ನೃತ್ಯ ಸಮರ್ಪಣೆ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡ ವಿದೂಷಿ. ಸ್ವಾತಿ ಪಿ ಭಾರದ್ವಾಜ್ ಶಿಷ್ಯೆ ಹಿತನ್ಯ
ಚನ್ನರಾಯಪಟ್ಟಣ: ನೃತ್ಯ ಸಮರ್ಪಣೆ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡ ವಿದೂಷಿ. ಸ್ವಾತಿ ಪಿ ಭಾರದ್ವಾಜ್ ಶಿಷ್ಯೆ ಹಿತನ್ಯ
ಪಟ್ಟಣದ ಗಾಂಧಿ ಸರ್ಕಲ್ ನಲ್ಲಿರುವ ರಾಯರ ರಂಗಮಂದಿರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರಿಗೆ ವಿಶೇಷ ಅಲಂಕಾರ ಅಭಿಷೇಕ
ಸಂಜೆ ಮಂತ್ರಾಲಯ ಪೀಠಾಧಿಪತಿಗಳ ಆಶೀರ್ವಾದದಿಂದ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ. ಸ್ವಾತಿ ಪಿ.ಭಾರದ್ವಾಜ್ ರವರಲಿ ನಿರಂತರ ಭರತನಾಟ್ಯ ಅಭ್ಯಾಸ ಮಾಡುತ್ತಿರುವ ಗ್ರಾಮೀಣ ಪ್ರದೇಶದ ಪ್ರತಿಭೆ ಕು. ಹಿತನ್ಯ ತನ್ನ 10 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ 30 ನಿಮಿಷಗಳ ಕಾಲ ನಿರಂತರವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳವರಿಗೆ ಸಂಬಂಧಿಸಿದ ಕೃತಿಗಳಿಗೆ ಭರತನಾಟ್ಯ ಕಾರ್ಯಕ್ರಮವನ್ನು ರಾಯರಿಗೆ ಸಮರ್ಪಣೆ ಮಾಡುವ ಮೂಲಕ ಜನ್ಮದಿನವನ್ನು ಆಚರಿಸಿಕೊಂಡರು ನೃತ್ಯ ಕಾರ್ಯಕ್ರಮವನ್ನು ಭಕ್ತಾದಿಗಳು ಕಣ್ಣು ತುಂಬಿಕೊಂಡರು ಇದೆ ಸಂದರ್ಭದಲ್ಲಿ ಕಲಾವಿದೆಗೆ ಶ್ರೀ ರಾಘವೇಂದ್ರ ಪುರಸ್ಕಾರ ಪ್ರಶಸ್ತಿ ನೀಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಮಾಡಲಾಯಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
