ಮಿಟ್ಟ ಕಂಬಂಪಲ್ಲಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕಿ. ಎಂ. ರೂಪಕಲಾ

Jul 8, 2025 - 16:55
 0  6
ಮಿಟ್ಟ ಕಂಬಂಪಲ್ಲಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕಿ. ಎಂ. ರೂಪಕಲಾ

ಕೆಜಿಎಫ್: ಮಾರಿಕುಪ್ಪಂ ಗ್ರಾಮ ಪಂಚಾಯಿತಿಯ ಮಿಟ್ಟ ಕಂಬಂಪಲ್ಲಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವಿಶೇಷ ಅನುದಾನದಡಿ ನೂತನವಾಗಿ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕಿ ಎಂ.ರೂಪಕಲಾ ಶಶಿಧರ್ ರವರು ಉದ್ಘಾಟಿಸಿದರು.

 ಈ ವೇಳೆ ಮಾತನಾಡಿದವರು ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿಗೆ ಬೇಡಿಕೆ ಇದ್ದು, ಈ ಭಾಗದ ಹಳ್ಳಿಯ ಗ್ರಾಮಸ್ಥರು ಮುಖಂಡರು ಹಲವು ಬಾರಿ ಕುಡಿಯುವ ನೀರಿಗೆ ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಈ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಯಿತು.
ಹಲವು ಗ್ರಾಮಗಳಿಗೆ ರಸ್ತೆಗಳ ಮೂಲಸೌಕರ್ಯ ಕೊರತೆ ಇದ್ದು, ಬಸ್ ಪ್ರಯಾಣ ಹಾಗೂ ಆಟೋಗಳ. ಸಂಚಾರಕ್ಕೆ ಅಡ್ಡಿಯಾಗಿತ್ತು. ಇದರ ಬಗ್ಗೆ ಗಮನ ಹರಿಸುವ ಮೂಲಕ ಸರ್ಕಾರ ಈ ವರ್ಷದಲ್ಲಿ ಪ್ರಗತಿಪಥ. ಸಂಚಾರ ರಸ್ತೆ. ಮಾಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ಗ್ರಾಮೀಣ ಅಭಿವೃದ್ಧಿ ಇಲಾಖೆ ವತಿಯಿಂದ ತಾಲೂಕು ಮಟ್ಟದಲ್ಲಿ 30 ಕೋಟಿ ಬಿಡುಗಡೆಗೊಳಿಸಲಾಗಿದೆ.
ಇದನ್ನು 40 ಕಿಲೋಮೀಟರ್ ಸಂಪರ್ಕ ಇಲ್ಲದ ಗ್ರಾಮಗಳ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಮಿಟ್ಟ ಕಂಬಂಪಲ್ಲಿ ಇಂದ ದಾಯಿಮಾನ್ ಗುಡಿಸಿ. ಕಳ್ಳಿಕುಪ್ಪ. ಸುರಪಲ್ಲಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಮತ್ತು ಇನ್ನು ಹಲವು ಕಡೆ ಗ್ರಾಮದಲ್ಲಿ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ಸದಸ್ಯರು ಪ್ರಸಾದ ರೆಡ್ಡಿ ಮಾತನಾಡಿ. ನಮ್ಮ ಶಾಸಕರು ರೂಪಕಲಾ ಶಶಿಧರ್ ಮೇಡಂ ನವರು. ಗ್ರಾಮಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಶುದ್ಧ ಕುಡಿಯುವ ನೀರಿನ ಘಟಕಗಳು. ಹೈ ಮಾಸ್ ಲೈಟ್ ಗಳು. ರಸ್ತೆ ಸಂಪರ್ಕಗಳು. ಚರಂಡಿಗಳು. ಎಲ್ಲಾ ಕಾಮಗಾರಿಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇಂಥವರನ್ನು ಪಡೆಯಲು ನಾವು ಪುಣ್ಯರು. ನುಡಿದಂತೆ ನಡೆಯುತ್ತಿರುವ ಶಾಸಕರು. ಸರ್ಕಾರದರ ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕರು ಬಳಸಿಕೊಳ್ಳುತ್ತಿದ್ದಾರೆ. ಈಗ ಗ್ರಾಮಗಳಲ್ಲಿ ಪ್ರತಿಯೊಬ್ಬ ಬಡ ಕುಟುಂಬ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಇದು ನಮ್ಮ ಹೆಮ್ಮೆಯ ವಿಚಾರ ಎಂದರು. ಈ ಸಂದರ್ಭದಲ್ಲಿ ಮುಖಂಡರು.
ವಕೀಲರು. ಪದ್ಮನಾಭ ರೆಡ್ಡಿ. ಆ ಗ್ರಾಮದ ಮುಖಂಡರು ನಾರಾಯಣ ರೆಡ್ಡಿ. ಗ್ರಾಮ  ಸದಸ್ಯರು. ಜಯಲಕ್ಷ್ಮಮ್ಮ. ರಘುಕುಮಾರ್. ಗಣೇಶಪ್ಪ. ಮಾದಪ್ಪ. ಪುರುಷೋತ್ತಮ್ ರೆಡ್ಡಿ. ವಿಜಿ. ಶಾನ್ ಪಾಷ. ವೆಂಕೋಬ್ ರಾವ್. ಏಕಾಂತ್. ಸಾಲನ್. ಮೊದಲಾದವರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456