ಬಾಣಸವಾಡಿ ಸೇನಾ ಗ್ಯಾರಿಸನ್‌ನಲ್ಲಿ ಸೈನಿಕರೊಂದಿಗೆ ರಕ್ಷಾ ಬಂಧನ ಆಚರಿಸಿದ ವಿದ್ಯಾರ್ಥಿಗಳು
ಬೆಂಗಳೂರು: ನ್ಯೂ ಹೊರೈಜನ್ ಪಬ್ಲಿಕ್ ಸ್ಕೂಲ್ ಮತ್ತು ಕೈರಳೀ ನಿಕೇತನ್ ಶಾಲೆಯ ವಿದ್ಯಾರ್ಥಿಗಳು ಬಾಣಸವಾಡಿ ಮಿಲಿಟರಿ ಗ್ಯಾರಿಸನ್‌ನಲ್ಲಿರುವ ಗೂರ್ಖಾ ಆಂಫಿಬಿಯನ್ಸಿನ ಬೈಸನ್ ವಿಭಾಗಕ್ಕೆ ಭೇಟಿ ನೀಡಿ, ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಸೈನಿಕರ ದೈನಂದಿನ ದಿನಚರಿಯನ್ನು ಪರಿಚಯಿಸುವ ಮತ್ತು ರಾಷ್ಟ್ರದ ರಕ್ಷಕರೊಂದಿಗೆ ಶುಭ ರಕ್ಷಾ ಬಂಧನ ಹಬ್ಬವನ್ನು ಆಚರಿಸುವ ಈ ಕಾರ್ಯಕ್ರಮವು ಗ್ಯಾರಿಸನ್ ನ ಕಮಾಂಡರ್ ಕರ್ನಲ್ ಯಶ್ ಅಗರ್ವಾಲ್ ಅವರು ಯುವ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುವ ಮೂಲಕ ಪ್ರಾರಂಭಗೊಂಡಿತು.
ಯುವ ಸಂದರ್ಶಕರು ಸೈನಿಕರಿಗೆ ರಾಖಿಗಳನ್ನು ಕಟ್ಟಿದರು, ರಾಷ್ಟ್ರವನ್ನು ರಕ್ಷಿಸುವಲ್ಲಿ ಅವರ ಸಮರ್ಪಣೆ ಮತ್ತು ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಿದರು. ಪ್ರತಿಯಾಗಿ ಸೈನಿಕರು ವಿದ್ಯಾರ್ಥಿಗಳನ್ನು ಆಶೀರ್ವದಿಸಿದರು ಮತ್ತು ದೇಶಭಕ್ತಿಯ ಮನೋಭಾವವನ್ನು ಬೆಳೆಸುವ ಅವರ ಸೇವೆಯ ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಂಡರು.
ನಂತರ ವಿದ್ಯಾರ್ಥಿಗಳು ಯುದ್ಧ ಗೌರವಗಳು ಮತ್ತು ರೆಜಿಮೆಂಟಲ್ ಸಂಪ್ರದಾಯಗಳ ಬಗ್ಗೆಗಿನ ಶ್ರೀಮಂತ ಇತಿಹಾಸವನ್ನು ತಿಳಿದುಕೊಳ್ಳುವುದರೊಂದಿಗೆ, ವೈಶಿಷ್ಟ್ಯಪೂರ್ಣವಾದ ದೃಷ್ಟಿಕೋನದಿಂದ ವಿಶಿಷ್ಟ ಅನುಭೂತಿಯನ್ನು ಗಳಿಸಿದರು ಮತ್ತು ಒಬ್ಬ ಸೈನಿಕನ ದೈನಂದಿನ ಜೀವನದ ಅನುಭವ ಪಡೆದರು.
ಇವರೆಲ್ಲರ ಈ ಭೇಟಿಯು ಹೃದಯಸ್ಪರ್ಶಿ ರಕ್ಷಾ ಬಂಧನ ಆಚರಣೆಗೆ ಸಾಕ್ಷಿಯಾಯಿತು.
ಈ ಆಚರಣೆಯು ಸೈನಿಕರು ವಿದ್ಯಾರ್ಥಿಗಳೊಂದಿಗೆ ಗುಂಪು ಛಾಯಾಚಿತ್ರ ತೆಗೆಸಿಕೊಂಡು ಹಾಗೂ ಉಪಹಾರದೊಂದಿಗೆ ಮುಕ್ತಾಯಗೊಂಡಿತು. ಇದು ಸಶಸ್ತ್ರ ಪಡೆಗಳು ಮತ್ತು ಅವರು ಸೇವೆ ಸಲ್ಲಿಸುತ್ತಿರುವ ನಾಗರಿಕರ ನಡುವಿನ ಪ್ರೀತಿಯ ನೆನಪುಗಳನ್ನು ಮತ್ತು ಈರ್ವರ ನಡುವಿನ ಬಲವಾದ ಬಾಂಧವ್ಯಕ್ಕೆ ಸಾಕ್ಷಿಯಾಯಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
