ಜಿಲ್ಲಾಆಡಳಿತ ಕಛೇರಿ ಮುತ್ತಿಗೆ ಚಲೋ ಅನ್ನದಾತರೆ-ಜಿಲ್ಲಾ ಅಧ್ಯಕ್ಷ ಪಿ.ಮಂಜುನಾಥ ರೆಡ್ಡಿ

Jan 12, 2026 - 17:49
 0  6
ಜಿಲ್ಲಾಆಡಳಿತ ಕಛೇರಿ ಮುತ್ತಿಗೆ ಚಲೋ ಅನ್ನದಾತರೆ-ಜಿಲ್ಲಾ ಅಧ್ಯಕ್ಷ ಪಿ.ಮಂಜುನಾಥ ರೆಡ್ಡಿ

   ಭಾಗ್ಯನಗರ: ಮೆಕ್ಕೆಜೋಳ ಖರೀದಿ ಮಾಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿರ್ಲಕ್ಷ ಖಂಡಿಸಿ ಇಂದು ಸಾವಿರಾರು ಅನ್ನದಾತರು  ಜಿಲ್ಲಾಡಳಿತ ಕಚೇರಿ ಮುಂದೆ ಅಖಿಲ ಕರ್ನಾಟಕ ರೈತ ಸಂಘದ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲು ಹೊರಟಿದ್ದೇವೆ ಎಂದು ಅಖಿಲ ಕರ್ನಾಟಕ ರೈತ ಸಂಘಟನೆ  ಜಿಲ್ಲಾ ಅಧ್ಯಕ್ಷ ಪಿ.ಮಂಜುನಾಥ ರೆಡ್ಡಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಅಖಿಲ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳ ಹಾಗೂ ರೈತರು ಜಿಲ್ಲಾಡಳಿತ ಕಚೇರಿ ಮುತ್ತಿಗೆಗೆ ಚಲೋ ಪ್ರಯಾಣಕ್ಕೆ  ಚಾಲನೆ ನೀಡಿ ಮಾತನಾಡಿದ ಅವರು ಸರ್ಕಾರ   2400 ರೂಪಾಯಿಗಳನ್ನು ನಿಗದಿ ಮಾಡಿದ್ದು ರೈತರು ನೋಂದಣಿ ಮಾಡಿಕೊಂಡು ಜೋಳವನ್ನ  ದಾಸ್ತಾನು ಕೇಂದ್ರಕ್ಕೆ ನೀಡಬೇಕು ಎಂಬ ಆದೇಶವನ್ನು ಸರ್ಕಾರ ಮಾಡಿತ್ತು ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಲ್ಲದೆ ರಾಜಾನುಕುಂಟೆ ಹತ್ತಿರ ದಾಸ್ತಾನು ಕೇಂದ್ರ ಮಾಡಲಾಗಿದ್ದು ರೈತರು ಅಲ್ಲಿ ನೋಂದಣಿ ಮಾಡಿಕೊಂಡು ಸರಬರಾಜು ಮಾಡಲು ಹೇಳಲಾಗಿದೆ,ಆದರೆ ಈ ಭಾಗದ ರೈತರು ರಾಜನಕುಂಟೆಗೆ ಹೋಗಿ ಬರಲು ತುಂಬಾ ಅನಾನುಕೂಲ ಮುಖ್ಯವಾಗಿ ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿ ನೀಡಿಲ್ಲ ಜಿಲ್ಲೆಯಲ್ಲಿ ಸಾವಿರಾರು ರೈತರು ಮೆಕ್ಕೆಜೋಳವನ್ನು ಬೆಳೆಯುತ್ತಾರೆ ಆದರೆ ಅಲ್ಲಿ ನೋಂದಣಿ ಮಾಡಿರೋದು ಕೇವಲ 200 ಮಂದಿ ಮಾತ್ರ ಜಿಲ್ಲೆಯ ಪ್ರತಿ ಹೋಬಳಿ ಹಾಗೂ ತಾಲೂಕ ಮಟ್ಟದಲ್ಲಿ ನೋಂದಣಿ ಕೇಂದ್ರಗಳನ್ನ ತೆರೆಯಬೇಕು ಜೊತೆಗೆ ಉಗ್ರಾಣವನ್ನು ಸಹ ಜಿಲ್ಲಾ ವ್ಯಾಪ್ತಿಯಲ್ಲಿ ಮಾಡಬೇಕು ಇದರಿಂದ ರೈತರಿಗೆ ಅನುಕೂಲವಾಗುತ್ತೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ರೈತರಿಗೆ ಮಾಹಿತಿ ನೀಡಬೇಕಾಗಿತ್ತು ಆದರೆ ಸರಿಯಾಗಿ ಮಾಹಿತಿ ಸಿಕ್ಕಿಲ್ಲ ರೈತರ ಬೆಳೆದ ಮೆಕ್ಕೆಜೋಳಕ್ಕೆ ನಿಗದಿ ಮಾಡಿರುವಂತೆ ಸರ್ಕಾರ ನೀಡಬೇಕು ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿ ನೀಡಬೇಕು ಎಂಬ ಸಂಕಲ್ಪದೊಂದಿಗೆ  ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಂಜುನಾಥ್ ರೆಡ್ಡಿ.ಅಂಜನೇಯರೆಡ್ಡಿ. ಹೇಮಚಂದ್ರ. ಅಶ್ವತ್ಥಪ್ಪ. ಶ್ರೀ ರಾಮ ನಾಯ್ಕ್. ಹೆಗ್ಗಡೆ. ರಾಘವೇಂದ್ರ. ಟಿ.ಪಿ.ಎಸ್. ಮಾಜಿ ಅಧ್ಯಕ್ಷ ಅಶ್ವತ್ಥಪ್ಪ. ರವಿಚಂದ್ರ ರೆಡ್ಡಿ. ರಾಮರೆಡ್ಡಿ ಗೋಪಿ ಕಾಶಾಪುರ ಅಶ್ವತಪ್ಪ ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ರವಿಚಂದ್ರರೆಡ್ಡಿ, ಲಕ್ಷ್ಮೀನಾರಾಯಣ, ರಮೇಶ್ ರೆಡ್ಡಿ, ಗೋಪಾಲ್ (ಗೋಪಿ) ಎಸ್.ಎನ್. ರಾಮರೆಡ್ಡಿ,  ಶ್ರೀರಾಮನಾಯ್ಕ್, ಜಿ.ಎಸ್,  ಶ್ರೀನಿವಾಸ್,ಕೊತ್ತಕೋಟ ರಾಮಾಂಜಿ, ಸುರೇಶ್,ಆದಿನಾರಾಯಣರೆಡ್ಡಿ,  ಆನಂದ್, ಶ್ರೀರಾಮಪ್ಪ, ಸೇರಿದಂತೆ ಹಲವಾರು ರೈತ ಮುಖಂಡರು ಇದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456