ಶ್ರೀಮತಿ ರಮಾ ಕೆ ಕಲಘಟಗಿ ಅವರ ಮೂರನೆಯ ಪುಸ್ತಕ ಲೋಕಾರ್ಪಣೆ
ನನ್ನದೊಂದು ಹಾರೈಕೆ
೨೫-೧೨-೨೦೨೫ ರಂದು ಶ್ರೀಮತಿ ರಮಾ ಕೆ ಕಲಘಟಗಿ ಅವರ ಮೂರನೆಯ ಪುಸ್ತಕ ಲೋಕಾರ್ಪಣೆಗೊಂಡಿತು ಆ ಪುಸ್ತಕದ ಪರಿಚಯವನ್ನು ಮಾಡಿಕೊಳ್ಳಲು ನನ್ನನ್ನು ಆಯ್ಕೆ ಮಾಡಿಕೊಂಡಿದ್ದರು ಅದಕ್ಕೆ ಅವರಿಗೆ ನಾನು ಹೃದಯಪೂರ್ವಕ ಧನ್ಯವಾದಗಳು ತಿಳಿಸುತ್ತೇನೆ ಅವರ ಪುಸ್ತಕವು ರವಿಕಿರಣ ಕನ್ನಡ ಸಾಹಿತ್ಯ ಪರಿಷತ್ತು ವಿಜಯನಗರ ಜಿಲ್ಲೆ ಘಟಕ ಹೂವಿನಹಡಗಲಿ ತಾಲ್ಲೂಕು ಘಟಕ ನಾಗತಿ ಬಸಾಪುರನಲ್ಲಿ ಇವರ ಪುಸ್ತಕ ಬಿಡುಗಡೆಯಾಯಿತು
ರಮಾ ಕೆ ಕಲಘಟಗಿ ಮೇಡಂ ಅವರ ತುಂತುರು ಕಲರವ ಇದು ಚುಟುಕು ಸಂಕಲನ ಆಗಿದ್ದು ಇದರಲ್ಲಿ ಒಟ್ಟು ೩೩೨ಕ್ಕೂ ಹೆಚ್ಚು ಚುಟುಕುಗಳು ಹೊಂದಿದ್ದು ಈ ಚುಟುಕುಗಳಲ್ಲಿ ದೇಶದ ಪ್ರೇಮ ತಂದೆ ತಾಯಿಯ ಪ್ರೇಮ ಪರಿಸರದ ಪ್ರೇಮವನ್ನು ನಾವು ಕಾಣಬಹುದು ನಮ್ಮ ನಾಡಿನ ಹೆಸರಾಂತ ಕವಿಗಳ ಮೇಲೆ ಚುಟುಕುಗಳು ರಚನೆಯಾಗಿದ್ದು ಅವರ ನೆನಪುಗಳನ್ನು ಮೆಲುಕು ಹಾಕಲು ನೆರವಾಗುತ್ತವೆ ನಮ್ಮ ನಾಡಿನ ಕಲೆ ಸಾಂಸ್ಕೃತಿ ವೈಭವಗಳ ಬಗ್ಗೆ ಶಿಲ್ಪಕಲಗಳ ಬಗ್ಗೆ ಸುಂದರವಾಗಿ ಪದ ಜೋಡಣೆಗಳನ್ನು ಮಾಡಿದ್ದಾರೆ ಇಷ್ಟೇ ಅಲ್ಲದೆ ತಂದೆ ತಾಯಿ ಗುರುಹಿರಿಯರ ಬಗ್ಗೆಯೂ ರಚಿಸಿ ತಮ್ಮ ಆತ್ಮೀಯತೆಯನ್ನು ಮೆರೆದಿದ್ದಾರೆ. ನಾನು ಈ ಒಂದು ಸಂದರ್ಭದಲ್ಲಿ ಅವರಿಗೆ ಮನಸ್ಪೂರ್ತಿಯಾಗಿ ಅಭಿನಂದಿಸುತ್ತೇನೆ ಮತ್ತು ಹಾರೈಸುತ್ತೇನೆ ಅವರ ಈ ತುಂತುರು ಕಲರವ ಹೆಚ್ಚಿನ ಸಂಖ್ಯೆಯಲ್ಲಿ ಓದುಗರು ಕೊಂಡು ಓದಲಿ ಎಂದು ಮನಸ್ಪೂರ್ತಿ ಯಾಗಿ ಆ ದೇವರಲ್ಲಿ ಓದುವುದರಲ್ಲಿ ಪ್ರಾರ್ಥಿಸುತ್ತೇನೆ ಅವರಿಗೆ ಶುಭವಾಗಲಿ.
ಇಂತಿ
ಡಾ ಎಸ್ ವೀರೇಶ್ ಕುಮಾರ್
ರವಿಕಿರಣ ಕನ್ನಡ ಸಾಹಿತ್ಯ ಪರಿಷತ್ತು
ಸಂಸ್ಥಾಪಕರು ಅಧ್ಯಕ್ಷರು
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
