ಹೊಕ್ರಾಣಿ ಶ್ರೀ ಬೀರಲಿಂಗೇಶ್ವರ ಅದ್ದೂರಿ ಜಾತ್ರೆ
ಮುದ್ದೇಬಿಹಾಳ:- ತಾಲೂಕಿನ ಹೊಕ್ರಾಣಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವವು ಶ್ರೀ ವೇ.ಅಲ್ಲಮಪ್ರಭು ಸಂಗನಬಸಯ್ಯ ಕೊಡೆಕಲ್ಲಮಠ ಹಾಗೂ ಶ್ರೀ ವೇ ಕಾಡಯ್ಯ ತಪಸಯ್ಯ ಗುರುವಿನ ಅವರ ಸಾನಿಧ್ಯದಲ್ಲಿ ಮೇ 17 ಮತ್ತು 18 ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ನೆರವೇರುವುದು.
ಮೇ 17 ಶನಿವಾರದಂದು ಸಂಜೆ 7 ಗಂಟೆಗೆ ವಿಜಯಪುರದಿಂದ ಪಟ್ಟಣದ ಹೂವು ತರಲಾಗುವುದು. ಅಂದೇ ರಾತ್ರಿ 10 ಗಂಟೆಗೆ ಶ್ರೀ ಮಾಳಿಂಗೇಶ್ವರ ಗಾಯನ ಸಂಘ ಮುಗಳಿಹಾಳ ಮತ್ತು ಲಗಮಾದೇವಿ ಡೊಳ್ಳಿನ ಗಾಯನ ಸಂಘ ಪಡಗಾನೂರ ಅವರಿಂದ ವಾದಿ-ಪ್ರತಿವಾದಿ ಡೊಳ್ಳಿನ ಪದಗಳು ಜರುಗುವುದು. ಹಾಗೂ ಮೇ 18 ರವಿವಾರ ರಂದು ಮುಂಜಾನೆ 6 ಗಂಟೆಗೆ ಸಕಲ ವಾದ್ಯ ವೈಭವಗಳೊಂದಿಗೆ ಬಾದಾಮಿ ತಾಲೂಕಿನ ಗೋಪನಕೋಪ್ಪದ ಶ್ರೀ ಮಾಳಿಂಗೇಶ್ವರ ಮಹಿಳಾ ಡೊಳ್ಳಿನ ಕುಣಿತ ಕಲಾ ತಂಡದಿಂದ ವಾಲಗದೊಂದಿಗೆ ಜೋಡು ಪಲ್ಲಕ್ಕಿ ಗಂಗ ಸ್ಥಳಕ್ಕೆ ಹೋಗಿ ಬರುವುದು ಹಾಗೂ ಕಳಸದ ಮೆರವಣಿಗೆ ಆಗುವುದು. ಮುಂಜಾನೆ 10 ಗಂಟೆಗೆ ಹೂವು ಕಾಯಿ ಸದರ ಏರುವುದು. ನಂತರ ಕಳಸ ಶಿಖರಕ್ಕೆರುವುದು, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯುತ್ತದೆ. ಮಧ್ಯಾಹ್ನ 4 ಗಂಟೆಗೆ ಅಗ್ನಿಹೋಮ ಹಾಗೂ ಸಾಯಂಕಾಲ 6 ಗಂಟೆಗೆ ಮಹಾಂಕಾಳಿ ಆಟ. ಮತ್ತು ಅಂದೇ ಸಂಜೆ 8 ಗಂಟೆಯಿಂದ ಇಂಡಿ ತಾಲ್ಲೂಕಿನ ಹಂಚಿನಾಳದ ಶ್ರೀ ಮಾಳಿಂಗೇಶ್ವರ ಕಲಾ ಗಾಯನ ಸಂಘದಿಂದ ಮಾಯಮ್ಮನ ಹಬ್ಬದ ಆಟ ನಡೆಯುವುದು ಎಂದು ಜಾತ್ರಾ ಕಮೀಟಿಯು ಪ್ರಕಟಣೆಯಲ್ಲಿ ತಿಳಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
