ಸಮಿತಿಯ ಪದಾಧಿಕಾರಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸಿ.ಜಿ.ರವಿ ಕ್ಷಮೆ ಯಾಚಿಸಬೇಕು
ಚನ್ನರಾಯಪಟ್ಟಣ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ರೈತ ಮುಖಂಡರಾದ ಸಿ ಜಿ ರವಿ ಅವರು ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ರೈತ ಸಂಘದ ರಾಜ್ಯದ್ಯಕ್ಷೆಯಾದ ಶ್ರೀಮತಿ ನಾಗರತ್ನಮ್ಮ ಆಗ್ರಹಿಸಿದರು.
ರವಿ ಅಣ್ಣನವರಿಗೆ 24 ಗಂಟೆಗಳ ಸಮಯವನ್ನು ಗಡುವು ನೀಡಲಾಗುವುದು, ಭ್ರಷ್ಟಾಚಾರದ ದಂದೆ ಮಾಡುತ್ತಿರುವ ರೈತ ಸಂಘ ಮತ್ತು ದಲಿತ ಸಂಘಗಳ ಮುಖಂಡರು ಯಾರು ಎಂದು ಬಹಿರಂಗಪಡಿಸಬೇಕು ಹಾಗೂ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವರು ಯಾರು ಎಂದು ಸಾಬೀತು ಮಾಡಬೇಕು, ಸಾಬೀತು ಮಾಡುವಲ್ಲಿ ವಿಫಲರಾದರೆ ತಾಲೂಕು ಕಚೇರಿ ಮುಂಭಾಗ ಇರುವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯ ಕೆಳಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು, ಈ ವಿಚಾರ ಕುರಿತು ಮಾಧ್ಯಮದವರ ಮುಂದೆ ಬಹಿರಂಗವಾಗಿ ಹೇಳಿಕೆಯನ್ನು ನೀಡಬೇಕು ಎಂದರು.
ಈ ಎರಡು ಷರತ್ತುಗಳನ್ನು ಪಾಲಿಸದಿದ್ದರೆ ಚನ್ನರಾಯಪಟ್ಟಣ ಮಿನಿ ವಿಧಾನಸೌಧದ ಮುಂಭಾಗದಿಂದ ಗೌಡಯ್ಯ ರವಿ ಅವರ ಮನೆವರೆಗೂ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯದ್ಯಕ್ಷರಾದ ಶ್ರೀಮತಿ ಚಿನ್ನೇನಹಳ್ಳಿ ನಾಗರತ್ನಮ್ಮ, ರಾಜ್ಯ ಕಾರ್ಯದರ್ಶಿಗಳಾದ ಅರಸೀಕೆರೆ ರವೀಶ್, ಜಿಲ್ಲಾ ಮುಖಂಡರಾದ ಸೊಪ್ಪನಹಳ್ಳಿ ಶಿವಣ್ಣ, ತಾಲೂಕು ಅಧ್ಯಕ್ಷರಾದ ಮಡಬ ಮಂಜು ಹಾಜರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
