ಗಬ್ಬು ನಾರುತ್ತಿರುವ ನಗರಸಭೆ ಬಸ್ ನಿಲ್ದಾಣ

Aug 13, 2025 - 17:03
 0  11
ಗಬ್ಬು ನಾರುತ್ತಿರುವ ನಗರಸಭೆ ಬಸ್ ನಿಲ್ದಾಣ

ಕೆಜಿಎಫ್: ಕೆಜಿಎಫ್ ನಗರಕ್ಕೆ ಇರುವುದು ಒಂದೇ ಒಂದು ಬಸ್ ನಿಲ್ದಾಣ ಅದು ನಗರಸಭೆ ಕುವೆಂಪು ಬಸ್ ನಿಲ್ದಾಣ ಎಲ್ಲಿ ನೋಡಿದರೂ ಕಸದ ರಾಶಿಗಳನ್ನು ಒಂದು ವಾರದಿಂದ ಈಚೆಗೆ ಕಸವನ್ನು ವಿಲೇವಾರಿ ಮಾಡದೆ ಸಂಜೆ ಕಸವನ್ನು ವಿಲೇವಾರಿ ಮಾಡುತ್ತಾರೆ. ದಿನನಿತ್ಯ ಸಾವಿರಾರು ಪ್ರಯಾಣಿಕರು. ಬರುವ ಓಡಾಟ ಮಾಡುವ ಜಾಗ. ಬೆಳಗ್ಗೆ ಬಂದು ಪೌರ ಕಾರ್ಮಿಕರು ಸ್ವಚ್ಛತೆ ಮಾಡಬೇಕು. ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸುವುದಿಲ್ಲ ಏಕೆ ? ಪ್ರಯಾಣಿಕರು ಕುಳಿತುಕೊಳ್ಳಲು ಆಸನಗಳನ್ನು ವ್ಯವಸ್ಥೆ ಮಾಡಿದ್ದು, ಆಸನಗಳ ಹಿಂಭಾಗ ರಾಶಿಗಟ್ಟಲೆ ಕಸ. ನೀರು ಸಂಗ್ರಹಣೆ . ವಿಧಿ ಇಲ್ಲದೆ ಅಲ್ಲೇ ಕುಳಿತ ಪ್ರಯಾಣಿಕರು. ಹಲವಾರು ಸಲ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದರು. ಯಾವುದೇ ಪ್ರಯೋಜನವಿಲ್ಲ. ಹಲವಾರು ಸಲ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು. ಮುನಿಸ್ವಾಮಿ. ನಗರಸಭೆ ಅಧ್ಯಕ್ಷರು ಇಂದಿರಾ ಗಾಂಧಿ. ಪೌರಾಯುಕ್ತರು. ಮಂಜುನಾಥ್ ಬೇಟಿ ನೀಡಿ. ಬಸ್ ನಿಲ್ದಾಣ ನಿರ್ವಹಣೆಗೆ ಒಬ್ಬ ಕಾರ್ಮಿಕರನ್ನು ನೇಮಿಸುತ್ತಾರೆ. ವಾರಕ್ಕೆ ಒಂದು ಬಾರಿ ಬಸ್ ನಿಲ್ದಾಣವನ್ನು ನೀರಿನಿಂದ ಸ್ವಚ್ಛತೆ ಮಾಡುವುದಾಗಿ ತಿಳಿಸಿದರು. ಆದರೆ ಇದು ಯಾವುದೂ ಜಾರಿಗೆ ಬಂದಿಲ್ಲ. ಅಧಿಕಾರಿಗಳು ಈ ಕಡೆ ಬರ್ತಾರೆ ಆ ಕಡೆ ಹೋಗುತ್ತಾರೆ ಆ ರೀತಿ ಆಗಿದೆ ನಿಲ್ದಾಣದ ಪರಿಸ್ಥಿತಿ.
 ಯುಜಿಡಿ ಚರಂಡಿಗಳ ನಿರ್ಮಾಣ. ಗಟ್ಟಿಯಾಗಿದ್ದ ಕಾಂಗ್ರೆಟ್ ಅನ್ನು ಆಗಿದು ಗುಣಮಟ್ಟ ಇಲ್ಲದ ಸಿಮೆಂಟ್ ಕಾಂಗ್ರೆಟ್ ಅನ್ನು ಹಾಕಲಾಗಿದೆ.

 ಸ್ಥಳೀಯ ವ್ಯಾಪಾರಿಗಳು ಮತ್ತು ಸಾರ್ವಜನಿಕರು ನಗರಸಭೆ ಕಾರ್ಯವೈಕರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಇತ್ತ ಅಧಿಕಾರಿಗಳು ಗಮನಹರಿಸಿ ಬಸ್ ನಿಲ್ದಾಣವನ್ನು ಸ್ವಚ್ಛತೆ ಮಾಡಿ ಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ಬಸ್ ನಿಲ್ದಾಣವನ್ನು ಐಟೆಕ್ ಬಸ್ ನಿಲ್ದಾಣ ಮಾಡಲು ಈಗಾಗಲೇ ನಗರಸಭೆ ವತಿಯಿಂದ ಎರಡು ಕೋಟಿ ರೂ ಅನುದಾನವನ್ನು ಮೀಸಲಿಟ್ಟಿದ್ದಾರೆ ಎಂದು ತಿಳಿಸುತ್ತಾರೆ. 

ಆದಷ್ಟು ಬೇಗ  ಬಸ್ ನಿಲ್ದಾಣಕ್ಕೆ ಕಾಯ ಕಲ್ಪ ಕಲ್ಪಿಸಿ ಕೊಡಬೇಕು ಎಂದು ಶಾಲಾ ಕಾಲೇಜಿನ ಮಕ್ಕಳು ಶಾಲೆಯ ವಿದ್ಯಾರ್ಥಿಗಳ ಒತ್ತಾಯಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456