ಸ್ಟ್ರಚರ್ ನಲ್ಲಿ ಮಲಗಿ ಪರೀಕ್ಷೆ ಬರೆದ ಬಾಲಕಿಗೆ ಧೈರ್ಯ ತುಂಬಿದ ಎಸ್ ಪಿ. ಶಿವಾಂಶು ರಜಪೂತ್
ಕೆಜಿಎಫ್: ಅಪಘಾತದಲ್ಲಿ ಕಾಲು ಮುರಿದು ಏಳು ತಿಂಗಳನಿಂದ ಹಾಸಿಗೆಯಲ್ಲಿದ್ದು,ಈ ಬಾರಿ ಎಸ್ಎಸ್ ಎಲ್ ಸಿ ಪರೀಕ್ಷೆಯನ್ನು ಸ್ಟ್ರಕ್ಚರ್ನಲ್ಲೇ ಮಲಗಿ ಬರೆದ ಎಸ್. ಕುಸುಮ ಅವರ ಮನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶಿವಾಂಶು ರಜಪೂತ್ ಸೋಮವಾರ ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿ ಪೊಲೀಸ್ ಇಲಾಖೆಯಿಂದ ಸಂಗ್ರಹಿಸಿದ ಸಹಾಯಧನ ನೀಡುವುದರ ಮೂಲಕ ಮಾನವೀಯತೆ ಮೆರೆದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಎಸ್. ಕುಸುಮ ವಿದ್ಯಾರ್ಥಿನಿ ತಾನು ಗಾಯಗೊಂಡಿದ್ದರೂ ವಿದ್ಯಾಭ್ಯಾಸ ಮಾಡುವ ಹಂಬಲಇದೆ ಇದನ್ನು ನಾವು ಬೆಂಬಲಿಸಬೇಕು.ಈ ವಿದ್ಯಾರ್ಥಿನಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ನಮ್ಮ ಪೊಲೀಸ್ ಇಲಾಖೆ ವತಿಯಿಂದ ಇವರ ಕುಟುಂಬಕ್ಕೆ ಯಾವುದೇ ವಿಚಾರದಲ್ಲಿಯೂ ಸಹಾಯ ನೀಡಲು ಸಿದ್ದರಿದ್ದೇವೆಎಂದು ತಿಳಿಸಿದರು.
ಎಸ್ .ಕುಸುಮ ಅಪಘಾತಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕಾರ ನ್ಯಾಯ ಒದಗಿಸಲು ನಮ್ಮ ಇಲಾಖೆ ಮುಂದೆ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಡಿ ವೈ ಎಸ್ ಪಿ .ಲಕ್ಷ್ಮಯ್ಯ, ಸರ್ಕಲ್ ಇನ್ಸ್ಪೆಕ್ಟರ್ಗಳಾದ . ಮಾರ್ಕಂಡಯ್ಯ. ಅನಿಲ್ ಕುಮಾರ್ . ಇನ್ಸ್ಪೆಕ್ಟರ್ಗಳಾದ. ಮಂಜುನಾಥ್. ಸೋಮಶೇಖರ್. ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗ ಹಾಜರಿದ್ದರು .
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
