ಶ್ರೀ ಪ್ರಸನ್ನ ಲಕ್ಷ್ಮಿ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು
ಕೆಜಿಎಫ್ : ರಾಬರ್ಟ್ ಸನ್ ಪೇಟೆ ಪ್ರಸನ್ನ ವೆಂಕಟರಮಣ ಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮುಂಜಾನೆ ನಾಲ್ಕು ಮೂವತ್ತಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದ ಶಾಸಕಿ ರೂಪಕಲಾ ಶಶಿಧರ್.ಕಂದಾಯ ಅಧಿಕಾರಿ ತಹಶೀಲ್ದಾರ್ ಎಚ್. ಜೆ. ಭರತ್. ಉಪ ತಹಶೀಲ್ದಾರ್ ಮಂಜುನಾಥ್. ರಥ ಎಳಿಯುತ್ತಿದ್ದಂತೆ ಭಕ್ತರು ದವನ ಉಪ್ಪು ಮತ್ತು ಮಂಗಳಕರ ವಸ್ತುಗಳನ್ನು ಅರ್ಪಿಸಿ ಹರಿಕೆ ಸಲ್ಲಿಸಿದರು.
ಬ್ರಹ್ಮ ರಥೋತ್ಸವ ಚಂದ್ರಗ್ರಹಣದ ಅಂಗವಾಗಿ ಈ ವರ್ಷ ಸಮಯವನ್ನು ಬದಲಾಯಿಸಲಾಗಿತ್ತು ಮುಂಜಾನೆ 4:30ಕ್ಕೆ ಪೂಜೆ ಮಾಡಿ ನಾಲ್ಕು ನಲವತ್ತೈದಕ್ಕೆ ದೇವಾಲಯದಿಂದ ಉತ್ಸವ ಮೂರ್ತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ಬೆಳಿಗ್ಗೆ 10:45 ಕ್ಕೆ ದೇವಾಲಯಕ್ಕೆ ಮುರಳಿ ಬಂತು. ದೇವರ ದರ್ಶನ ಪಡೆಯಲು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಬ್ರಹ್ಮರಥೋತ್ಸವ ಅಂಗವಾಗಿ ಮೂಲ ದೇವರನ್ನು ವಿಶೇಷವಾಗಿ ಹೂಗಳಿಂದ ಅಲಂಕರಿಸಲಾಗಿತ್ತು. ದೇವಾಲಯಗಳಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು ಜಾತ್ರೆಯಲ್ಲಿ ಭಕ್ತರಿಗೆ ಪಾನಕ ಹಾಗೂ ಕೋಸಂಬರಿಯನ್ನು ಭಕ್ತಾದಿಗಳಿಗೆ ವಿತರಣೆ ಮಾಡಲಾಯಿತು.ಈ ಬ್ರಹ್ಮ ರಥೋತ್ಸವವನ್ನು ಕಣ್ಣು ತುಂಬುಕೊಳ್ಳಲು,ನೆರೆ ಜಿಲ್ಲೆಗಳಾದ ಆಂಧ್ರ, ತಮಿಳ್ನಾಡು ರಾಜ್ಯದ ಪ್ರಮುಖ ಜಿಲ್ಲೆಗಳಿಂದಆಗಮಿಸುವುದು ವಿಶೇಷ .ಪೂಜೆ ಕೈ ಕಾರ್ಯಗಳನ್ನು ಬ್ರಾಹ್ಮಣ ಸಮುದಾಯದಿಂದ ವಿಶೇಷವಾಗಿ ಆಚರಣೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
