ನೂತನ ತಹಶೀಲ್ದಾರ್ ಭರತ್. ಎಚ್. ಜಿ. ಅಧಿಕಾರ ಸ್ವೀಕಾರ
ಕೆಜಿಎಫ್: ಕೆಜಿಎಫ್ ತಾಲೂಕಿನ ನೂತನ ತಹಶೀಲ್ದಾರ್ ರಾಗಿ ಭರತ್. ಎಚ್. ಜಿ. ರವರು ಸೋಮವಾರ ಮಧ್ಯಾಹ್ನ ಅಧಿಕಾರ ವಹಿಸಿಕೊಂಡರು.
ನೂತನ ತಹಶೀಲ್ದಾರ್ ಭರತ್. ಹೆಚ್. ಜೆ. ಅವರು ಇಲ್ಲಿಯವರೆಗೆ ಕೆಜಿಎಫ್ ತಹಶೀಲ್ದಾರ್ ಪ್ರಭಾರದಲ್ಲಿದ್ದ ನಾಗವೇಣಿ ಅವರಿಂದ
ಪ್ರಭಾರವನ್ನು ವಹಿಸಿಕೊಂಡರು. ನಾಗವೇಣಿ ರವರಿಗೆ ಸ್ಥಳವನ್ನು ಕಾಯ್ದಿರಿಸಲಾಗಿದೆ.
ನೂತನ ತಹಶೀಲ್ದಾರ್ ಭರತ್. ಎಚ್. ಜಿ . ಅವರು ಈ ಹಿಂದೆ ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಕೆಜಿಎಫ್ ತಹಶೀಲ್ದಾರ ಆಗಿ ಉಸ್ತುವರಿ ವಹಿಸಿಕೊಂಡಿದ್ದಾರೆ.
ಪ್ರಭಾರ ವಹಿಸಿಕೊಂಡ ನಂತರ ಕಚೇರಿ ಸಿಬ್ಬಂದಿಗಳೊಂದಿಗೆ ಮಾತನಾಡಿದ ಅವರು ಕಚೇರಿಗೆ ಬರುವ ಸಾಮಾನ್ಯ ನಾಗರಿಕರಿಗೆ ಅನ್ಯಾಯವಾಗದ ರೀತಿಯಲ್ಲಿ. ನಿಷ್ಪಕ್ಷಪಾತವಾಗಿ ಮತ್ತು ಪ್ರಾಮಾಣಿಕವಾಗಿ ನಿಮ್ಮ ಕರ್ತವ್ಯ ನಿರ್ವಹಿಸಬೇಕು. ರೈತರು ಯಾವುದೇ ಕೆಲಸಕ್ಕೆ ಕಚೇರಿಗೆ ಬಂದರೆ ಅವರಿಗೆ ತೊಂದರೆ ನೀಡಬಾರದು. ದಾಖಲೆಗಳನ್ನು ಪರಿಶೀಲನೆ ಮಾಡಿ ತಕ್ಷಣ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು. ರೈತರ ಸಾರ್ವಜನಿಕರ ಹತ್ತಿರ ಸಿಬ್ಬಂದಿಗಳು ಹಣಕ್ಕೆ ಬೇಡಿಕೆ ಇಡಬಾರದು. ಇದರ ಬಗ್ಗೆ ನನ್ನ ಗಮನಕ್ಕೆ ಬಂದರೆ ಸಿಬ್ಬಂದಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ. ನಾನು ನೋಡಲು ಅಸಹಾಯಕನಂತೆ ಕಾಣುತ್ತೇನೆ. ಆದರೆ ಕಛೇರಿ ಕೆಲಸದ ವಿಷಯವಾಗಿ ಬಂದರೆ ನಾನು ವೈಲೆಂಟ್ ಆಗಿರುತ್ತೇನೆ. ಇದನ್ನು ಸಿಬ್ಬಂದಿಗಳು ತಿಳಿದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು. ನಾನು ಕೆಲಸ ಮಾಡುತ್ತಿರುವ ಕಚೇರಿಯಲ್ಲಿ ನಮ್ಮ ಮೇಲಾಧಿಕಾರಿಗಳ ಹತ್ತಿರ ಕೆಲಸವನ್ನು ಕರಗತ ಮಾಡಿಕೊಂಡಿದ್ದು, ಯಾವ ರೀತಿ ಕೆಲಸ ಮಾಡಿಸಿಕೊಳ್ಳಬೇಕೆಂದು ನನಗೆ ತಿಳಿದಿದೆ ಎಂದು ತಿಳಿಸಿದರು.
ವರ್ಗಾವಣೆಗೊಂಡ ತಹಶೀಲ್ದಾರ್ ನಾಗವೇಣಿ ಮಾತನಾಡಿ. ಒಂದು ವರ್ಷ ಎಂಟು ತಿಂಗಳು ಕೆಜಿಎಫ್ ನಲ್ಲಿ ಸಂತೋಷದಿಂದ ಸೇವೆ ಸಲ್ಲಿಸಿದ್ದೇನೆ. ಸರ್ಕಾರಿ ನೌಕರರಿಗೆ ವರ್ಗಾವಣೆ ಎನ್ನುವುದು ಕಟ್ಟಿಟ್ಟ ಬುಟ್ಟಿ. ಆದರೆ ನಾವು ಸೇವೆ ಸಲ್ಲಿಸುವ ಜಾಗದಲ್ಲಿ ನಮ್ಮನ್ನು ನೆನೆಯುವ ರೀತಿಯಲ್ಲಿ ಸೇವೆ ಸಲ್ಲಿಸಬೇಕು ಅಷ್ಟೇ ನಗುತ್ತಾ ಹೇಳಿದರು. ನನ್ನ ಜೊತೆ ಸಹಕರಿಸಿದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳು ಎಂದು ತಿಳಿಸಿದರು. ನೂತನವಾಗಿ ಆಗಮಿಸಿದ ತಹಶೀಲ್ದಾರ್ ಭರತ್ ಅವರಿಗೆ ಕ್ಷೇತ್ರದಲ್ಲಿ ಸರ್ಕಾರಿ ಸ್ಮಶಾನದ. ಹಾಗೂ ಗಡಿ ಸಮಸ್ಯೆಗಳು ಇರುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿ ಪರಿಹರಿಸಿ ಕೊಡಬೇಕು ಅವರಿಗೆ ತಿಳಿಸಿದರು.
ಕಚೇರಿಯಲ್ಲಿ ಯಾವುದೇ ಕೆಲಸದ ನಿಮಿತ್ತ ತಮಗೆ ಮಾಹಿತಿ ಬೇಕಾದರೆ ನಮ್ಮನ್ನು ಸಂಪರ್ಕಿಸಿ. ನನ್ನ ಸಲಹೆಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಉಪ ತಹಶೀಲ್ದಾರ್. ಮಂಜುನಾಥ್. ಆಹಾರ ಇಲಾಖೆ ನಿರೀಕ್ಷಕರು ಮಲ್ಲಿಕಾರ್ಜುನ. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು. ಎಲ್. ಎನ್ ನರಸಿಂಹಮೂರ್ತಿ. ಸಿ ಡಿ ಪಿ.ಒ. ರಾಜೇಶ್. ಆರ್ ಐ. ಚಂದ್ರಮೋಹನ್. ವಿನುತ್. ರವಿಚಂದ್ರನಾಯ್ಡು. ತುಕಾಲ್ ಶ್ರೀನಿವಾಸ್. ಪಿ.ವಿ ಶ್ರೀನಿವಾಸ್. ಕೃಷ್ಣಮೂರ್ತಿ. ಅಶ್ವಥ್. ವಿಜಿ ಕುಮಾರ್. ಗಂಗಾಧರ್. ತಾಲೂಕಿನ ಎಲ್ಲಾ ವಿಭಾಗದ ಗ್ರಾಮ ಲೆಕ್ಕಾಧಿಕಾರಿಗಳು. ತಾಲೂಕು ಕಚೇರಿಯ ಸಿಬ್ಬಂದಿ ವರ್ಗ ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
