ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ 19ನೇ ಸಭೆ
ಚನ್ನರಾಯಪಟ್ಟಣ: ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ 19ನೇ ಸಭೆಯು ಹೆಚ್ ಆರ್ ಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ಜರುಗಿತು, ಗೃಹಲಕ್ಷ್ಮಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ತಾಲೂಕು ಎರಡನೇ ಸ್ಥಾನ ಪಡೆದಿದೆ ಎಂದರು. ಅನ್ನಭಾಗ್ಯ ಯೋಜನೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಣೆ ಲೋಪದ ಬಗ್ಗೆ ಸದಸ್ಯರ ಅತೃಪ್ತಿ, ಹೊಸ ಬಿ ಪಿಎಲ್ ಕಾರ್ಡ್ ಅರ್ಜಿ ಆಹ್ವಾನ, ಶಕ್ತಿ ಯೋಜನೆ ಅನುಷ್ಠಾನ, ಯುವ ನಿಧಿ ಯೋಜನೆ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣ ಅಧಿಕಾರಿ ಜಿ ಆರ್ ಹರೀಶ್, ಸಹಾಯಕ ನಿರ್ದೇಶಕ ಗಿರೀಶ್, ವಕೀಲ ನವೀನ್ ಕುಮಾರ್, ಮಿಲಿಟರಿ ಮಂಜು, ಕೆ ಎನ್ ನಾಗೇಶ್ ಸೇರಿದಂತೆ ಇತರರು ಚರ್ಚೆಯಲ್ಲಿ ಭಾಗವಹಿಸಿದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
