ಯೋಗ-ಧ್ಯಾನದ ಮೂಲಕ ಉತ್ತಮ ಆರೋಗ್ಯ ಲಭ್ಯ

Oct 28, 2025 - 16:27
 0  3
ಯೋಗ-ಧ್ಯಾನದ ಮೂಲಕ ಉತ್ತಮ ಆರೋಗ್ಯ ಲಭ್ಯ

  ಚನ್ನರಾಯಪಟ್ಟಣ: ಯೋಗ- ಧ್ಯಾನ- ಮುದ್ರೆಗಳ ಮೂಲಕ, ಚನ್ನರಾಯಪಟ್ಟ ಣವನ್ನು ಆರೋಗ್ಯವಂತ, ನಗರವನ್ನಾಗಿ ಮಾಡುವ ಚಿಂತನೆ ನಮ್ಮದು ಎಂದು, ಹೋಲಿ ಸ್ಟಿಕ್ ಯೋಗ ಮುದ್ರಾ ಕೇಂದ್ರದ ಸಂಸ್ಥಾಪಕಿ, ರೇಖಾ ರಾಣಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅವರು ಈ ಬಗ್ಗೆ ಪತ್ರಕರ್ತರ ಭವನದಲ್ಲಿ ಮಾತನಾಡಿ, ತಮ್ಮ ಸಂಸ್ಥೆ ಒಂದು ವರ್ಷ ಪೂರೈಸಿದ್ದು, ಪಟ್ಟಣದ ಬೀದಿ ಬದಿ ವ್ಯಾಪಾರಿಗಳಿಗೆ, ಪೌರಕಾರ್ಮಿಕರಿಗೆ, ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆ ಯರಿಗೆ, ಮಹಿಳೆಯರಿಗೆ ವೃದ್ಧರಿಗೆ, ಯೋಗ ಕೇಂದ್ರದ ಮೂಲಕ, ಉಚಿತವಾಗಿ, ಆರೋಗ್ಯದ ಗುಟ್ಟನ್ನು ತಿಳಿಸಲಾಗುತ್ತಿದೆ. .1000 ಮಂದಿಗೆ, ಯೋಗ ಮುದ್ರೆಗಳ ತರಬೇತಿ ನೀಡಲಾಗಿದೆ.

 ಪ್ರತಿ ಮನೆ ಮನೆಗೂ ಯೋಗ, ಧ್ಯಾನ ಮುದ್ರೆಗಳ ಬಗ್ಗೆ, ತಿಳಿಸಿ ಪ್ರತಿ ಮನೆಯಲ್ಲೂ ಒಬ್ಬೊಬ್ಬ ಯೋಗ ಶಿಕ್ಷಕ, ತಯಾರಾಗಬೇಕು, ಆ ಮೂಲಕ, ನಗರ ಪೂರ್ತಿ ಆರೋಗ್ಯವಂತ ಸಮಾಜ ನಿರ್ಮಾಣದ ಗುರಿ ನಮ್ಮದಾಗಿದೆ. ಉತ್ತಮ, ಆಹಾರದ ಅಭ್ಯಾಸ,
ಆರೋಗ್ಯ ಸಮಸ್ಯೆಗೆ ಪರಿಹಾರ ನೀಡುವುದಾಗಿದೆ. ಜೀವನಶೈಲಿ ಮೂಲಕ ಉತ್ತಮ ಆರೋಗ್ಯ ಪಡೆಯಬಹುದು, ಏಕಾಗ್ರತೆ, ತಾಳ್ಮೆ, ಆರೋಗ್ಯ, ಪಡೆಯಲು ಧ್ಯಾನ, ಮುದ್ರೆ ಅಗತ್ಯ.
ಯೋಗ ಎಂದರೆ ಒಗ್ಗಟ್ಟು, ಸಾರ್ವಜನಿಕವಾಗಿ ಬೃಹತ್‌ ಸಂಖ್ಯೆಯಲ್ಲಿ ಯೋಗಾಭ್ಯಾಸ ಕಾರ್ಯಕ್ರಮ ನಡೆಸುವ ಚಿಂತನೆ ನಮ್ಮದಾಗಿದೆ. ಮಗು ತಾಯಿಯ ಗರ್ಭದಲ್ಲೇ ತನ್ನ ಮುಷ್ಟಿಯನ್ನು ಹಿಡಿದಿರುವುದು ಯೋಗ ಮುದ್ರೆಯಾಗಿದೆ, ಬದುಕಿನ ಜೀವನದ, ಪ್ರತಿ ಹಂತದಲ್ಲೂ ಯೋಗ ಮುದ್ರೆ ಸಹಾಯಕ ಎಂದರು.
ಅಂತರಾಷ್ಟ್ರ ಮಟ್ಟದ ಯೋಗ ಪಟು, ಹಾಗೂ ಕೃಷಿ ಇಲಾಖೆಯ ಅಧಿಕಾರಿ ಜಿ ಕೆ ಅರ್ಪಿತ, ಮಾತನಾಡಿ ತಾವು, ಆರೋಗ್ಯ ಬಯಸಿ ಸೂರ್ಯ ನಮಸ್ಕಾರದ ಮೂಲಕ ಯೋಗಭ್ಯಾಸ ಆರಂಭ ಮಾಡಿದ್ದನ್ನು ತಿಳಿಸಿದರು. ಹೋಲಿ ಸ್ಟಿಕ್ ಯೋಗ ಮುದ್ರ ಕೇಂದ್ರ, ನನ್ನನ್ನು ರಾಷ್ಟ್ರ ಅಂತರಾಷ್ಟ್ರ ಮಟ್ಟದ ಯೋಗಪಟುವನ್ನಾಗಿ ಮಾಡಲು, ಕಾರಣವಾಗಿದೆ, ಯೋಗ ಎಲ್ಲ ವಯಸ್ಸನ್ನುವರೆಗೂ ಬೇಕಾಗಿದೆ, ಯೋಗದ ಮೂಲಕ ಶಾಂತಿ ನೆಮ್ಮದಿ ಏಕಾಗ್ರತೆ ಕಾಣಬಹುದು, ತಾವು ಮಲೇಶಿಯಾದಲ್ಲಿ ಜರುಗಿದ ಏಷ್ಯಾ ಪ್ಯಾನಿಕ್ ಅಂತರಾಷ್ಟ್ರಯ ಮಟ್ಟದ ಯೋಗಾ ಸ್ಪರ್ಧೆಯಲ್ಲಿ, ಭಾಗವಹಿಸಿ ಪ್ರಶಸ್ತಿ ಬಹುಮಾನ ಪಡೆದಿದ್ದನ್ನು ವಿವರಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456