ರಾಯರ ರಂಗ ಮಂದಿರದಲ್ಲಿ ದಾಸವಾಣಿ ಕಾರ್ಯಕ್ರಮ
ಚನ್ನರಾಯಪಟ್ಟಣ: ಮಂತ್ರಾಲಯ ಪೀಠಾಧಿಪತಿಗಳ ಆಶೀರ್ವಾದದಿಂದ ಚನ್ನರಾಯಪಟ್ಟಣದ ಗಾಂಧಿ ಸರ್ಕಲ್ ನಲ್ಲಿರುವ ರಾಯರ ರಂಗಮಂದಿರದಲ್ಲಿ ಮೇ 29ರಂದು ಗುರುವಾರ ಬೆಳಿಗ್ಗೆ ಶ್ರೀ ರಾಘವೇಂದ್ರ ಸ್ವಾಮಿಗಳವರಿಗೆ ವಿಶೇಷ ಅಲಂಕಾರ ಅಭಿಷೇಕ ಪ್ರಸಾದ ಸೇವೆ ನೆಡೆಯಿತು. ಸಂಜೆ ಅಖಿಲ ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟದ ಆಶ್ರಯದಲ್ಲಿ ಬೆಂಗಳೂರಿನ ಹಿರಿಯ ಕಲಾವಿದರಾದ ಡಾ. ವಿಟ್ಟಲ್ ಹಾಗೂ ಶ್ರೀ ಪ್ರಶಾಂತ್ ರವರ ತಂಡದೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳವರಿಗೆ ಸಂಬಂಧಿಸಿದ ಕೃತಿಗಳಿಗೆ ಸಂಗೀತ ದಾಸವಾಣಿ ಕಾರ್ಯಕ್ರಮವನ್ನು ಸಮರ್ಪಣೆ ಮಾಡಿದ ಕಾರ್ಯಕ್ರಮವನ್ನು ನೂರಾರು ಜನ ಭಕ್ತಾದಿಗಳು ಕಣ್ಣು ತುಂಬಿಕೊಂಡರು ಇದೆ ಸಂದರ್ಭದಲ್ಲಿ ಕಲಾವಿದರಿಗೆ ಮಂತ್ರಾಲಯದ ಪರಿಮಳ ಪ್ರಸಾದ ನೀಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು ನಂತರ ಮಹಾಮಂಗಳಾರತಿ ಪ್ರಸಾದನ ವಿನಿಯೋಗ ಮಾಡಲಾಯಿತು ರಾತ್ರಿ ಸೇವೆಯಲ್ಲಿ ಎ. ಸಿ. ನಾಗಪ್ಪ ದಂಪತಿಗಳು, ಶ್ರೀ ಮಂಜುನಾಥ ಕುಟುಂಬ, ಬರೋಡ ಬ್ಯಾಂಕ್ ವ್ಯವಸ್ಥಾಪಕರಾದ ಎಸ್. ಮಂಜುನಾಥ್ ಮತ್ತು ಕುಟುಂಬ, ಕಾಳೇನಹಳ್ಳಿ ಆನಂದ್, ರಂಗಮಂದಿರದ ಮುಖ್ಯಸ್ಥರಾದ ಶ್ರೀಮತಿ ಕೆ ಆರ್ ಅನಿತಾ, ಎಂ ಕೆ ಪ್ರಕಾಶ್ ಹಾಗೂ ಅಖಿಲ ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟದ ಸಂಚಾಲಕರಾದ ವಿದೂಷಿ. ಶ್ರೀಮತಿ ಡಾ.ಸ್ವಾತಿ ಪಿ ಭಾರದ್ವಾಜ್, ಯೋಗೇಶ್, ಅರುಣ್, ಮೋನಿಷ, ಹಿತನ್ಯ, ಸೇರಿದಂತೆ ಇತರರು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
