ಶ್ರೀರಾಮಪುರದ ಶ್ರೀ ಗೀತಾ ಮಂದಿರದಲ್ಲಿ ನವರತ್ನ ಮಾಲಿಕೆ ಹಾಗೂ ಲಕ್ಷ್ಮೀ ಸೋಬಾನೆ ಗಾಯನ
ಬೆಂಗಳೂರು :ಶ್ರೀರಾಮಪುರದ ಶ್ರೀ ಗೀತಾ ಮಂದಿರ ಟ್ರಸ್ಟ್ ಮತ್ತು ಶ್ರೀ ಗೀತಾಚಾರ್ಯ ಸಂಗೀತ ಸಭಾ ಟ್ರಸ್ಟ್ ಇವುಗಳ ಸಂಯುಕ್ತಾಶ್ರಯದಲ್ಲಿ ಗೀತಾ ಮಂದಿರದ ಸಭಾಂಗಣದಲ್ಲಿ ಏ.12ರಂದು ಬೆಳಗ್ಗೆ ಜ್ಯೋತಿ ಬೆಳಗಿಸುವುದರೊಂದಿಗೆ ನಾಡಿನ ಹೆಸರಾಂತ ಗಾಯಕಿಯರಾದ ಭದ್ರಾವತಿ ಸಹೋದರಿಯರು ಬಸವೇಶ್ವರನಗರದ ಅಲಕನಂದ ಭಜನಾ ಮಂಡಳಿಯ ಸದಸ್ಯರೊಂದಿಗೆ ಶ್ರೀ ಪುರಂದರದಾಸರ ನವರತ್ನ ಮಾಲಿಕೆ ಹಾಗೂ ಶ್ರೀ ವಾದಿರಾಜರ ವಿರಚಿತ ಶ್ರೀ ಲಕ್ಷ್ಮೀ ಸೋಬಾನೆಗಳ ವಿಶೇಷ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಇವರ ಗಾಯನಕ್ಕೆ ವಿದ್ವಾನ್ ಶ್ರೀ ಅನಂತ ರಾಜ್ ತಬಲಾ ವಾದನದಲ್ಲಿ ಸಹಕಾರ ನೀಡಿದರು. ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆಯಾಯಿತು ಎಂದು ಟ್ರಸ್ಟಿನ ಪದಾಧಿಕಾರಿಗಳು ತಿಳಿಸಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
