ಸರ್ವರಿಗೂ ಸಮಾನತೆ ನೀಡುವುದೇ ಸಂವಿಧಾನದ ಆಶಯ: ದಮ್ಮಪ್ರಿಯ ಎಂ. ಗಿರಿಯಪ್ಪ.
ಸಂವಿಧಾನದ ಆಶಯಗಳು ಈಡೇರಬೇಕಾದರೆ ವಿದ್ಯಾರ್ಥಿಗಳು ಹೆಚ್ಚು ಜವಾಬ್ದಾರಿ ವಹಿಸಬೇಕು. ವಿದ್ಯಾರ್ಥಿಗಳು ಸಮಾಜದ ಬಗ್ಗೆ ಯೋಚಿಸುವುದಿಲ್ಲವೆಂದರೆ ಸಂವಿಧಾನದ ಆಸೆಗಳು ಈಡೇರುವುದಿಲ್ಲ. ಭಾರತಕ್ಕೆ 1950 ಜನವರಿ 26ರ ಸಂವಿಧಾನ ಜಾರಿಗೆ ಬಂತು. 121 ರಾಷ್ಟ್ರಗಳನ್ನು ಅಧ್ಯಯನ ಮಾಡಿ ರಚಿಸಿದ ಸಂವಿಧಾನವನ್ನು ತುಂಬಾ ಜಾಗರೂಕತೆಯಿಂದ ಜಾತ್ಯತೀತೆಯ ಆಧಾರದ ಮೇಲೆ, ಜನಸಂಖ್ಯೆ ಆಧಾರದ ಮೇಲೆ, ಜನರ ಆದಾಯದ ಮೇಲೆ ಸಂವಿಧಾನ ರಚನೆಯಾಗಿದೆ. ಯಥಾವತ್ತಾಗಿ ಜಾರಿಯಾದರೆ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹಾಗೂ ಸದೃಢವಾಗುತ್ತದೆ. ಎಂದು ಹೇಳಿದರು.
ಸಂವಿಧಾನ ಜಾರಿ ಮಾಡುವ ಜಾಗದಲ್ಲಿ ಸಂವಿಧಾನ ವಿರೋಧಿಗಳು ಕುಳಿತುಕೊಂಡರೆ ಸಂವಿಧಾನದ ಆಶಯಗಳು ಈಡೇರಲು ಹೇಗೆ ಸಾಧ್ಯ ಎಂದು ಅಂಬೇಡ್ಕರ್ ಹೇಳಿದ್ದಾರೆ. 43 ಕೋಟಿ ಜನಸಂಖ್ಯೆ ಬಡತನ ರೇಖೆಗಿಂತ ಕೆಳಗಿದ್ದಾರೆ. ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಆಗಿದೆ. ಸರ್ವರಿಗೂ ಸಮಾನತೆ ನೀಡುವುದೇ ಸಂವಿಧಾನ. ಎಂದರು.
ಸಂವಿಧಾನ ಒಂದೇ ವರ್ಗಕ್ಕೆ ಸೀಮಿತವಲ್ಲ ಸಂವಿಧಾನವೆಂದರೆ ಕೇವಲ ಮೀಸಲಾತಿಯಲ್ಲ. ಸಂವಿಧಾನ 374 ವಿಧಿಗಳಿಂದ ಕೂಡಿದೆ. ಮೀಸಲಾತಿ ಎಂದರೆ ಏನು? ಜಾತಿವಾರು ಜನಸಂಖ್ಯೆವಾರು ಸವಲತ್ತು ನೀಡುವುದೇ ಸಂವಿಧಾನ. ಸ್ವಾತಂತ್ರ್ಯ ಪೂರ್ವದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಅತ್ಯಂತ ಕಡಿಮೆ ಇತ್ತು. ಸಂವಿಧಾನ ಜಾರಿಯಾದ ನಂತರ ದೇಶದಲ್ಲಿ ವಿದ್ಯಾಭ್ಯಾಸದಲ್ಲಿ ಮಟ್ಟ ಹೆಚ್ಚಾಯಿತು.ಮಹಿಳೆಯರು ಹೆಚ್ಚು ಹೆಚ್ಚು ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿದರು.
ವಿದ್ಯಾರ್ಥಿಗಳು ಕಾಂಪಿಟೇಟಿವ್ ಪರೀಕ್ಷೆಗಳಲ್ಲಿ ಹೆಚ್ಚು ಭಾಗವಹಿಸಬೇಕು ಬ್ಯಾಂಕುಗಳಲ್ಲಿ ಕನ್ನಡಿಗರ ಸಂಖ್ಯೆ ಅತ್ಯಂತ ಕಡಿಮೆ ಇದೆ. ವಿದ್ಯಾರ್ಥಿಗಳು ಹೆಚ್ಚು ಬ್ಯಾಂಕಿಂಗ್ ಪರೀಕ್ಷೆಗಳನ್ನ ಬರೆಯಬೇಕು. ಇತ್ತೀಚಿನ ದಿನಗಳಲ್ಲಿ ನಡೆದ ಪರೀಕ್ಷೆಯಲ್ಲಿ ಸಾವಿರದ ಮುನ್ನೂರು ಜನ ಭಾಗವಹಿಸಿದ್ದರು. ಅದರಲ್ಲಿ ಕನ್ನಡಿಗರ ಸಂಖ್ಯೆ ಕೇವಲ 32.ಯುಪಿಎಸ್ಸಿ ಪರೀಕ್ಷೆಗಳಲ್ಲಿ ಕನ್ನಡಿಗರು ಹೆಚ್ಚು ಹೆಚ್ಚಾಗಿ ಭಾಗವಹಿಸಿದಾಗ ಮಾತ್ರ ಕೇಂದ್ರ ಸರ್ಕಾರದ ಸೇವೆಗಳಲ್ಲಿ ಸೇವೆ ಸಲ್ಲಿಸುವುದು ಸಾಧ್ಯವಾಗುತ್ತದೆ. ಎಂದು ಹೇಳಿದರು.
ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್ ಎನ್. ಮುಕುಂದರಾಜು ಅವರು ಮಾತನಾಡುತ್ತಾ ಸಾಹಿತ್ಯ ಅಕಾಡೆಮಿ ವತಿಯಿಂದ ಬಾಬಾ ಸಾಹೇಬರ ಬಗ್ಗೆ ಇರುವ ಸುಳ್ಳುಗಳನ್ನು ಬಗ್ಗೆ ಸತ್ಯವನ್ನು ಹೊರತರುವ ಪುಸ್ತಕ ಹೊರಬರುತ್ತಿದೆ ಎಂದರು. ಚಕೋರ ಸಾಹಿತ್ಯ ವೇದಿಕೆ ಪ್ರತಿ ತಾಲೂಕು, ಹೋಬಳಿ, ಹಳ್ಳಿಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಹಿತ್ಯ ಸಾಂಸ್ಕೃತಿಕ ಇತಿಹಾಸದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವುದೇ ಇದರ ಉದ್ದೇಶ ಎಂದು ನುಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಜೆ.ಎಸ್ ಕಾಲೇಜಿನ ಚೇರ್ಮನ್ ಪ್ರೊ. ಜಯರಾಮಶೆಟ್ಟಿ ಮಾಡಿದರು. ಲಕ್ಷ್ಮೀ ಶ್ರೀನಿವಾಸ ಅವರು ಆಶಯ ನುಡಿಗಳನ್ನು ನುಡಿದರು. ಜೆ. ಎಸ್. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರತಿಭಾ ಕಳಸರವರು ಅಧ್ಯಕ್ಷತೆ ವಹಿಸಿದ್ದರು.
ಬಿ. ಕೆ. ಕಿರಣ್ ನಿರೂಪಣೆ ಮಾಡಿದರು. ಸ್ವಾಗತ ಡಾ.ಪದ್ಮಾವತಿ, ವಂದನಾರ್ಪಣೆ ಶ್ರೀಮತಿ ಶಿಲ್ಪಶ್ರೀ ನೆರವೇರಿಸಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
