ದೇವಾಯಲ ಕೆರೆ ಕಟ್ಟೆಗಳ ಸಂಪರ್ಕ ಕಲ್ಪಿಸುವ ರಸ್ತೆ ಒತ್ತುವರಿ ಗ್ರಾಮಸ್ಥರಿಂದ ತೀರ್ವ ವಿರೋಧ

Jun 19, 2025 - 17:05
 0  8
ದೇವಾಯಲ ಕೆರೆ ಕಟ್ಟೆಗಳ ಸಂಪರ್ಕ ಕಲ್ಪಿಸುವ ರಸ್ತೆ ಒತ್ತುವರಿ ಗ್ರಾಮಸ್ಥರಿಂದ ತೀರ್ವ ವಿರೋಧ

ಕೃಷ್ಣರಾಜಪೇಟೆ ತಾಲ್ಲೂಕಿನ ಮಾಳಗೋರು ಗ್ರಾಮದ ಸರ್ವೇ ನಂಬರ್ 158 ರಲ್ಲಿ ಹಲವು ಗ್ರಾಮಗಳಿಗೆ ಮತ್ತು ದೇವಾಲಯಗಳಿಗೆ ಸಂಪರ್ಕ ರಸ್ತೆನ್ನು ತಾಲ್ಲೂಕು ಪಂಚಾಯತಿ ಅನುಧಾನಲ್ಲಿ ನಿರ್ಮಿಸಲಾಯಿತು ಆದರೆ ಕೊಡಗಹಳ್ಳಿ ರಾಜೇಗೌಡ ಎಂಬುವರು ಜೆ.ಸಿ.ಬಿ ಯಂತ್ರದ ಮೂಲಕ ಜಮೀನು ಅಭಿವೃದ್ಧಿ ಮಾಡುವ ಮೂಲಕ  ರಸ್ತೆಯನ್ನು ಒತ್ತವರಿ ಮಾಡುತ್ತಿರುವುದನ್ನು ಕಂಡ ಮಾಳಗೋರು ಮತ್ತು ಆದಿಹಳ್ಳಿ ಗ್ರಾಮಸ್ಥರು ವಿರೋದಿಸಿದ್ರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಆದಿಹಳ್ಳಿ ನಾಗೇಶ್ ಮಾತನಾಡಿ ರಾಜೇಗೌಡ ಎಂಬುವರು ಜಮೀನು ಅಭಿವೃದ್ಧಿ ನೆಪದಲ್ಲಿ ಅಕ್ಕಪಕ್ಕದ ಜಾಗಗಳನ್ನು ಒತ್ತುವರಿ ಮಾಡುತ್ತಿದ್ದು ಅಲ್ಲದೆ ದೇವಾಲಯಕ್ಕೆ ಹಲವು ಗ್ರಾಮಗಳಿಗೆ ಮತ್ತು ಕೆರೆ ಕಟ್ಟೆಗಳಿಗೆ ಸಂಪರ್ಕ ಇರುವ ರಸ್ತೆಯನ್ನು ಸಹ ಒತ್ತುವರಿ‌ ಮಾಡುತ್ತಿದ್ದಾರೆ ಪಕ್ಕದಲ್ಲೇ ಇವರು ನಮ್ಮ ಕುಂಟುಬಕ್ಕೆ ಸೇರಿದ ಪಿತ್ರಾಜಿತ  ಜಮೀನನ್ನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿದ್ರು.

ವಿಷಯ ತಿಳಿದ  ಗ್ರಾಮ ಲೆಕ್ಕಾದಿಕಾರಿ ಪ್ರವೀಣ್ ಸ್ಥಳಕ್ಕೆ ಬೇಟಿ ನೀಡಿ  ಜಮೀನು ಅಭಿವೃದ್ಧಿ ಮಾಡುವ ಮುನ್ನ ತಮ್ಮ ಜಮೀನಿನ ಸೂಕ್ತಾ ದಾಖಲಾತಿಯನ್ನು ಕೊಟ್ಟು ಅಳತೆ ಮಾಡಿಸಿಕೊಂಡು ನಂತರ ಕಾಮಗಾರಿಯನ್ನು ಮಾಡವುಂತೆ ತಿಳಿಸಿದ್ರು.

ಸ್ಥಳದಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ನಾಗೇಶ್, ನಂಜುಂಡೇಗೌಡ್ರು,ಮಂಜು, ಸ್ವಾಮಿ ಮಂಡ್ಯ, ರಾಜೇಗೌಡ್ರು, ಕರೀಗೌಡ್ರು, ಪುಟ್ಟಸ್ವಾಮಿ, ಲಕ್ಕೇಗೌಡ್ರು, ಕಾಂತರಾಜು, ಮಾಳಗೋರು ಹರೀಶ್ ಸೇರಿದಂತೆ ಸ್ಥಳಿಯ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ರು...

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456