಾಗ ಮಾತ್ರ ಒಬ್ಬ ವ್ಯಕ್ತಿ ವಿಕಾಸ ಹೊಂದಲು ಸಾಧ್ಯ ಮತ್ತು ವ್ಯಕ್ತಿಯ ವಿಕಾಸವೇ ಸಮಾಜದ ಪರಿವರ್ತನೆಗೆ ಅಡಿಪಾಯ’ ಎಂದು ಕರೆ ನೀಡಿದರು. ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ವಂ.ಫಾ|| ವಿಲ್ಸನ್ ಬೆನ್ನಿಸ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ‘ಶಿಕ್ಷಣದ ನಿಜವಾದ ಗುರಿ ವಿದ್ಯಾರ್ಥಿಯ ಸಂಪೂರ್ಣ ವಿಕಸನಕ್ಕೆ ನಾಂದಿ ಹಾಡುವುದು ಈ ನಿಟ್ಟಿನಲ್ಲಿ ಆತ್ಮ ವಿಶ್ವಾಸ ಮತ್ತು ಅವಕಾಶದ ಸದ್ಬಳಕೆಯ ಮಹತ್ವವನ್ನು ವಿದ್ಯಾರ್ಥಿಗಳು ಅರಿಯುವಂತಾಗಲಿ ಎಂದು ಆಶಿಸಿದರು ಅಲ್ಲದೇ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಅಳವಡಿಸಿಕೊಂಡು ಭವಿಷ್ಯದ ಸಭ್ಯ ಸಮಾಜ ನಿರ್ಮಾಣಕ್ಕೆ ಸ್ಪೂರ್ತಿ ಪಡಯಬೇಕೆಂದರು. ನೂತನ ವಿದ್ಯಾರ್ಥಿ ಸಂಸತ್ತಿನ ನಾಯಕಿ ೯ನೇಯ ತರಗತಿಯ ಕು|| ಝಮ್ಝಮ್ ಖಾನಮ್, ಉಪನಾಯಕರಾದ ಕು|| ಪ್ರತುಷಾ, ಕು|| ಮಾರ್ವಿನ್ ಹಾಗೂ ಇತರೆ ನಾಯಕರು ಪ್ರಮಾಣ ವಚನ ಸ್ವೀಕರಿಸಿದರು. ಉಪಪ್ರಾಚಾರ್ಯ ಬಸವರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಶಿಕ್ಷಕರಾದ ಶ್ರೀಮತಿ ಸುಷ್ಮಾ ಸ್ಲಾö್ಯನಿ ಹಾಗೂ ಕು||ನರ್ಮದಾ ನಿರೂಪಿಸಿದರು ಹಾಗು ಸಂಯೋಜಕ ಶಿಕ್ಷಕರಾದ ಶ್ರೀಮತಿ ಸುನಿತಾ ಬಾಯಿ, ಸಿಸ್ಟರ್ ಫಿಲೋಮಿನಾ ಲೀಮಾ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸರ್ವ ಧರ್ಮ ಪ್ರಾರ್ಥನೆ ಹಾಗೂ ಸಾಂಕೃತಿಕ ಚಟುವಟಿಕೆಗಳೊಂದಿಗೆ ಕಾರ್ಯಕ್ರಮ ಈ ಸಂದರ್ಭದಲ್ಲಿ ಜರುಗಿದವು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
