ಕನ್ನಡ ನಾಡು, ನುಡಿ, ಸಂಸ್ಕೃತಿ, ಉಳಿಸಿ ಬೆಳೆಸಲು ನಮ್ಮೆಲ್ಲರ ಹೊಣೆ: ಹೆಚ್. ರಾಮಚಂದ್ರಪ್ಪ
ಕೆಜಿಎಫ್: ಅರ್ಕ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ರೋಟರಿ ಸಂಸ್ಥೆ ಕೋಲಾರ ಸಿರಿಗನ್ನಡ ವೇದಿಕೆ ಕೋಲಾರ ಅಂಗನಿಕೇತನ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಅರ್ಕ ಇಂಟರ್ನ್ಯಾಷನಲ್ ಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆ.
ರಾಜ್ಯೋತ್ಸವದ ಅಂಗವಾಗಿ. ರೋಟರಿ ಸಂಸ್ಥೆ ಹಾಗೂ ಸಿರಿಗನ್ನಡ ವೇದಿಕೆ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳಿಗೆ ಬಹುಮಾನ ವಿತರಣೆ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷರು ಎಚ್. ರಾಮಚಂದ್ರಪ್ಪ ಮಾತನಾಡಿ ಕನ್ನಡ ನಾಡು, ನುಡಿ ನೆಲ, ಜಲ ,ಕಲೆ, ಸಾಹಿತ್ಯ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ ನಮ್ಮ ರಾಜ್ಯ ಭಾಷಾವಾರು ಪ್ರಾಂತ್ಯವಾರು ಹಂಚಿ ಹೋಗಿದ್ದನ್ನು ಒಗ್ಗೂಡಿಸುವಲ್ಲಿ 1956ಪ್ರಮುಖ ಪಾತ್ರವವನ್ನು ವಹಿಸಿದಂತಹ ಮಹನೀಯರನ್ನು ನಾವು ಇಂದು ನೆನಪು ಮಾಡಿಕೊಳ್ಳಬೇಕು.
ಹಾಗ ಇದ್ದಾಗ ಮಾತ್ರ ನಾವು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಸಾರ್ಥಕವಾಗುತ್ತಿದೆ ಎಂದು ತಿಳಿಸಿದರು.
ಹಾಗಾಗಿ ನಾವು ನಮ್ಮ ತಾಯಿ ಭಾಷೆಗೆ ಒತ್ತನ್ನು ನೀಡಬೇಕು. ಕನ್ನಡ ಭಾಷೆಯನ್ನ ಮಾತನಾಡುವುದು ಹಾಗೂ ಇತರರಿಗೂ ಕಲಿಸುವುದು ನಮ್ಮ ಅಧ್ಯಾ ಕರ್ತವ್ಯ ಆಗಬೇಕು. ಆಗ ಮಾತ್ರ ನಮ್ಮ ಕನ್ನಡ ಭಾಷೆ ಉಳಿಸಲು ಬೆಳೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅವರು ಅವರ ವೈಯಕ್ತಿಕವಾಗಿ ಕೆಲವು ನುಡಿಗಳನ್ನು ನೋಡಿದರು. ನಮ್ಮ ನೆರೆ ರಾಜ್ಯಗಳಾದ ತಮಿಳುನಾಡು. ಆಂಧ್ರ. ಕೇರಳ. ಗಳನ್ನು ಅವಲಂಬಿಸಿದಾಗ ಅಲ್ಲಿ ಭಾಷೆಯಲ್ಲಿರುವ ಆದ್ಯತೆಯನ್ನು ನಮ್ಮ ಕನ್ನಡ ಮಾತೃಭಾಷೆಗೆ ಏಕೆ ಆದ್ಯತೆ ನೀಡಬಾರದು ಎಂದು ಪ್ರಶ್ನಿಸಿದರು.
ಅರ್ಕ ಇಂಟರ್ನ್ಯಾಷನಲ್ ಶಾಲೆಯ ವ್ಯವಸ್ಥಾಪಕರಾದ ಡಾ. ವೇಣು ಗೋಪಾಲ್ ರವರು 70ನೇ ಕನ್ನಡ ರಾಜ್ಯೋತ್ಸವದ ಭಾಷೆಗಳನ್ನು ತಿಳಿಸುವ ಮೂಲಕ ಮಾತನಾಡಿದ ಅವರು ಕನ್ನಡ ನಾಡು ನುಡಿ ಜಲ ಹಾಗೂ ಸಂಸ್ಕೃತಿ ನಮ್ಮ ರಾಜ್ಯದ ಕನ್ನಡ ಭಾಷೆಯ ಇತಿಹಾಸದ ಬಗ್ಗೆ ಗುಣಗಾನ ಮಾಡಿದರು.
ನಾವು ನಮ್ಮ ಭಾಷೆಯನ್ನು ಗೌರವಿಸಬೇಕು ಇತರ ಭಾಷೆಯನ್ನು ನಾವು ಕಡೆಗಣಿಸಬಾರದು ಮೊದಲು ನಾವು ವ್ಯವಹಾರ ಮಾಡುವಾಗ ನಮ್ಮ ಮಾತೃಭಾಷೆಯಲ್ಲಿ ಮಾತನಾಡಬೇಕು.ಆಗ ಮಾತ್ರ ನಮ್ಮ ಭಾಷೆ ಉಳಿಯಲು ಸಾಧ್ಯ ಎಂದು ತಿಳಿಸಿದರು. ಈ ಒಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕೀರ್ತಿ ಮೇಡಂ ಹಾಗೂ ಆಡಳಿತ ಅಧಿಕಾರಿಗಳಾದ ರಾಮಕೃಷ್ಣರವರು. ರಾಜ್ಯೋತ್ಸವ ಆಚರಣೆಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ಶಿಕ್ಷಕರ
ವೃಂದದವರಿಗೂ ಹಾಗೂ ಜಲಜಾಕ್ಷಿ ಶಿಕ್ಷಕರು ಭಾಗವಹಿಸಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
