ಸಮಾಜ ಸೇವಕ ಬಿ ಎನ್ ಕೇಶವಮೂರ್ತಿರವರ ಹುಟ್ಟು ಹಬ್ಬ ಆಚರಣೆ ಮಾಡಿದ ಅಭಿಮಾನಿಗಳು ಹಾಗೂ ಸ್ನೇಹಿತರು
ಚನ್ನರಾಯಪಟ್ಟಣ: ಸಮಾಜ ಸೇವಕ ಬಿ ಎನ್ ಕೇಶವಮೂರ್ತಿರವರ ಹುಟ್ಟು ಹಬ್ಬ ಆಚರಣೆ ಮಾಡಿದ ಅಭಿಮಾನಿಗಳು ಹಾಗೂ ಸ್ನೇಹಿತರು. ಪಟ್ಟಣದ ಸಮಾಜ ಸೇವಕರು ಹಾಗೂ ಬೆಕ್ಕ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಬಿ ಎನ್ ಕೇಶವ್ ಮೂರ್ತಿಯವರ ಹುಟ್ಟು ಹಬ್ಬದ ಅಂಗವಾಗಿ ನೂರಾರು ಮಂದಿ ಅಭಿಮಾನಿಗಳು ಹಾಗೂ ಸ್ನೇಹಿತರು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿದರು. ಕೇಶವ್ ಮೂರ್ತಿ ಅವರು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆ ಹಾಗೂ ಜನಸೇವೆಯನ್ನು ಮಾಡಲು ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಬೆಕ್ಕ ಕೇಶವಮೂರ್ತಿ, ವರುಣ್ ಕೇಶವಮೂರ್ತಿ, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷರುಗಳಾದ ಗನ್ನಿ ಅಪ್ಪಿ, ಕರವೇ ನಾರಾಯಣಗೌಡ ಅಧ್ಯಕ್ಷರಾದ ಮಧು ಕರೆಡೆವು, ಪಿಡಿಒ ನಿಂಬೆಹಳ್ಳಿಬಾಬು, ಸೇರಿದಂತೆ ಇತರರು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
