ಗೌತಮ ಬುದ್ದನ ಮಾರ್ಗ, ಆದರ್ಶ ಪಾಲನೆ ಅವಶ್ಯಕ : ಎಸ್ಪಿ ಶಿವಾಂಶು ರಜಪೂತ್

Mar 4, 2026 - 13:17
 0  7
ಗೌತಮ ಬುದ್ದನ ಮಾರ್ಗ, ಆದರ್ಶ ಪಾಲನೆ ಅವಶ್ಯಕ : ಎಸ್ಪಿ ಶಿವಾಂಶು ರಜಪೂತ್

     ಕೆಜಿಎಫ್., ಮಾ. 4: ಭಗವಾನ್ ಗೌತಮ ಬುದ್ದನ ಜೀವನದ ಮಾರ್ಗ, ಸಾಧನೆ, ಆದರ್ಶಗಳನ್ನು ಇಂದಿನ ಸಮಾಜದಲ್ಲಿ ಅಳವಡಿಸಿಕೊಂಡು ಮುನ್ನಡೆಯುವುದು ಬಹಳ ಅವಶ್ಯಕವಿದೆಯೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಅವರು ಅಭಿಪ್ರಾಯಪಟ್ಟರು. 
ಅವರು ಕೆಜಿಎಫ್ ನಗರದ ಅಶೋಕ ದಮ್ಮ ದೂತ ಬುದ್ದ ಸಂಘದಲ್ಲಿ ಏರ್ಪಡಿಸಿದ್ದ ಧಮ್ಮ ಪಾದ ಉತ್ಸವ ಹಾಗೂ ಬುದ್ದ ಹುಣ್ಣಿಮೆಯ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗೌತಮ ಬುದ್ದನ ಧರ್ಮಗಳ ಕುರಿತು ಮಾತನಾಡಿದರು. 
ಬುದ್ದರ ಬೋಧನೆ, ಆದರ್ಶ, ತತ್ವಗಳನ್ನು ಇಂದಿಗೂ ಜನರು ಅನುಸರಿಸುತ್ತಿದ್ದಾರೆ. ಯಾಕೆಂದರೆ ಅವರ ಬೋಧನೆಗಳು ಜನರ ಜೀವನವನ್ನು ಸಕಾರಾತ್ಮಕ ಮಾರ್ಗದಲ್ಲಿ ಬದಲಾಯಿಸುತ್ತದೆ. ಗೌತಮ ಬುದ್ಧರ ಬೋಧನೆಗಳು ಕೇವಲ ಧಾರ್ಮಿಕ ಪಠ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಈ ಬೋಧನೆಗಳು ಪ್ರತಿಯೊಬ್ಬ ವ್ಯಕ್ತಿಗೂ ಎಲ್ಲಾ ಸಮಯದಲ್ಲೂ, ಎಲ್ಲಾ ಕಾಲದಲ್ಲೂ ಪ್ರಸ್ತುತವಾಗಿರುತ್ತದೆ. ಗೌತಮ ಬುದ್ದರು ಮಾನವನಿಗೆ ಪ್ರತಿಯೊಂದು ಸಂದರ್ಭದಲ್ಲೂ ಬೇಕಾಗುವಂತಹ ಅತ್ಯುನ್ನತ ಮಹತ್ತರವಾದ  ಬೋಧನೆಯನ್ನು ನೀಡಿದ್ದಾರೆಂದು ಎಸ್ಪಿ ಶಿವಾಂಶು ರಜಪೂತ್ ವಿವರಿಸಿದರು.


ಗೌತಮ ಬುದ್ದನು ಬೌದ್ದ ಧರ್ಮದ ಸಂಸ್ಥಾಪಕರಾಗಿದ್ದು, ದು:ಖ ನಿವಾರಣೆಗೆ ಮಾರ್ಗ ಕಂಡು ಕೊಂಡವರು, ಅವರ ಪ್ರಮುಖ ಸಾಧನೆಗಳೆಂದರೆ, ನಾಲ್ಕು ಆರ್ಯ ಸತ್ಯಗಳನ್ನು ಕಂಡು ಹಿಡಿದದ್ದು, ದು:ಖದ ಕಾರಣಗಳನ್ನು ವಿವರಿಸಿದ್ದು, ಮತ್ತು ಜ್ಞಾನೋದಯಕ್ಕೆ ಕಾರಣವಾಗುವ ಅಷ್ಟಾಂಗಿಕ ಮಾರ್ಗವನ್ನು ಬೋಧಿಸಿರುವುದು ಬಹಳ ಮುಖ್ಯವಾದುದೆಂದು ಎಸ್ಪಿ ಶಿವಾಂಶು ರಜಪೂತ್ ವಿವರಿಸಿದರು. 
ಬುದ್ದ ಗುರುಗಳಾದ ಬೆಂಗಳೂರು ಮಹಾಬೋಧಿ ಸಮಾಜದ ಭಂತೇಜಿ ಧಮ್ಮಚಿತ್ತ ಮಹಾತೀರ, ಕಾರ್ಯದರ್ಶಿ ಭಂತೇಜಿ ಜೀನವಾಸಂ ಬಿಕ್ಕು, ಅಶೋಕ ದಮ್ಮ ದತ್ತ ಬೌದ್ದ ಸಮಾಜದ ಕಾರ್ಯದರ್ಶಿ ಭಂತೇಜಿ ಖೇಮಿಂಡೋ ಅವರುಗಳ ಸಾನ್ನಿದ್ಯದಲ್ಲಿ ಹಲವಾರು ಭಂತೇಜಿಗಳು, ಉಪಾಸಕರು ಮತ್ತು ಉಪಾಸಕಿಯರು ಭಕ್ತಿಭಾವದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಅವರುಗಳಿಂದ ಪ್ರವಚನ, ಆರ್ಶೀವಚನವಾಯಿತು. 
ಹಿರಿಯ ಸಾಹಿತಿ, ಅಂಕಣಕಾರ ಎನ್.ಆರ್.ಪುರುಷೋತ್ತಮ ಅವರು ಬುದ್ದನ ಧರ್ಮದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ  ಖ್ಯಾತ ವೈದ್ಯರಾದ  ಡಾ|| ಪೂರ್ಣೇಶನ್ರಾಜು. ಡಾ|| ರಮಣಿ, ಡಾ|| ಕಾರ್ತಿಕ್, ಡಾ|| ಆರ್. ಪ್ರಭುರಾಮ್, ಪ್ರತಾಪ್ಕುಮಾರ್, ಜಯಪ್ರಕಾಶ್, ಚಂದ್ರಶೇಖರ್, ಮುರಳಿರಾಜ್, ಅನುಪ್ರಭ, ಸೇರಿದಂತೆ ಮತ್ತಿತರ ಹಲವಾರು ಗಣ್ಯರು ಉಪಸ್ಥಿತರಿದ್ದರು. 
ಶ್ರೀ ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷೆ ವಿ.ಮುಕ್ತಾಂಬ ವೀರರಾಜ್ ಅವರ ಕುಟುಂಬದಿAದ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮವು ವಿಶ್ವ ಶಾಂತಿಯ ಪ್ರಾರ್ಥನೆಯೊಂದಿಗೆ ಸಮಾಪ್ತಿಯಾಯಿತು.
ಚಿತ್ರಶೀರ್ಷಿಕೆ: 04ಕೆಜಿಎಫ್01 ಅಶೋಕ ದಮ್ಮ ದೂತ ಬುದ್ದ ಸಂಘದಲ್ಲಿ ಎಸ್ಪಿ ಶಿವಾಂಶು ರಜಪೂತ್, ಡಾ|| ಪೂರ್ಣೇಶನ್ರಾಜು, ಡಾ|| ಪ್ರಭುರಾಂ ಇತರರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456