ಕಡ್ಡಾಯವಾಗಿ ಹೆಲ್ಮೆಟ ಧರಿಸುವುದರ ಬಗ್ಗೆ ಸಂತೆಮರಹಳ್ಳಿ ಪೊಲೀಸ್ ಸಿಬ್ಬಂದಿ ವತಿಯಿಂದ ಅರಿವು ಕಾರ್ಯಕ್ರಮ
ಸಂತೆಮರಹಳ್ಳಿ: ಇಲ್ಲಿನ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಸಾಗರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಸೇರಿ ಸಂಚಾರಿ ಸುರಕ್ಷತೆಗೆ ಸಂಬಂಧಿಸಿದಂತೆ ಈ ವೇಳೆಯಲ್ಲಿ ಮಾತನಾಡಿ ಅಪಾಯದ ದೃಷ್ಟಿಯಿಂದ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಅರಿವು ಮೂಡಿಸಿದರು.
ಇದೇ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿದೆ ಬಂದ ಬೈಕ್ ಸವಾರರಿಗೆ ಮಕ್ಕಳ ಮುಕಾಂತರ ಗುಲಾಬಿ ಹೂವು ನೀಡಿ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಎ ಎಸ್ ಐ ಉಮೇಶ್,ರಮೇಶ್, ಎಂ ಆರ್ ಮಹದೇವಸ್ವಾಮಿ , ಹೇಮಂತ್ , ಯಶವಂತ್ ಕುಮಾರ್ , ಬಸವಣ್ಣ ಸೇರಿದಂತೆ ಇನ್ನಿತರ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
