ರಾಮಸಾಗರ ಗ್ರಾಪಂ ವ್ಯಾಪ್ತಿಯ ನಿವೇಶನ ರಹಿತ ಬಡವರಿಗೆ ನಿವೇಶನಗಳನ್ನು ನೀಡಲಾಗುವುದು: ಶಾಸಕಿ ರೂಪಕಲಾ
ಪಟ್ಟಣದ ಸಮೀಪದ ದೊಡ್ಡಕಾರಿ ಮಜರಾ ಕಂಬಂಪಲ್ಲಿ ಗ್ರಾಮದಲ್ಲಿ ನಿವೇಶನಗಳನ್ನು ಹಂಚುವ ಸಲುವಾಗಿ ಜಾಗವನ್ನು ವೀಕ್ಷಿಸಲು ಭೇಟಿ ನೀಡಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು. ಕಳೆದ 6 ತಿಂಗಳ ಹಿಂದೆ ಕೂಳೂರು ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮದಲ್ಲಿ ನಿವೇಶನ ರಹಿತ ಕುಟುಂಬಗಳು ನೆಲೆಸಿದ್ದವು ಅಲ್ಲಿನ ಬಡವರು ವಾಸಿಸಲು ಮನೆಗಳಲ್ಲಿದೆ ಹೆಚ್ಚಾಗಿ ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದರು ಆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಈ ದಿನ ರಾಮಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜರಾ ಕಂಬಂಪಲ್ಲಿ ಗ್ರಾಮದ ಸರ್ವೇ ನಂ 2 ರಲ್ಲಿ 2.08 ಎಕರೆ/ ಗುಂಟೆ ವಿಸ್ತೀರ್ಣದಲ್ಲಿ ಸರ್ಕಾರಿ ಜಾಗದಲ್ಲಿ ನಿವೇಶನ ರಹಿತ ಜಾಗವನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಮಂಜೂರಾದ ಜಾಗವನ್ನು ನೆಲಸಮಗೊಳಿಸಿ ಸೈಟ್ ಗಳನ್ನು ನಿರ್ಮಾಣ ಮಾಡಿ ಅನುಕೂಲವಾಗುವಂತೆ ರಸ್ತೆ ಕುಡಿಯುವ ನೀರು ಮೂಲ ಭೂತ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿ ನಿವೇಶನ ರಹಿತ ಬಡವರಿಗೆ ನಿವೇಶನದ ಹಕ್ಕು ಪತ್ರಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿಗೆ ಹಸ್ತಾಂತರ: ರಾಮಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜರಾ ಕಂಬಂಪಲ್ಲಿ ಗ್ರಾಮದ ಸರ್ವೇ ನಂ 2 ರಲ್ಲಿ ವಿಸ್ತೀರ್ಣ 2.08 ಎಕರೆ/ಗುಂಟೆಯಷ್ಟು ಜಾಗದ ನಿವೇಶನಗಳನ್ನು ಹಂಚುವ ಸಲುವಾಗಿ ಶಾಸಕಿ ರೂಪಕಲಾ ನೇತೃತ್ವದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ನಾಗವೇಣಿ ಇಓ ವೆಂಕಟೇಶಪ್ಪ ಪಿಡಿಒ ಚಂದ್ರಕಲಾ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಪ್ಪ , ಕಂದಾಯ ಅಧಿಕಾರಿ ಮುನಿವೆಂಕಟಸ್ವಾಮಿ, ಗ್ರಾಮ ಲೆಕ್ಕಿಗ ಅಂಬರೀಶ್, ಮುಖಂಡರಾದ ರಾಧಾಕೃಷ್ಣ ರೆಡ್ಡಿ, ಚೆನ್ನಕೇಶವ ರೆಡ್ಡಿ, ಮುರಳಿ, ನಾಗರಾಜ್ ರೆಡ್ಡಿ, ರಾಮಕೃಷ್ಣ ರೆಡ್ಡಿ, ಹಾಗೂ ಅನೇಕ ಕಾರ್ಯಕರ್ತರು, ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
