ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿಗಳ ನಡೆ ಶಾಲೆಗಳ ಕಡೆ

Jun 16, 2025 - 19:33
 0  6
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿಗಳ ನಡೆ ಶಾಲೆಗಳ ಕಡೆ

ಬಾಗೇಪಲ್ಲಿ: ಗಡಿಭಾಗದಲ್ಲಿ ವಿವಿಧ ಪ್ರಾಂತ್ಯಗಳ ಅನೇಕ ಭಾಷೆಗಳ ಜನರು ಇದ್ದಾರೆ ಅದರೆ ಮುಖ್ಯವಾಗಿ ಮತೃಭಾಷೆ ಕನ್ನಡ ಆರಾಧಿಸೋಣ ಎಲ್ಲಾ ಭಾಷೆಗಳನ್ನು ಗೌರವಿಸೋಣ ಶಾಲಾ ಮುಖ್ಯ ಶಿಕ್ಷಕರಾದ ವೆಂಕಟರಡ್ಡಿ ಎಂದು ನುಡಿದರು.
 
ತಾಲ್ಲೂಕಿನ ಆಚೇಪಲ್ಲಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಸಾಹಿತಿಗಳ ನಡೆ ಶಾಲೆಗಳ ಕಡೆ ಕಾರ್ಯಕ್ರಮ ಅಂಗವಾಗಿ ಗಿಡಕ್ಕೆ ನೀರೆಯುವುದರಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಗಡಿನಾಡಿನಲ್ಲಿ ಹೆಚ್ಚು ತೆಲುಗಿನ ಪ್ರಾಬಲ್ಯ ವಿದ್ದರೂ ಶಾಲಾಮಕ್ಕಳು ಕನ್ನಡ ಓದು, ಬರೆಯಲು ಚನ್ನಾಗಿ ಕಲಿತು ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು,ತಂದೆ ತಾಯಿಯರ ಕನಸು ನನಸಾಗಿಸಬೇಕೆಂದು ಮಕ್ಕಳಿಗೆ ಕಲಿಕಾ ಸಾಹಿತ್ಯದ ಬಿನ್ನಾರಾಶಿಯ ಕವನವನ್ನು ಹಾಡಿ ಗಣಿತ ಕಬ್ಬಿಣದ ಕಡಲೆಯಲ್ಲ ಸಾಹಿತ್ಯದಲ್ಲಿ ತತ್ವ ತುಂಬಿದ ಕವನಗಳನ್ನು ರಚಿಸಿ ತರಗತಿಯಲ್ಲಿ ಕ್ಲಿಷ್ಟ ವಿಷಯಗಳನ್ನು ಸುಲಲಿತವಾಗಿ ಹೇಳಿಕೊಡುವ ಕೌಶಲ್ಯ ತಿಳಿಸಿಕೊಟ್ಟರು.

ನಿವೃತ್ತ ಶಿಕ್ಷಕರು ಗಾಯಕರು ಆದ ಶ್ರೀ ಪಿ ಜಿ ಶಿವಶಂಕರಾಚಾರಿ ರವರು ತಮ್ಮ ಸುಮಧುರವಾದ ದೇಶಭಕ್ತಿ ಗೀತೆ ಗಾಯನದೊಂದಿಗೆ ಪ್ರಾರಂಭಿಸಿ ಮಕ್ಕಳಲ್ಲಿ ನಾಡು ನುಡಿ ಭಾಷೆಯಬಗ್ಗೆ ಅರಿವು ಮೂಡಿಸಿದರು.

ಶಾಲಾಮಕ್ಕಳಿಗೆ ಲೇಖನಿ ಸಿಹಿ ಹಂಚಿ ಶಿಕ್ಷಕರಿಗೆ ವೀರ ರಾಣಿ ಅಬ್ಬಕ್ಕ ಪುಸ್ತಕ ಹಾಗೂ ರಾಧಾಮಣಿ ಯವರು ರಚಿಸಿರುವ ಕಲಿಕಾ ದೀವಿಗೆ ಪುಸ್ತಕಗಳನ್ನು  ಶೈಕ್ಷಣಿಕ ಪ್ರಗತಿಗೆ ಅನುಕೂಲ ವಾಗಲು ವಿತರಿಸಲಾಯಿತು.
 
ಈ ಸಂದರ್ಭದಲ್ಲಿ ಕ,ಸಾ,ಪ ಅಧ್ಯಕ್ಷರಾದ ಶ್ರೀ ಚಿಕ್ಕ ಕೈವಾರಾಮಯ್ಯ,ಅ, ಭಾ, ಸಾ, ಪ ಅಧ್ಯಕ್ಷರಾದ ಶ್ರೀಮತಿ ರಾಧಾಮಣಿ,ಕೋಶಧ್ಯಕ್ಷರು /ಕಾರ್ಯದರ್ಶಿ ಗಳಾದ ಶ್ರೀಮತಿ ಸುಕನ್ಯ ಮೇಡಂ ದೇಶಭಕ್ತಿ ಗೀತೆಹಾಡಿದರು ನಿವೃತ್ತ ಶಿಕ್ಷಕರಾದ  ರಾಮಕೃಷ್ಣಾರೆಡ್ಡಿರವರು ಮಕ್ಕಳಿಗೆ ಗೀತೆಗಳನ್ನು ಹೇಳಿಕೊಟ್ಟರು ಅಧ್ಯಕ್ಷರು  ವೆಂಕಟರೆಡ್ಡಿ  ಮಾತನಾಡಿದರು. ಶಿಕ್ಷರಾದ  ವರುಣ್ ಕಶ್ಯಪ್  ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು...

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456