ಮೌನದ ಭಾಷೆಯಿಂದಲೇ ಪ್ರೇಕ್ಷಕರ ಕಣ್ಣನ್ನು ತೇವವಾಗಿಸಿದ ಭಾವನಾತ್ಮಕ ನೃತ್ಯ ನಾಟಕ " ರುದ್ರ ಗಣಿಕ"
ಚಪ್ಪಾಳೆ...... ಚಪ್ಪಾಳೆ. ಚಪ್ಪಾಳೆ...
ಸಂಭ್ರಮದ ಕೂಗಾಟ, ಸಂತಸದ ಚೀರಾಟ... ನಿರಂತರ ಚಪ್ಪಾಳೆ ಈ ಘಟನೆ ನಡೆದದ್ದು ಕಲಾಗ್ರಾಮದ ರಂಗ ಮಂದಿರದಲ್ಲಿ.
ಈ ಘಟನೆ ನಡೆದದ್ದು ಫೆಬ್ರವರಿ 4. ರಾತ್ರಿ ಸುಮಾರು 8:45.
ಮಲ್ಲತ ಹಳ್ಳಿಯ ಕಲಾಗ್ರಾಮದ ರಂಗಮಂದಿರದಲ್ಲಿ ಜರುಗಿದ ಮೂಕ ನಾಟಕವನ್ನು ವೀಕ್ಷಿಸಿ ಪ್ರೇಕ್ಷಕರು ತನ್ನ ಕಣ್ಣುಗಳನ್ನು ತೇವವಾಗಿಸಿಕೊಂಡರು. " ರುದ್ರ ಗಣಿಕ" ನಾಟಕದಲ್ಲಿ ಅಭಿನಯಿಸಿದ ಕೊಲ್ಕತ್ತಾದ ಕಲಾವಿದರಿಗೆ ಹುರಿದುಂಬಿಸಲು, ಪ್ರೋತ್ಸಾಹಿಸಲು, ಚಪ್ಪಾಳೆಯ ಪ್ರಕ್ರಿಯೆಯನ್ನು ಮುಂದುವರಿಸುತ್ತಲೇ ಇದ್ದರು.
ಈ ಬೆಂಬಲ, ಪ್ರೋತ್ಸಾಹ, ಸಂತೋಷದ ಕೊಗಾಟ, ಸಂಭ್ರಮದ ಚೀರಾಟದಿಂದ ಕಲಾ ವಿದರೂ ಹಾಗೂ ನಾಟಕದ ತಂತ್ರಜ್ಞರು ಆನಂದಬಾಷ್ವವನ್ನು ತಮ್ಮ ತಮ್ಮ ಕಣ್ಣುಗಳಲ್ಲಿ ತೋರ್ಪಡಿಸಿದರು.
ಈ ಒಂದು ಭಾವನಾತ್ಮಕ ಹೃದಯ ಸ್ಪರ್ಶಿ ಮೌನದ ಭಾಷೆಯಲ್ಲಿ " ದೇವದಾಸಿ " ಪದ್ಧತಿ ಸುತ್ತಮುತ್ತಲಿನ ಪರಿಕಲ್ಪನೆ ಹೊಂದಿತ್ತು. ದೇವದಾಸಿ ಪದ್ಧತಿಯನ್ನು ಮಹಿಳೆ ಯಾವ ರೀತಿ ಅನುಭವಿಸುತ್ತಾಳೆ, ಎದುರಿಸುತ್ತಾಳೆ, ಪುರುಷರ ದೌರ್ಜನ್ಯಕ್ಕೆ ಉತ್ತರಗಳನ್ನು ನೀಡುವ ಅಂಶಗಳನ್ನು ಈ ನೃತ್ಯ ನಾಟಕ ಹೊಂದಿತ್ತು.
ಕೊಲ್ಕತ್ತಾದ " ಭಗವತಿ ನೃತ್ಯ ಮಂದಿರ " ತಂಡ ಈ ಪ್ರದರ್ಶನವನ್ನು ನಿರ್ವಹಿಸಿತು.
ಇದರರಂಗಪಟ್ಟಿ ಹಾಗೂ ನಿರ್ದೇಶನವನ್ನು " ಸೋಮಗಿರಿ " ಅದ್ಭುತವಾಗಿ ವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
