ಕನ್ನಡ ಅಭಿಮಾನಿ ಬಳಗದ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

Jul 14, 2025 - 11:25
 0  17
ಕನ್ನಡ ಅಭಿಮಾನಿ ಬಳಗದ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ
ಕೆಜಿಎಫ್: ಕೆ ಜಿ ಎಫ್ ತಾಲ್ಲೂಕು ಕಮ್ಮಸಂದ್ರ ಗ್ರಾಮಪಂಚಾಯಿತಿ ವ್ಯಾಪ್ತಿಯ ಚನ್ನಪಲ್ಲಿ ಗ್ರಾಮದಲ್ಲಿ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಮತ್ತು ಅಂಗನವಾಡಿ ಕೇಂದ್ರಕ್ಕೆ ಕನ್ನಡಾಭಿಮಾನಿಗಳ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಭೇಟಿ ನೀಡಿ ಶಾಲೆಯ ಎಲ್ಲಾ ಮಕ್ಕಳಿಗೂ ಪುಸ್ತಕ, ಸ್ಲೇಟ್ ಮತ್ತು ಲೇಖನ ಸಾಮಗ್ರಿಗಳು ಉಚಿತವಾಗಿ ನೀಡಿದರು. ಶಾಲೆಯ ಆವರಣದಲ್ಲಿ ಸಾಕಷ್ಟು ಹುಲ್ಲು,ಕಸ, ಗಿಡ, ಕಡ್ಡಿಗಳು ಬೆಳೆದಿರುತ್ತದೆ ಇದರ ಮಧ್ಯೆ ಶಾಲೆಯಲ್ಲಿ ಸಿದ್ಧವಾಗುವ ಬಿಸಿಯೂಟದ ಅಡುಗೆ ಕೋಣೆಯ ಸುತ್ತಲು ಸಹ ಕಸ ಕಡ್ಡಿಗಳು ಮತ್ತು ಹುಲ್ಲು ಬೆಳೆದಿದ್ದು ಶಾಲಾ ಮೈದಾನವು ಸ್ವಚ್ಛವಾಗಿಲ್ಲದಿರುವುದನ್ನು ಕಂಡು ಸಂಘವು ಬೇಸರ ವ್ಯಕ್ತಪಡಿಸಿದೆ. ವಿಷಕಾರಿ ಹುಳು ಕ್ರಿಮಿಕೀಟಗಳಿಂದ ಮಕ್ಕಳನ್ನು ಕಾಪಾಡುವ ಹಿತ ದೃಷ್ಟಿಯಿಂದ ಶಾಲಾ ಆವರಣ ಹಾಗೂ ಮೈದಾನವು ಸ್ವಚ್ಛವಾಗಿಡುವುದು ಅನಿವಾರ್ಯ ಆಗಿರುತ್ತದೆ. ಇದರ ಬಗ್ಗೆ ಸದರಿ ಗ್ರಾಮ ಪಂಚಾಯಿತಿಯವರು ಆಗಲಿ ಅಥವಾ ಶಿಕ್ಷಣ ಇಲಾಖೆಯವರಗಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂದರ್ಭದಲ್ಲಿ ಸಂಘವು ಒತ್ತಾಯಿಸಿದರು. ಅಧ್ಯಕ್ಷರಾದ ಪ್ರದೀಪ್ ಸಿಂಗ್, ಸುಬ್ರಮಣಿ ಏನ್, ಶ್ರೀಕಾಂತ್, ಅಭಿಷೇಕ್, ಮಂಜುನಾಥ್. ಚರಣ್(ಶಶಿ) ಇನ್ನು ಇತರರು ಭಾಗವಯಿಸಿದ್ಧರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456