ಕೋಮುಲ್ ಆಡಳಿತ ಮಂಡಳಿಗೆ ಶಾಸಕ ಕೆ.ವೈ.ನಂಜೇಗೌಡ ಅವಿರೋಧ ಆಯ್ಕೆ: ಹುಣಸಿ ಕೋಟೆ ಗ್ರಾಮಸ್ಥರಿಂದ ಶುಭ ಹಾರೈಕೆ
ಸುದ್ದಿಯ ವಿವರ: ಕೋಮುಲ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಸತತವಾಗಿ ಮೂರನೇ ಬಾರಿಗೆ ಹ್ಯಾಟ್ರಿಕ್ ಗೆಲವು ಸಾಧಿಸಿದ ಶಾಸಕ ಕೆ.ವೈ ನಂಜೇಗೌಡರಿಗೆ ಹುಣಸಿ ಕೋಟೆ ಗ್ರಾಮಸ್ಥರು ಶುಭ ಕೋರಿ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರು ಹುಣಸಿಕೋಟೆ ವಿನೋದ್ ಗೌಡ ಮಾತನಾಡಿ ಸೋಲಿಲ್ಲದ ಸರದಾರಾಗಿರುವ ಗೌರವಾನ್ವಿತ ಶಾಸಕರಾದ ಕೆ.ವೈ.ನಂಜೇಗೌಡರು ಅವಿರೋಧವಾಗಿ ಆಯ್ಕೆಯಾಗಿದ್ದು,ಅವರ ಗೆಲವು ಸಂತೋಷ ತಂದಿದ್ದು, ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಲ ಬಂದಿದೆ,ಕೋಮುಲ್ ನಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಗೆಲವು ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ನಾರಾಯಣಸ್ವಾಮಿ, ಎಚ್ ಕೆ ಮುನಿಯಪ್ಪ, ಹನುಮಪ್ಪ, ಶ್ರೀ ರಾಮಪ್ಪ, ಮುನಿರಾಜು, ರಮೇಶ್, ಚಲಪತಿ, ಸುನಿಲ್ ,ಚೇತನ್ ಹಾಗೂ ಹುಣಸಿಕೋಟೆ ಗ್ರಾಮಸ್ಥರು ಇದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
