ನನ್ನ ಮೇಲೆ ಇರುವ ಜಾತಿ ನಿಂದನೆ ಆರೋಪ ಸತ್ಯಕ್ಕೆ ದೂರ: ಕೃಷ್ಣಪ್ಪ ಸ್ಪಷ್ಟನೆ
ಕೆಜಿಎಫ್: ನನ್ನ ಮೇಲೆ ಇರುವ ಜಾತಿ ನಿಂದನೆ ಆರೋಪ ಸತ್ಯಕ್ಕೆ ದೂರ ನಾನು ವಾಲ್ಮೀಕಿ ಸಮಾಜಕ್ಕೆ ಸೇರಿದ್ದು, ಶಾಲೆ ದಾಖಲಾತಿಯಲ್ಲಿ ದೋಷ ಉಂಟಾಗಿ ನಾಯ್ಡು ಎಂದು ಬರೆಯಲಾಗಿತ್ತು. ತದನಂತರ 30 ವರ್ಷಗಳ ಮೊದಲೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿ ಬದಲಾವಣೆ ಮಾಡಲಾಗಿತ್ತು. ನಂತರ ಚುನಾವಣೆಗಳಲ್ಲಿ ವಾಲ್ಮೀಕಿ (ಎಸ್ ಸಿ) ಸಮುದಾಯದಲ್ಲಿ ಸ್ಪರ್ಧಿಸಿ ಹಲವಾರು ಸಮಾಜ ಸೇವೆಗಳನ್ನು ಮಾಡಿದ್ದು, ನಮ್ಮ ಕುಟುಂಬದ ಸದಸ್ಯರು ಎಲ್ಲಾ ನಮ್ಮ ತಾತ ತಂದೆ ತಾಯಿಯ ನನ್ನ ಹೆಂಡತಿ ಎಲ್ಲಾರ ದಾಖಲೆಗಳಲ್ಲಿ ವಾಲ್ಮೀಕಿ ಸಮುದಾಯ ನಮೋದಿಸಲಾಗಿದೆ . ಇದರ ಬಗ್ಗೆ ವಿಸ್ತೃತ ತನಿಖೆಯನ್ನು ತಹಶೀಲ್ದಾರ್ ಮಟ್ಟದಲ್ಲಿ ಅಧಿಕಾರಿಗಳು ಮಾಡಿ ವರದಿ ಸಲ್ಲಿಸಿದ್ದರು.
ಇತ್ತೀಚಿಗೆ ವಿನಾಕಾರಣ ವೆಂಕಟೇಶ್ ಎಂಬ ವ್ಯಕ್ತಿ ನಮ್ಮ ಅಂಗಡಿ ವಿಚಾರವಾಗಿ ವೈಯಕ್ತಿಕವಾಗಿ ಸಮಸ್ಯೆಯಾಗಿದ್ದು, ನನ್ನ ಮೇಲೆ ಜಾತಿನಿಂದ ಕೇಸು ದಾಖಲೆ ಮಾಡಿದ್ದರು.
ನನ್ನ ಹತ್ತಿರ ಇರುವ ದಾಖಲೆಗಳನ್ನು ಜಿಲ್ಲಾ ಅಂತದಲ್ಲಿ ನ್ಯಾಯಾಲಯಗಳಲ್ಲಿ ನೀಡಿದ್ದೇವೆ.
ಆದರೆ ಅಧಿಕಾರಿಗಳು ಕೆಲವೊಂದು ದುಷ್ಟ ಶಕ್ತಿಗಳಿಂದ ನನಗೆ ನ್ಯಾಯ ದೊರೆತಿಲ್ಲ . ನಂತರ ಮೇಲ್ಮನವಿ ಮೇಲೆ ಉಲ್ಲೇಖಿಸಿರುವ ಕಾರಣದಿಂದಾಗಿ ದೋಷಪೂರಿತ ಜಿಲ್ಲಾಧಿಕಾರಿಗಳು, ಕೋಲಾರ ಜಿಲ್ಲೆ ರವರ ನಡುವೆ ಆದೇಶ ಸಂಖ್ಯೆ ಕೋ. ಸಿಆರ್. ಜಾವಿ. 2024 - 25ರ ದಿನಾಂಕ. 24/9/25 ರನ್ನು ರದ್ದುಗೊಳಿಸಿದೆ. ಕರ್ನಾಟಕ ಅನುಸೂಚಿತ ಜಾತಿ. ಅನುಚೂಚಿತ ಬುಡಿಕಟ್ಟುಗಳ ಮತ್ತು ಇತರ ಹಿಂದುಳಿದ ವರ್ಗಗಳ ನೇಮಕಾತಿ ಮುಂತಾದವುಗಳ ಮೀಸಲಾತಿ. ಆದಿನಿಯಮಗಳು 1990 ರ 4 - f ಅಡಿಯಲ್ಲಿ ಸಮಕ್ಷಮ ಅಧಿಕಾರಗಳಾದ ಪ್ರತಿವಾದಿ1 ರವರ ದಾರರಿಗೆ ಹಾಗೂ ಪ್ರತಿವಾದಿಗಳು 5 ಮತ್ತು6 ರವರೆಗೆ ನೋಟಿಸ್ ಜಾರಿ ಮಾಡಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ವಿವರನಾತ್ಮ ಆದೇಶವನ್ನು ಹೊರಡಿಸಲು ಆದೇಶಿಸಿದೆ. ಮೇಲೆ ತಮಗೆ ನೀಡಿರುವ ಆದೇಶ ಪ್ರತಿಗಳನ್ನು ಪ್ರದರ್ಶಿಸುವ ಮೂಲಕ ಮಾಧ್ಯಮದೊಂದಿಗೆ ತಿಳಿಸಿದರು.
ವಿನಾಕಾರಣ ವೆಂಕಟೇಶ್ ಎಂಬುವರು ನನಗೆ ಕಿರುಕುಳ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ನನ್ನ ಆರೋಗ್ಯದಲ್ಲಿ ಏರುಪೇರಾದರೆ ಅದಕ್ಕೆ ಅವರೇ ಜವಾಬ್ದಾರಿ.
ಕೆಜಿಎಫ್ ತಾಲೂಕು ಕಚೇರಿ ಮುಂಭಾಗದಲ್ಲಿ ನಮ್ಮ ವಾಲ್ಮೀಕಿ ಸಮುದಾಯದ ವತಿಯಿಂದ ದೊಡ್ಡ ಮಟ್ಟದಲ್ಲಿ ಹೋರಾಟಗಳನ್ನು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಹಾಗೂ ತಾಲೂಕು ಮಟ್ಟದ ವಾಲ್ಮೀಕಿ ಸಮುದಾಯದ ಮುಖಂಡರು ಭಾಗವಹಿಸಿದ್ದರು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
