"ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆರೋಗ್ಯ ವೈದ್ಯಕೀಯ ಉಚಿತ ತಪಾಸಣೆ ಶಿಬಿರ

May 23, 2025 - 15:19
 0  4
"ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆರೋಗ್ಯ ವೈದ್ಯಕೀಯ ಉಚಿತ ತಪಾಸಣೆ ಶಿಬಿರ

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹ ದೊಂದಿಗೆ  ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಶ್ರೀ ಮಠದಲ್ಲಿ ವೈದ್ಯಕೀಯ ತಪಾಸಣೆ ಶಿಬಿರವನ್ನು   ಕ್ಯೂ ಎಕ್ಸ ಏಲ್  ಡಯಾಗ್ನೋಸ್ಟಿಕ್  ಸೆಂಟರ್ ಶ್ರೀಯುತ ಅಭಿಜಿತ್ ತಂಡದವರಿಂದ ಶ್ರೀಮಠದ ಸಿಬ್ಬಂದಿ ಮತ್ತು ಅವರ ಕುಟುಂಬದ ವರ್ಗದವರಿಗೆ  ಆರೋಗ್ಯ ವೈದ್ಯಕೀಯ ಉಚಿತ ತಪಾಸಣೆಯನ್ನು ನೆರವೇರಿಸಿದರು
ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು, ಈ ತಪಾಸಣೆಯಲ್ಲಿ  ಮಾಸ್ಟರ್ ಹೆಲ್ತ್ ಸ್ಕ್ರೀನಿಂಗ್ ನಡೆಸಲಾಯಿತು! ಈ ಸ್ಕ್ರೀನಿಂಗ್ ನಲ್ಲಿ ಕೆಳಗಿರುವ ಪರೀಕ್ಷೆಗಳನ್ನೂ ಮಾಡಲಾಯಿತು!
೧. FBS (ಉಪವಾಸದಲ್ಲಿರುವ ರಕ್ತದ ಶರ್ಕರೆ): ಶುಗರ್ (ಮಧುಮೇಹ) ಇರುವುದು ಅಥವಾ ರಕ್ತದ ಶರ್ಕರೆ ನಿಯಂತ್ರಣದಲ್ಲಿ ಇದೆಯೇ ಎಂಬುದನ್ನು ತಪಾಸಿಸುತ್ತದೆ.
೨. ಒಟ್ಟು ಕೊಲೆಸ್ಟ್ರಾಲ್: ಹೃದಯದ ಅನಾರೋಗ್ಯದ ಅಪಾಯವನ್ನು ಅಂದಾಜಿಸಲು ಒಟ್ಟಾರೆ ಕೊಲೆಸ್ಟ್ರಾಲ್ ಪ್ರಮಾಣವನ್ನು ಅಳೆಯುತ್ತದೆ.
೩. SGOT (AST): ಯಕೃತ್ತು ಕಾರ್ಯಕ್ಷಮತೆ ಅಥವಾ ಸ್ನಾಯು/ಹೃದಯದ ಹಾನಿಯನ್ನು ಸೂಚಿಸುತ್ತದೆ.
೪. ಕ್ರಿಯಾಟಿನಿನ್: ಮೂತ್ರಪಿಂಡದ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಯಾವುದೇ ಹಾನಿಯಿದೆ ಎಂಬುದನ್ನು ಪತ್ತೆಹಚ್ಚುತ್ತದೆ.
೫. ವಿಟಮಿನ್ B12: ನರಗಳು, ಶಕ್ತಿತಳ, ಮತ್ತು ರಕ್ತದ ಕೆಂಪುಕಣಗಳ ಉತ್ಪಾದನೆಗೆ ಅಗತ್ಯವಿರುವ ಈ ವಿಟಮಿನ್‌ನ ಕೊರತೆಯನ್ನು ಪತ್ತೆಹಚ್ಚಲು ಸಹಾಯಕ.
೬. CBC (ಪೂರ್ಣ ರಕ್ತದ ಗಣನೆ): ರಕ್ತದ ವಿವಿಧ ಘಟಕಗಳನ್ನು ವಿಶ್ಲೇಷಿಸುವ ಮೂಲಕ ಒಟ್ಟಾರೆ ಆರೋಗ್ಯ ಸ್ಥಿತಿಯನ್ನು ತೋರಿಸುತ್ತದೆ. ಈ ರೀತಿಯಾಗಿ ಸಿಬ್ಬಂದಿಗಳ  ಆರೋಗ್ಯದ ಹಿತದೃಷ್ಟಿಯಿಂದ ತಪಾಸಣೆಯನ್ನು ನೆರೆವೇರಿಸಿದ ಶ್ರೀಯುತ ಅಭಿಜಿತ್ ಅವರಿಗೆ ಆರ್ ಕೆ ವಾದಿಂದ್ರ ಆಚಾರ್ಯರು ಅಭಿನಂದನೆಗಳನ್ನು ಸಲ್ಲಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456