ನಾಡಪ್ರಭು ಕೆಂಪೇಗೌಡ ವೇದಿಕೆ ವತಿಯಿಂದ ಕೆಂಪೇಗೌಡರ 516ನೇ ಹುಟ್ಟುಹಬ್ಬ ಆಚರಣೆ ಮಾಡಲಾಯಿತು
ಚನ್ನರಾಯಪಟ್ಟಣ: ನಾಡಪ್ರಭು ಕೆಂಪೇಗೌಡ ವೇದಿಕೆ ವತಿಯಿಂದ ಕೆಂಪೇಗೌಡರ 516ನೇ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. ಪಟ್ಟಣದ ಬಾಲಾಜಿ ಚಿತ್ರಮಂದಿರದ ಪಕ್ಕದಲ್ಲಿರುವ ನಾಡಪ್ರಭು ಕೆಂಪೇಗೌಡ ವೇದಿಕೆಯ ಪ್ರಧಾನ ಕಚೇರಿಯಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಅನಂತರ ಕಚೇರಿಯ ಮುಂಭಾಗದಿಂದ ಕೆಂಪೇಗೌಡ ಭಾವಚಿತ್ರವನ್ನು ಬೆಳ್ಳಿಯ ರಥದ ಮೆರವಣಿಗೆಯೊಂದಿಗೆ ಹೊಸ ಬಸ್ ಸ್ಟ್ಯಾಂಡ್ ನಿಲ್ದಾಣ ಮಾರ್ಗವಾಗಿ ಸಾಗಿ ಕೆಂಪೇಗೌಡ ಸರ್ಕಲ್ ನಲ್ಲಿ ಕೆಂಪೇಗೌಡರವರ ನಾಮಫಲಕಕ್ಕೆ ಹೂವಿನ ಪುಷ್ಪಾರ್ಚನೆ ಮಾಡಿದರು. ಆನಂತರ ಕಾಳೆನಹಳ್ಳಿ ಆನಂದ್ ಮಾತನಾಡಿ ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡುತ್ತಿರುವುದು ತುಂಬಾ ಸಂತೋಷ ವಿಚಾರ ಎಂದರು, ಮುಂದಿನ ದಿನಗಳಲ್ಲಿ ಕೆಂಪೇಗೌಡ ಸರ್ಕಲ್ ನಲ್ಲಿ ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಬೇಕೆಂದು ಒತ್ತಾಯ ಮಾಡಿದರು. ಇದೇ ಸಂದರ್ಭದಲ್ಲಿ ಆನಂದ್ ಕುಮಾರ್, ವಸ್ತ್ರ ವಿನ್ಯಾಸಕ ಮಲ್ಲವನಘಟ್ಟ ನಾಗರಾಜ್, ವೆಂಕಟೇಶ್, ನವೀನ್, ಕೆರೆ ಬೀದಿ ಜಗದೀಶ್,ಡಿ ಎಂ ರವಿ,ಬಾಬು,ಉಮೇಶ್, ಸುರೇಶ್ ಗೌಡ ಸೇರಿದಂತೆ ಇತರರು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
