ಮಹನೀಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಶಾಸಕಿ: ರೂಪಕಲಾ ಶಶಿಧರ್

Jun 14, 2025 - 10:36
 0  3
ಮಹನೀಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ ಶಾಸಕಿ: ರೂಪಕಲಾ ಶಶಿಧರ್

ಕೆಜಿಎಫ್: ಮಹನೀಯರ ಜಯಂತಿಗಳು ಕೇವಲ ಆಡಂಬರ, ಅದ್ದೂರಿಯ ಸಂಕೇತವಾಗಬಾರದು. ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾರ್ಥಕ ಆಚರಣೆ ಆಗಬೇಕೆಂದು ಶಾಸಕಿ. ರೂಪಕಲಾ ಶಶಿಧರ್. ತಿಳಿಸಿದರು. ನಗರದ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ನಾಡ ಹಬ್ಬಗಳ ಆಚರಣೆ ಸಮಿತಿಯಿಂದ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇದೇ ತಿಂಗಳು ಜೂನ್ 27ರಂದು ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಿಸಬೇಕಾಗಿದೆ. ನಾಡಪ್ರಭು ಕೆಂಪೇಗೌಡರು ಒಂದು ಜಾತಿಗೆ ಸೀಮಿತವಲ್ಲ. ಅವರು ಬೆಂಗಳೂರು ನಿರ್ಮಾತೃ ಅಂದಿನ ಕಾಲದಲ್ಲಿ ದೂರದೃಷ್ಟಿಯನ್ನು ಇಟ್ಟುಕೊಂಡು ನಾಡನ್ನು ಕಟ್ಟಿದ್ದು, ಮನುಷ್ಯ ಜೀವನ ನಡೆಸಲು ಏನೆಲ್ಲ ಬೇಕು ಎಂದು. ರೂಪಿಸಿಕೊಟ್ಟ ವಿಶ್ವ ನಾಯಕರು ನಮ್ಮ ನಾಡಪ್ರಭು ಕೆಂಪೇಗೌಡರು. ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಒಕ್ಕಲಿಗ ಸಂಘದ ತಾಲೂಕ ಅಧ್ಯಕ್ಷರು. ರಾಜಗೋಪಾಲಗೌಡ ಮಾತನಾಡಿ ಕೆಂಪೇಗೌಡ ಜಯಂತಿಯನ್ನು ತಾಲೂಕ್ ಆಡಳಿತ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಬೇಕು. ನಮ್ಮ ಒಕ್ಕಲಿಗ ಸಮುದಾಯದಲ್ಲಿ ಎಸ್ ಎಸ್ ಎಲ್ ಸಿ ಹಾಗು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಮಾಡಬೇಕು. ತಾಲೂಕ್ ಆಡಳಿತ ವತಿಯಿಂದ ಕೆಂಪೇಗೌಡರ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಸಬೇಕು. ಹಾಗೂ ಸರ್ಕಾರಿ ಕಚೇರಿಗಳ ಮೇಲೆ ದೀಪಾಲಂಕಾರ ಮಾಡಬೇಕು. ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸುತ್ತದೆ. ಅಂದು ಎಲ್ಲಾ ಕಚೇರಿಯ ಅಧಿಕಾರಿಗಳು.ಸಮುದಾಯದ ಮುಖಂಡರು ಉತ್ಸವ ಜೊತೆ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರು ವಲ್ಲಳ್ಳ ಮುನಿಸ್ವಾಮಿ ಮಾತನಾಡಿ. ಕೆಂಪೇಗೌಡರ ಜೀವನ ಚರಿತ್ರೆ ಕುರಿತು ವಿಸ್ಕೃತವಾಗಿ ವಿವರಿಸಿದರು . ಮುಖಂಡರು ಅಮು ಲಕ್ಷ್ಮೀನಾರಾಯಣ್  ಮಾತನಾಡಿ ಜೂನ್ 27 ರಂದು ಕೆಂಪೇಗೌಡ ಜಯಂತಿ ಅದ್ದೂರಿಯಾಗಿ ಆಚರಣೆ ಮಾಡಬೇಕು.    ನಂತರ ಬೇತಮಂಗಲದಲ್ಲಿ ವಿಶೇಷವಾಗಿ ಒಂದು ದಿನ ತಾಲೂಕಿನ ಎಲ್ಲಾ ಹಳ್ಳಿಗಳಿಂದ ಪಲ್ಲಕ್ಕಿಗಳ ಬರ ಮಾಡಿಕೊಂಡು. ಮೆರವಣಿಗೆ ಮೂಲಕ ಅದ್ದೂರಿಯಾಗಿ ಆಚರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರು. ಪವನ್ ಕುಮಾರ್ . ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ. ವೆಂಕಟೇಶಪ್ಪ. ಸರ್ಕಲ್ ಇನ್ಸ್ಪೆಕ್ಟರ್. ಮಾರ್ಕಂಡಯ್ಯ. ನವೀನ್. ಸಿ ಡಿ ಪಿ ಒ. ರಾಜೇಶ್. ಬೆಸ್ಕಾಂ ಇಲಾಖೆ ಹೇಮಲತಾ. ಆಹಾರ ಸರಬರಾಜು ಇಲಾಖೆ ಅಧಿಕಾರಿ. ಮಲ್ಲಿಕಾರ್ಜುನ. ನಗರಸಭೆ ಸದಸ್ಯ ಮಾಣಿಕ್ಯಂ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು. ಎಲ್. ಎನ್. ನರಸಿಂಹಮೂರ್ತಿ. ಒಕ್ಕಲಿಗ ಸಮುದಾಯದ ಮುಖಂಡರು. ಆಂಜನೇಯ ಗೌಡ. ವರದರಾಜಯ್ಯ. ಮೂರ್ತಿ. ಶ್ರೀನಿವಾಸಲು. ಜಯಶಂಕರ್. ಇನ್ನು ಹಲವಾರು ಮುಖಂಡರು ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456