ಬಿಜಿಎಂಎಲ್ ಕಾಲೋನಿಗೆ ಭೇಟಿ ನೀಡಿದ ಸಂಸದರು. ಎಂ. ಮಲ್ಲೇಶ್ ಬಾಬು
ಕೆಜಿಎಫ್: ನಗರದ ಮಾರಿಕೊಪ್ಪಮ್ ಬಿಜಿಎಂಎಲ್ ಕಾಲೋನಿಯಲ್ಲಿ ಬೃಹದಾಕಾರದ ಮರ ಬಿದ್ದು, ಮಹಿಳೆ ಒಬ್ಬರು ಸಾವನಪ್ಪಿದ್ದರು. ಈ ಹಿನ್ನೆಲೆ ಸಂಸದರು ಎಂ. ಮಲ್ಲೇಶ್ ಬಾಬು ರವರು ನೊಂದ ಕುಟುಂಬವನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ನಿಮಗೆ ಏನೇ ತೊಂದರೆ ಆದರೂ ನಾವು ನಿಮ್ಮ ಕುಟುಂಬದ ಜೊತೆಯಲ್ಲಿ ಇರುತ್ತೇವೆ ಎಂದರು.ನನ್ನ ಕೈಯಲ್ಲಿ ಆಗುವ ಸಹಾಯ ಮಾಡುತ್ತೇನೆ ಎಂದರು.ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು. ಬಿಜಿಎಂಎಲ್ ಕಾಲೋನಿಗಳಲ್ಲಿ ಇನ್ನು ಹಲವು ಮರಗಳು ಬೀಳುವಂತದ್ದಲ್ಲಿದ್ದು ಅದನ್ನು ಯಾವುದೇ ಪರವಾನಗಿ ಪಡೆಯದೆ ತೆರೆವು ಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಬೆಮಲ್ ಕಾರ್ಖಾನೆಯ ರೈಲ್ವೆ ಕೋಚ್ ಫ್ಯಾಕ್ಟರಿ ಮಧ್ಯಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಸುಳ್ಳು ವದಂತಿಗಳನ್ನು ಹಬ್ಬಿಸಿದ್ದಾರೆ. ಇದರ ಬಗ್ಗೆ ಕ್ಷೇತ್ರದ ಜನತೆ ಯಾರು ತಲೆಕಡಿಸಿಕೊಳ್ಳಬೇಡಿ ಆ ರೀತಿ ಎಂದು ಆಗೋದಿಲ್ಲ ಎಂದು ಭರವಸೆ ನೀಡಿದರು . ಬಿಜಿಎಂಎಲ್ ಮನೆಗಳಿಗೆ ನೋಟಿಸ್ ನೀಡಿರುವ ಬಗ್ಗೆ ಸ್ಪಷ್ಟಪಡಿಸಿದವರು. ಹಕ್ಕು ಪತ್ರ ನೀಡಿರುವ ಮನೆಗಳಿಗೆ ಎಷ್ಟು ವಿಸ್ತೀರ್ಣ ಇದೆ. ಅದರ ಮೇಲೆ ಇದ್ದರೆ ಅಂತವರಿಗೆ ನೋಟಿಸ್ ನೀಡಲಾಗಿದೆ. ಈಗಾಗಲೇ ಹಕ್ಕು ಪತ್ರ ಪಡೆದವರು ಕರಾರು ಪತ್ರದಲ್ಲಿ ಸಹಿ ಹಾಕಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳಬೇಕು. ಕಾರ್ಮಿಕರು ಮನೆಗಳ ಸಮಸ್ಯೆ ಬಗ್ಗೆ ಯಾವುದೇ ಆತಂಕಕ್ಕೆ ಒಳಗಾಗಬೇಡಿ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಭರವಸೆ ನೀಡಿದರು. ಬಿಜಿಎಂಎಲ್ ಕಾರ್ಮಿಕರ ಬಾಕಿ ಇರುವ ಗ್ರಾಜೂಟಿ ಹಣ ಮನೆಗಳ ಸಮಸ್ಯೆಯನ್ನು ಪರಿಹಾರ ಮಾಡಲು ಗಣಿ ಮಾಜಿ ನೌಕರರ ಎಲ್ಲಾ ಸಂಘಟನೆಗಳು ಒಂದುಗೂಡಿಕೊಂಡು ಬಂದರೆ ಇದಕ್ಕೆ ಶಾಶ್ವತ ಪರಿಹಾರ ಮಾಡಿಕೊಡುತ್ತೇನೆ. ಇದನ್ನು ಕಾರ್ಮಿಕರು ಅರ್ಥ ಮಾಡಿಕೊಳ್ಳಬೇಕು ಎಂದರು. ಬೆಮಲ್ ಗುತ್ತಿಗೆ ಕಾರ್ಮಿಕರು. ನಾಲ್ಕು ತಿಂಗಳಿಂದ ನಮ್ಮನ್ನು ಭೇಟಿಯಾಗಿಲ್ಲ. ಸಮಸ್ಯೆ ಹೆಚ್ಚಾದಾಗ ನಮ್ಮ ಹತ್ತಿರ ಬರುತ್ತಾರೆ. ಇದನ್ನು ಅವರು ಮನವರಿಕೆ ಮಾಡಿಕೊಳ್ಳಬೇಕು.ನನ್ನನ್ನು ಭೇಟಿ ಮಾಡಿದರೆ ನನ್ನ ಕೈಯಲ್ಲಿ ಆಗುವ ಸಹಾಯ ಮಾಡುತ್ತೇನೆ. ಕೇಂದ್ರದ ಮಂತ್ರಿಗಳ ಜೊತೆ ಚರ್ಚೆ ನಡೆಸುತ್ತೇನೆ ಆ ಕಾರ್ಮಿಕರಿಗೆ ನ್ಯಾಯ ಕೊಡಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕೆ. ರಾಜೇಂದ್ರನ್. ಬಿಜಿಎಂಎಲ್ ಕಾರ್ಮಿಕ ಸಂಘದ ಮುಖಂಡರು ಭಾಗವಹಿಸಿದ್ದರು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
