ಗ್ರಾಮೀಣ ಪ್ರದೇಶದಲ್ಲಿ ವಿನೂತನವಾದ ಅವ್ವನ ಹಬ್ಬ ಕಾರ್ಯಕ್ರಮ ನಡೆಯಿತು
ಚನ್ನರಾಯಪಟ್ಟಣ ತಾಲೂಕು: ಬಾಗೂರು ಹೋಬಳಿ ಬಸವನಪುರ ಗ್ರಾಮದಲ್ಲೊಂದು ಅವ್ವನ ಹಬ್ಬ ಎಂಬ ವಿನೂತನ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ.ಅವ್ವನ ಹಬ್ಬ ಗ್ರಾಮೀಣ ಪ್ರದೇಶದಲ್ಲಿ ವಿನೂತನ ಕಾರ್ಯಕ್ರಮದಲ್ಲಿ ತಾಯಿ ಅಂದರೆ ಏನು ಮಕ್ಕಳನ್ನು ಸಾಕಲು ಏನೆಲ್ಲಾ ಕಷ್ಟ ಪಡುತ್ತಾಳೆ ಎಂಬ ವಿಷಯವಾಗಿ ತನ್ನ ಹೆತ್ತ ತಾಯಿ 83 ವರ್ಷದ ಶ್ರೀಮತಿ ಸುಭದ್ರಮ್ಮರವರಿಗೆ 6 ಜನ ಮಕ್ಕಳು ಇವರೆಲ್ಲರನ್ನು ಚಿಕ್ಕಂದಿನಿಂದ ಮತ್ತೊಬ್ಬರ ಮನೆ ಕೂಲಿ ಕೆಲಸ ಮಾಡಿ ಜೀತ ಪದ್ಧತಿ ಇದ್ದ ಕಾಲದಿಂದಲೂ ತನ್ನ ಗಂಡನನ್ನು ಕಳೆದುಕೊಂಡು ನಂತರ ಎಲ್ಲಾ ಮಕ್ಕಳನ್ನು ಸಾಕಿ ಪ್ರತಿಯೊಬ್ಬ ಮಕ್ಕಳಿಗೂ ಉನ್ನತ ವಿದ್ಯಾಭ್ಯಾಸ ಮಾಡಿಸಿ ಉನ್ನತ ಹುದ್ದೆಯಲ್ಲಿ ಸೇರಿಕೊಳ್ಳುವಂತೆ ಮಾಡಿದ್ದಾರೆ. ಇಡೀ ಗ್ರಾಮದಲ್ಲಿ ಎಲ್ಲಾ ನಾಗರಿಕರಿಂದಲೂ ಪ್ರಶಂಸೆ ಪಡೆದುಕೊಂಡು. ಯಾವುದೇ ಕಾಯಿಲೆ ಇಲ್ಲದೆ 83 ವರ್ಷದಿಂದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುವ ಸಾಧನೆ ಮಾಡಿರುವ ಗ್ರಾಮೀಣ ಪ್ರದೇಶದ ನನ್ನ ತಾಯಿಗೆ ಕೃತಜ್ಞತಾ ಭಾವನೆಯಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಿದವರು. ಸುಭದ್ರಮ್ಮರವರ ಎರಡನೇ ಮಗಳು ಶ್ರೀಮತಿ ಎ ಎಸ್ ಜಯಂತಿರವರು ಯುವ ಸಮುದಾಯಕ್ಕೆ ಮಾದರಿ ಆಗಿದ್ದಾರೆ. ನನ್ನ ಊರಿನಲ್ಲಿ ದೇಶ ಕಾಯಲು ಹೋದ ಯೋಧ ಮಕ್ಕಳಿಗೆ ಜನ್ಮ ನೀಡಿದ ತಾಯಂದಿರಿಗೂ ಸಹ ಇದೇ ಸಂದರ್ಭದಲ್ಲಿ ಗೌರವ ಸಮರ್ಪಣೆ ಮಾಡಿದರು. ದೇಶ ಸೇವೆ ಈಶ ಸೇವೆ ಎಂದು ನಂಬಿರುವ ಅಮ್ಮನ ಕೈಯಿಂದ ಸನ್ಮಾನ ಮಾಡಿಸಿದರು. ಈ ಒಂದು ವಿಭಿನ್ನವಾದ ಕಾರ್ಯ ಕ್ರಮಕ್ಕೆ ಹಾಸನ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ಬಿ.ಆರ್ ವಾಸುದೇವ್ ಮತ್ತು ಶ್ರೀಮತಿ ಅಂಬಿಕಾ ವಾಸುದೇವ್ ರವರು ಉದ್ಘಾಟಿಸಿದರು, ಹಾಗೂ ಕೇಂದ್ರೀಯ ವಿದ್ಯಾಲಯ ಹಾಸನ ಇಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಶಿಕ್ಷಕರಾದ ಶ್ರೀ ವಾಜೀದಖಾನ್ ರವರು ಕುಟುಂಬ ಸಮೇತರಾಗಿ ಹಾಜರಿದ್ದು, ಶ್ರೀಮತಿ ಸುಭದ್ರಮ್ಮನ ಸಾರ್ಥಕ ಬದುಕಿನ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
