ಕೆಜಿಎಫ್ ನಗರಸಭೆಗೆ ಪೌರಾಡಳಿತ ಹಾಗೂ ಹಜ್ ಸಚಿವರ ಭೇಟಿ
ಕೆಜಿಎಫ್: ನಗರಕ್ಕೆ ಪೌರಾಡಳಿತ ಹಾಗೂ ಹಜ್ ರಾಜ್ಯ ಸಚಿವರು ರಹೀಮ್ ಖಾನ್ ಭೇಟಿನೀಡಿದರು.
ಇತ್ತೀಚಿಗೆ ನಗರದಲ್ಲಿರುವ ಹುಲ್ಲು ಮಾರುಕಟ್ಟೆಯನ್ನು ನಗರಸಭೆಯಿಂದ ಯಾವುದೇ ನೋಟಿಸ್ ನೀಡದೆ ಕಾನೂನು ಬಾಹಿರವಾಗಿ 140 ಅಂಗಡಿಗಳನ್ನು ತೆರೆವುಗೊಳಿಸಿದ್ದರು.
ಈ ನಿಟ್ಟಿನಲ್ಲಿ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಅಲ್ಲೇ ಮಧ್ಯಾಹ್ನದ ಊಟ ಸವಿದರು.
ನಂತರ ನಗರಸಭೆಯಿಂದ ನಿರ್ಮಾಣಗೊಳ್ಳುತ್ತಿರುವ ರಾಜೇಶ್ ಕ್ಯಾಂಪ್ನಲ್ಲಿರುವ ಲೇಔಟ್ ಕಾಮಗಾರಿ ವೀಕ್ಷಣೆ ಮಾಡಿದರು. ನಂತರ ಮಾತನಾಡಿದ ಅವರು ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿಯ ವಿಶೇಷ ನಿಧಿಯಿಂದ 50 ಕೋಟಿ ಬಿಡುಗಡೆಗೊಳಿಸಲಾಗಿದೆ. ಹುಲ್ಲು ಮಾರುಕಟ್ಟೆಯಲ್ಲಿ ಸುಸರ್ಜಿತವಾದ ಮಾರ್ಕೆಟ್ ನಿರ್ಮಿಸಿ ಕೊಡಲು ಸರ್ಕಾರ ಸಿದ್ಧವಾಗಿದೆ.
ನಗರಸಭೆಯ ಹಳೆ ಅಂಗಡಿಗಳನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಿ ಕೊಡುವುದು. ಎಂಜಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶ ಎಂದರು. ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಇಲ್ಲಿರುವ ಸಮಸ್ಯೆಗಳ ಬಗ್ಗೆ ವರದಿ ಕೊಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಬೀದಿ ಲೈಟ್ಗಳ ನಿರ್ವಹಣೆಗೆ 3.50 ಲಕ್ಷ ನೀಡಲಾಗುತ್ತಿದೆ ಇದರ ಬಗ್ಗೆ ಅಮೃತ್ ಸಿಟಿ ಯೋಜನೆ ಅಡಿಯಲ್ಲಿ ಹಲವಾರು ರಸ್ತೆಗಳು ಹಾಲಾಗಿದ್ದು, ಅದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಸಾರ್ವಜನಿಕರಿಗೆ ಇದುವರೆಗೂ ಕುಡಿಯುವ ನೀರು ಒದಗಿಸಿಲ್ಲ. ನಗರದಲ್ಲಿ ಹಲವು ಪಾರ್ಕ್ಗಳು ನಿರ್ವಹಣೆಗಳಿಲ್ಲ. ಮೈನಿಂಗ್ ಪ್ರದೇಶದಲ್ಲಿ ಈಗಲೂ ಬಯಲು ಶೌಚಾಲಯವನ್ನು ಅವಲಂಬಿಸಿದ್ದಾರೆ. ಇದರ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಿರೆಂದು ಮಾಧ್ಯಮದವರು ಪ್ರಶ್ನಿಸಿದರು.
ಸಚಿವರು ಪ್ರತಿಕ್ರಿಯಿಸಿ ನೀವು ನೀಡಿರುವ ಎಲ್ಲಾ ಮಾಹಿತಿಗಳನ್ನು ಅಧಿಕಾರಿಗಳ ಹತ್ತಿರ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದರು. ಈ ಸಂದರ್ಭದಲ್ಲಿ ಮಾನ್ಯ ಶಾಸಕಿ ರೂಪಕಲಾ ಶಶಿಧರ್. ತಹಶೀಲ್ದಾರ್. ಎಚ್. ಜೆ. ಭರತ್ ನಗರಸಭೆ.ಪೌರಾಯುಕ್ತರು. ಶ್ರೀ ಶ್ರೀಧರ್. ಅಧಿಕಾರಿಗಳಾದ ಅಂಬಿಕಾ. ಕೆಡಿಎ ಅಧ್ಯಕ್ಷರು. ಶ್ರೀನಿವಾಸನ್. ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
