ಜಲಶಕ್ತಿ ಅಭಿಯಾನ ಯೋಜನೆ ಕಾಮಗಾರಿ ಪರಿಶೀಲಿಸಿದಕೇಂದ್ರ ಸಚಿವಾಲಯದ ಉಪಕಾ-ರ್ಯದರ್ಶಿ ಮಂಜೇಶ್ ಪೋವ್ರಲ್

May 30, 2025 - 17:22
May 30, 2025 - 18:10
 0  5
ಜಲಶಕ್ತಿ ಅಭಿಯಾನ ಯೋಜನೆ ಕಾಮಗಾರಿ ಪರಿಶೀಲಿಸಿದಕೇಂದ್ರ ಸಚಿವಾಲಯದ ಉಪಕಾ-ರ್ಯದರ್ಶಿ ಮಂಜೇಶ್ ಪೋವ್ರಲ್

ಬಾಗೇಪಲ್ಲಿ : ಗ್ರಾಮಗಳಲ್ಲಿರುವ ನೀರಿನ ಟ್ಯಾಂಕ್‌ಗಳನ್ನು ಮೂರು ದಿನಗಳೋಮ್ಮೆ ಸ್ವಚ್ಛತೆ ಮಾಡಬೇಕು. ಸ್ವಚ್ಛತೆ ಮಾಡಿದ ದಿನಾಂಕವನ್ನು ಗೋಡೆಗಳ ಮೇಲೆ ಕಡ್ಡಾಯವಾಗಿ ಬರೆದಿರಬೇಕು ಎಂದು ಕೇಂದ್ರ ಸಚಿವಾಲಯದ ಉಪಕಾ-ರ್ಯದರ್ಶಿ ಮಂಜೇಶ್ ಪೋರ್ವಲ್ ಅವರು ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಕಸಬಾ ಹೋಬಳಿಯ ದೇವರಗುಡಿಪಲ್ಲಿ ಹಾಗೂ ಗೂಳೂರು ಹೋಬಳಿಯ ಸದ್ದಪಲ್ಲಿ ತಾಂಡ, ಪಾರ್ವತಿಪುರ ತಾಂಡಗಳಲ್ಲಿ ಜಲಶಕ್ತಿ ಅಭಿಯಾನದಡಿ ನಡೆಯುತ್ತಿರುವ ಕಾಮಗಾರಿಗಳನ್ನು ಅಭಿಯಾನದ ನೋಡಲ್ ಅಧಿಕಾರಿ, ವಸತಿ ಮತ್ತು ನಗರ ಪ್ರದೇಶಗಳ ಕೇಂದ್ರ ಸಚಿವಾಲಯದ ಉಪಕಾ-ರ್ಯದರ್ಶಿ ಮಂಜೇಶ್ ಪೋರ್ವಲ್ ಮತ್ತು  ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಪರಿಶೀಲನೆ ಮಾಡಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಮಹತ್ವ ಯೋಜನೆ ಗಳಲ್ಲಿ ಜಲಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆ ಒಂದಾಗಿದೆ.ಗ್ರಾಮೀಣ ಭಾಗದ ಕಟ್ಟ ಕಡೆಯ ಜನರಿಗೆ ಕುಡಿಯುವ ನೀರು ಹರಿಸುವ ಉದ್ದೇಶ ಈ ಯೋಜನೆ ಹೊಂದಿದೆ ಹಾಗಾಗಿ ಈ ಯೋಜನೆ ಗ್ರಾಮೀಣ ಭಾಗದ ಜನರಿಗೆ ತಲುಪುತ್ತಿದಿಯ ಎಂಬ ಉದ್ದೇಶದಿಂದ ಇಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳೊಂದಿಗೆ ಸದ್ದಪಲ್ಲಿ ತಾಂಡಗೆ ಭೇಟಿ ನೀಡಲಾಗಿದೆ ಎಂದರು.

ನಂತರ ಜೆಜೆಎಂನ ನೀರಿನ ಸರಬರಾಜಿನ ಬಗ್ಗೆ ಸದ್ದಪಲ್ಲಿ  ಗ್ರಾಮಸ್ಥರಿಂದ ಮಾಹಿತಿ ಪಡೆದ ಕೇಂದ್ರ ಸಚಿವಾಲಯದ ಉಪಕಾರ್ಯದರ್ಶಿ ಮಂಜೇಶ್ ಪೋರ್ವಲ್ ಅವರು ತಾಂಡದಲ್ಲಿ ಜೆಜೆಎಂ ಯೋಜನೆಯ ಅಡಿಯಲ್ಲಿ ಮನೆಗಳಿಗೆ ಸರಬರಾಜು ಆಗುವ ನೀರಿನ ಮಟ್ಟ ಪರಿಶೀಲನೆ ಮಾಡಿದರು. ಕುಡಿಯಲು ನೀರು ಯೋಗ್ಯತೆ ಇದೆಯೇ? ಇಲ್ಲವೇ?, ಕಾಲಕಾಲಕ್ಕೆ ನೀರು ಸರಬರಾಜು ಮಾಡುತ್ತಿರುವ ಹಾಗೂ ಸ್ವಚ್ಛತೆಯ ಬಗ್ಗೆ ಗ್ರಾಮಸ್ಥರಿಂದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾ ರ್ಯದರ್ಶಿ ಅತೀಕ್‌ಭಾಷ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ವಿ.ರಮೇಶ್, ಜಿಲ್ಲಾ ಪಂಚಾಯತ್ ತಾಂತ್ರಿಕ ಇಲಾಖೆ ಜೆ ಇ ರಾಮಚಂದ್ರ, ఎ ఇ ಮಹೇಶ್,ಪರಗೋಡು ಪಿ ಡಿ ಓ, ಶಂಕರಪ್ಪ,ಗೂಳೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು..

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456