ಶ್ರೀ ಬಾಲಸೋಮೇಶ್ವರ ದೇವಾಲಯದಲ್ಲಿ ಅದ್ಧೂರಿ ಗಿರಿಜಾ ಕಲ್ಯಾಣೋತ್ಸವ
ಕೆಜಿಎಫ್: ನಗರದ ಉರಿಗಾಮ್ ಪೇಟೆಯಲ್ಲಿ ನೆಲೆಸಿರುವ ಶ್ರೀ ಬಾಲ ಸೋಮೇಶ್ವರ ದೇವಾಲಯದಲ್ಲಿ ಶಿವ ಪಾರ್ವತಿ ವಿವಾಹ ಮಹೋತ್ಸವವಾದ ಗಿರಿಜಾ ಕಲ್ಯಾನೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ದೇವಸ್ಥಾನದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಗಣಪತಿ ಪೂಜೆ, ಪುಣ್ಯಾಹ ವಾಚನ ಶಿವ ಪಾರ್ವತಿಯರ ಉತ್ಸವ ಮೂರ್ತಿಗಳನ್ನು ವಿವಿಧ ಬಗೆಯ ಹೂವುಗಳಿಂದ ಸಿಂಗಾರಿಸಲಾಗಿತ್ತು.
ದೇವಸ್ಥಾನದ ಪ್ರಧಾನ ಅರ್ಚಕರು ಮಂಜುನಾಥ್ ದೀಕ್ಷಿತ್ ಅವರ ಮಾರ್ಗದರ್ಶನದಲ್ಲಿ ಭಕ್ತಾದಿಗಳ ಸಮ್ಮುಖದಲ್ಲಿ ಶಿವ-ಪಾರ್ವತಿಯರ ಧಾರಾ ಮುಹೂರ್ತ ನೆರವೇರಿತು. ಈ ಸುಸಂದರ್ಭದಲ್ಲಿ ನೂರಾರು ಭಕ್ತರು ಅಕ್ಷತೆ ಹಾಕಿ ದೇವದಂಪತಿಗಳನ್ನು ಹರಸಿದರು.
ಈ ವೇಳೆ ಪ್ರದಾನ ಅರ್ಚಕರು ಮಂಜುನಾಥ್ ದೀಕ್ಷಿತ್ ಮಾತನಾಡಿ, ಲೋಕಕಲ್ಯಾಣಕ್ಕಾಗಿ ಮತ್ತು ಮಳೆ-ಬೆಳೆ ಸಮೃದ್ಧಿಯಾಗಲಿ ಎಂಬ ಆಶಯದೊಂದಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಗಿರಿಜಾ ಕಲ್ಯಾಣವನ್ನು ಆಯೋಜಿಸಲಾಗಿದೆ. ಭಕ್ತರ ಸಹಕಾರ ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನೂರಾರು ಭಕ್ತರು ಹಾಗೂ ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
