ನೂತನ ಎಸ್ಪಿ ಶಿವಾಂಶು ರಜಪೂತ್ ಅಧಿಕಾರ ಸ್ವೀಕಾರ
ಕೆಜಿಎಫ್: ಕೆಜಿಎಫ್ ಪೊಲೀಸ್ ಜಿಲ್ಲೆಯ ನೂತನ ರಕ್ಷಣಾಧಿಕಾರಿಗಳಾಗಿ ಶಿವಾಂಶು ರಜಪೂತ್ ಅವರು ಮಂಗಳವಾರದಂದು ಸಂಜೆ ಅಧಿಕಾರ ವಹಿಸಿಕೊಂಡರು.
ನೂತನ ಎಸ್ಪಿ ಶಿವಾಂಶು ರಜಪೂತ್ ಅವರು ಇಲ್ಲಿಯವರೆಗೆ ಕೆಜಿಎಫ್ ಎಸ್ಪಿ ಪ್ರಭಾರದಲ್ಲಿದ್ದ ಕೆ.ಎಂ.ಶಾಂತರಾಜು ಅವರಿಂದ ಪ್ರಭಾರವನ್ನು ವಹಿಸಿಕೊಂಡರು. ಕೆ.ಎಂ.ಶಾಂತರಾಜು ಅವರು ರಾಜ್ಯ ಗುಪ್ತ ವಾರ್ತೆಗೆ ವರ್ಗವಾಗಿದ್ದಾರೆ. ನೂತನ ಎಸ್ಪಿ ಶಿವಾಂಶು ರಜಪೂತ್ ಅವರು ಈ ಹಿಂದೆ ಬೆಂಗಳೂರು ಎಸ್ಸಿಆರ್ಬಿ ಪೊಲೀಸ್ ಅಧೀಕ್ಷಕರಾಗಿದ್ದರು. ಪ್ರಸ್ತುತ ಕೆಜಿಎಫ್ ಪೊಲೀಸ್ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಪ್ರಭಾರ ವಹಿಸಿಕೊಂಡ ನಂತರ ಅಧೀನ ಅಧಿಕಾರಿಗಳೊಂದಿಗೆ ಮಾತನಾಡಿದ ಎಸ್ಪಿ ಶಿವಾಂಶು ರಜಪೂತ್ ಅವರು ಸಾಮಾನ್ಯ ನಾಗರೀಕರಿಗೆ ಅನ್ಯಾಯವಾಗದ ರೀತಿಯಲ್ಲಿ, ನಿಸ್ಪಕ್ಷಪಾತವಾಗಿ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕೆಂದರು. ಜನಸಾಮಾನ್ಯರು ತಂತಮ್ಮ ಸಮಸ್ಯೆಗಳ ಕುರಿತು ತಮ್ಮನ್ನು ಯಾವುದೇ ಸಮಯದಲ್ಲೂ ಭೇಟಿಯಾಗಿ, ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬಹುದೆಂದರು.
ಸಶಸ್ತ್ರ ಪೊಲೀಸ್ ಇನ್ಸ್ಪೆಕ್ಟರ್ ವಿ.ಸೋಮಶೇಖರ ಮತ್ತು ಸಿಬ್ಬಂದಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಗೌರವ ರಕ್ಷೆ ನೀಡಿ, ಚಿನ್ನದ ನಗರಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಎಸ್.ಪಾಂಡುರಂಗ ಮತ್ತು ಕೆಜಿಎಫ್ ಪೊಲೀಸ್ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
ಚಿತ್ರಶಿರ್ಷಿಕೆ: ೧೫ಕೆಜಿಎಫ್೦೧: ಕೆಜಿಎಫ್ ನೂತನ ಎಸ್ಪಿ ಶಿವಾಂಶು ರಜಪೂತ್, ನಿರ್ಗಮಿತ ಎಸ್ಪಿ ಕೆ.ಎಂ.ಶಾಂತರಾಜು ಅವರಿಂದ ಪ್ರಭಾರ ಸ್ವೀಕರಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
