ಕಾಳಿದಾಸನ ಮೇಘದೂತ ಒಂದು ವಿನೂತನ ಪ್ರೇಮ ಕಾವ್ಯ: ಪ್ರೊ. ನಾರಾಯಣ ಘಟ್ಟ
ಮೇಘದೂತ ಕಾಳಿದಾಸನ ಅದ್ಭುತ ಕಾವ್ಯಗಳಲ್ಲಿ ಒಂದು. ಪ್ರಕೃತಿ ಮತ್ತು ಹೆಣ್ಣಿನ ವರ್ಣನೆಯನ್ನು ಕಾಳಿದಾಸ ತನ್ನ ಕಾವ್ಯದಲ್ಲಿ ಮನೋಜ್ಞವಾಗಿ ಬಿಂಬಿಸಿದ್ದಾನೆ. ಕಾಲೇಜು ವಿದ್ಯಾರ್ಥಿಗಳು ಮೇಘದೂತ ಶಾಕುಂತಲ, ಕುಮಾರ ಸಂಭವ ಕಾವ್ಯಗಳನ್ನು ಓದಿ ತಮ್ಮ ಜೀವನದಲ್ಲಿ ಶುದ್ಧ ಪ್ರೀತಿಯನ್ನ ಅಳವಡಿಸಿಕೊಳ್ಳಬೇಕು. ಕಲ್ಮಶವಿಲ್ಲದ ಪ್ರೀತಿ, ಸಮಾಜದ ಸ್ವಾಸ್ಥ್ಯವನ್ನು ಕಾದುಕೊಳ್ಳುತ್ತದೆ. ಕಾಳಿದಾಸನು ಪ್ರಪಂಚದ ಅತ್ಯುತ್ತಮ ಕಾವ್ಯ ರಚನೆಯಲ್ಲಿ ಒಬ್ಬನಾಗಿದ್ದಾನೆ . ಇಂತಹ ಕಾವ್ಯಗಳನ್ನ ವಿದ್ಯಾರ್ಥಿಗಳು ತಮ್ಮ ಪಠ್ಯಗಳ ಜೊತೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಯಾವುದೇ ಭಾಷೆಯನ್ನು ಕಲಿತರು ತಮ್ಮ ಮಾತೃಭಾಷೆಯಲ್ಲಿ ಕಲಿತಂತಹ ಅನುಭವ ಆಗುವುದಿಲ್ಲ. ಕನ್ನಡಿಗರು ಬೇರೆ ಭಾಷೆಗಳನ್ನು ಕಲಿಯಬೇಡಿ ಎನ್ನುವ ಮನೋಭಾವದವರಲ್ಲ ಆದರೆ ಮಾತೃಭಾಷೆಯನ್ನೂ ಎಂದೂ ಮರೆಯಬಾರದೆನ್ನುವ ಹಾಗೂ ಕಲಿಯಲೇಬೇಕಾದ ಅವಶ್ಯಕತೆ ಇದೆ. ಭಾಷೆ ಉಳಿದರೆ ನಾಡು ಉಳಿದಿತು, ನಾಡು ಉಳಿದರೆ ಸಂಸ್ಕತಿ ಉಳಿದೀತು. ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಸೀಮಿತ ವಿಷಯಗಳಿಗೆ ಬಳಸಿದರೆ ಒಳ್ಳೆಯದು ಎಂದು ಪ್ರೊ. ನಾರಾಯಣಘಟ್ಟ ರವರು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಶ್ರೀಮತಿ ಗಂಗಮ್ಮ ಶ್ರೀ ತಿಮ್ಮಯ್ಯ ಸಮೂಹ (ಜಿಟಿಇಟಿ) ಸಂಸ್ಥೆಗಳು. ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಏರ್ಪಡಿಸಿದ್ದ ಚಕೋರ ಸಾಹಿತ್ಯ ಉಪನ್ಯಾಸದಲ್ಲಿ "ಮೇಘದೂತ ವಿವಿಧ ಪಠ್ಯಗಳು" ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ತಿಳಿಸಿದರು .
ಕಾರ್ಯಕ್ರಮದ ಕಾಲೇಜಿನ ಮುಖ್ಯ ಆಡಳಿತ ಅಧಿಕಾರಿ ಡಾ. ಬಿ. ಜಿ. ಸತ್ಯಪ್ರಸಾದ್ ವಹಿಸಿಕೊಂಡಿದ್ದರು. ಇಂತಹ ಉತ್ತಮ ಕಾರ್ಯಕ್ಕೆ ನಮ್ಮ ಕಾಲೇಜು ಎಂದು ಮುಂದೆ ಬಂದಿದೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಮ್ಮ ಪ್ರೋತ್ಸಾಹ ಎಂದು ಇರುವುದು ಇಂತಹ ಉತ್ತಮ ಕಾರ್ಯವನ್ನು ಮಾಡುತ್ತಿರುವ ಅಕಾಡೆಮಿಗೆ ಅವರು ಅಭಿನಂದನೆ ಸಲ್ಲಿಸಿದರು.
ಬೆಂಗಳೂರು ನಗರ ಉತ್ತರ ಜಿಲ್ಲೆಯ ಚಕೋರ ಸಂಚಾಲಕರಾದ ಶ್ರೀ ಲಕ್ಷ್ಮಿ ಶ್ರೀನಿವಾಸ್ ರವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಚಕೋರ ದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಹಾಗೂ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮನಸ್ಸನ್ನು ಮುದಗೊಳಿಸುವ ಮತ್ತು ಜ್ಞಾನಾಭಿವೃದ್ಧಿಗೆ ಸಹಕಾರಿಯಾಗುತ್ತದೆ. ಅಲ್ಲದೇ ವಿದ್ಯಾರ್ಥಿಗಳು ಪಠ್ಯಗಳ ಜೊತೆ ಇಂಥ ವಿಷಯಗಳನ್ನು ಅರಿತಾಗ ಅವರ ಮನಸ್ಸು ಉಲ್ಲಾಸ ಗೊಳ್ಳುತ್ತದೆ ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಚಿಕ್ಕಲಿಂಗಯ್ಯ ಬಿ.ಜಿ. ರವರು ಸ್ವಾಗತ ಕೋರಿದರು. ಸಿಇಓ. ಶ್ರೀ ಆರ್. ಪ್ರಮೋದ್ ಡಾ. ಅನುಸೂಯ ಬಿ. ಎಂ. ನಿರ್ದೇಶಕರು ಎಂಬಿಎ ಮುಖ್ಯಸ್ಥರು, ನಿವೃತ್ತ ನಿರ್ದೇಶಕರಾದ ಡಾ. ದೀಪಿಕಾ. ಎಂ. ರವರು ಮುಖ್ಯ ಅತಿಥಿಗಳಾಗಿದ್ದರು. ಗುರುಪ್ರಸಾದ್ ರವರು ಕಾರ್ಯಕ್ರಮದ ನಿರ್ವಹಣೆ ವಹಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
