21 ವಿದ್ಯಾರ್ಥಿಗಳ ನೃತ್ಯಾರೋಹಣ 

Nov 20, 2025 - 12:55
 0  3
21 ವಿದ್ಯಾರ್ಥಿಗಳ ನೃತ್ಯಾರೋಹಣ 

  ಬೆಂಗಳೂರು: ಕಲಾಗ್ರಣಿ ಪ್ರತಿಷ್ಠಾನದ ವತಿಯಿಂದ  ಮಲ್ಲೇಶ್ವರದ 14ನೇ ಅಡ್ಡರಸ್ತೆಯಲ್ಲಿಯ ಸೇವಾ ಸದನದಲ್ಲಿ ಭರತನಾಟ್ಯ ನೃತ್ಯಾರೋಹಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಘಟಂ ವಾದಕರಾದ ವಿದ್ವಾನ್ ಶ್ರೀ ದಯಾನಂದ ಮೋಹಿತೆ ಹಾಗೂ ಕಲಾವಿದರು ಸಸ್ಯಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ನೃತ್ಯಾರೋಹಣದ ಮೊದಲನೇ ಹಂತವಾದ ರಂಗಪ್ರವೇಶಕ್ಕೆ ಸಿದ್ಧರಾದ 21 ವಿದ್ಯಾರ್ಥಿಗಳು (ಕು. ಕೃತಿಲಯ, ಚಿನ್ಮಯಿ, ಮೋನಿಷಾ, ದಿಯಾ, ತಿಲಕ, ಸುಧೀಕ್ಷಾ, ರಚಿತಾ, ಲಿತಿಶ, ಲಿಶಿತ, ಹೀರ, ನಿಧಿ, ಸಿಂಚನ, ವರ್ಷಿಣಿ, ಪೂರ್ವಿಕ, ಹೇಮಾ ಹೆಚ್ ಗೌಡ, ದೀಪಿಕಾ, ಪೂಜಿತ, ಕೀರ್ತನ, ಹಂಸಪ್ರಿಯ, ಕೃತಿಕಾ ಹಾಗೂ ಶ್ರೀಮತಿ ಮಂಜುಳ) ಪ್ರಮಾಣ ಮಾಡಿ ತಮ್ಮ ಗುರುಗಳಿಂದ ಗೆಜ್ಜೆಯನ್ನು ಸ್ವೀಕರಿಸಿ ನೃತ್ಯ ಪ್ರದರ್ಶನ ನೀಡಿದರು. ಇದೇ  ಸಂದರ್ಭದಲ್ಲಿ ವಿ|| ಶ್ರೀ ದಯಾನಂದ ಮೋಹಿತೆ ರವರನ್ನು ಸನ್ಮಾನಿಸಲಾಯಿತು. 

ಹಿಮ್ಮೇಳದಲ್ಲಿ ಸಹಕರಿಸಿದ ಕಲಾವಿದರು : ವಿ|| ಶ್ರೀಮತಿ ರಾಧಿಕಾ ಪೊದುವಾಳ್ (ಗಾಯನ), ವಿ|| ಶ್ರೀಮತಿ ಸೋನಿಯಾ ಪೊದುವಾಳ್ (ನಟುವಾಂಗ), ವಿ|| ಶ್ರೀ  ಎಸ್.ವಿ. ಗಿರಿಧರ್ (ಮೃದಂಗ), ವಿ|| ಶ್ರೀ ನರಸಿಂಹಮೂರ್ತಿ (ಕೊಳಲು), ಶ್ರೀ ಮಿಥುನ್ ಶಕ್ತಿ (ವಿಶೇಷ ವಾದ್ಯ), ಶ್ರೀ ಅಚ್ಯುತ್ (ವೀಣಾ) ಸಹಕರಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456