ಸ್ವತಂತ್ರ ದಿನಾಚರಣೆ ಹಾಗೂ ಕೃಷ್ಣ ಜಯಂತಿ. ಮತ್ತು ನೂಲಿಯ ಚಂದಯ್ಯ ಜಯಂತಿ ಆಚರಣೆಗೆ ಸಕಲ ಸಿದ್ಧತೆ
ಕೆಜಿಎಫ್: ಸ್ವತಂತ್ರ ದಿನಾಚರಣೆ ಅಂಗವಾಗಿ ಆಗಸ್ಟ್ 15ರಂದು ಈ ಬಾರಿಯ ಸ್ವತಂತ್ರ ದಿನಾಚರಣೆಯ ತಾಲೂಕು ಮಟ್ಟದ ಕಾರ್ಯಕ್ರಮವನ್ನು ನಗರಸಭೆ ಮೈದಾನದಲ್ಲಿ ಅರ್ಥಪೂರ್ಣವಾಗಿ ಹಾಗೂ ಹಬ್ಬದ ಸಂಭ್ರಮದಂತೆ ಆಚರಿಸಲಾಗುವುದು ಎಂದು ಶಾಸಕಿ ರೂಪಕಲಾ ಶಶಿಧರ್ ತಿಳಿಸಿದರು.
ಅವರು ತಾಲೂಕು ಕಚೇರಿ ಆವರಣದಲ್ಲಿ ಸ್ವಾತಂತ್ರ ದಿನಾಚರಣೆ ಹಾಗೂ ನುಲಿಯ ಚಂದಯ್ಯ ಮತ್ತು ಕೃಷ್ಣ ಜಯಂತಿ ಆಚರಣೆ ಅಂಗವಾಗಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷ್ಣ ಜಯಂತಿ ಆಚರಣೆ ಅಂಗವಾಗಿ ಮುಖಂಡರನ್ನು ಅಭಿಪ್ರಾಯಗಳನ್ನು ಕೇಳಿದಾಗ ಕೆಜಿಎಫ್ ತಾಲೂಕು ಯಾದವ್ ಸಂಘದ ಅಧ್ಯಕ್ಷರು. ಉಮೇಶ್ ಯಾದವ್ ಮಾತನಾಡಿ. ಪ್ರತಿವರ್ಷದಂತೆ ಈ ವರ್ಷ ನಮ್ಮ ಸಮುದಾಯದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೃಷ್ಣ ಜಯಂತಿ ಆಚರಣೆ ಬಗ್ಗೆ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದು,
ಕೃಷ್ಣ ಜಯಂತಿ ಆಚರಣೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕಾರ್ಯಕ್ರಮದಲ್ಲಿ ಶಾಸಕರು ಮತ್ತು ಅಧಿಕಾರಿಗಳು ಎಲ್ಲ ಸಾರ್ವಜನಿಕರ ಭಾಗವಹಿಸಿದರೆ ಸಾಕು ಎಂದು ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಯಾದವ ಸಮುದಾಯಕ್ಕೆ ಭವನ ನಿರ್ಮಾಣ ಮಾಡಲು ಜಮೀನು ಮಂಜೂರು ಮಾಡಲು ತಹಶೀಲ್ದಾರ್ ಭರತ್ ರವರಿಗೆ ಮುಖಂಡರಿಂದ ಮನವಿ ಸಲ್ಲಿಸಲಾಯಿತು.
ಅದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು. ಸರ್ಕಾರದಿಂದ ಏನು ಅನುದಾನ ಬರುತ್ತೆ ಅದನ್ನು ನೀವು ಪಡೆದುಕೊಳ್ಳಿ. ನನ್ನ ಕೈಯಲ್ಲಿ ಆಗುವ ಸಹಾಯವನ್ನು ನಾನು ಮಾಡುತ್ತೇನೆ. ಜಮೀನು ಮಂಜೂರು ಮಾಡಲು ಸರ್ಕಾರದೊಂದಿಗೆ ಚರ್ಚೆ ನಡೆಸಿ ತೀರ್ಮಾನಿಸುತ್ತೇವೆ.ಒಟ್ಟಾರೆಯಾಗಿ ಕೃಷ್ಣ ಜಯಂತಿಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.
ಶ್ರೀ ನೂಲಿಯ ಚಂದಯ್ಯ ಜಯಂತಿಯ ಆಚರಣೆ ಬಗ್ಗೆ ಪ್ರಸ್ತಾಪಿಸಿದ ಶಾಸಕರು ಮುಖಂಡರ ಸಲಹೆಗಳನ್ನು ಕೇಳಿದರು.
ಕೊರಚಾ ಸಮುದಾಯದ ತಾಲೂಕು ಮುಖಂಡರು ಬಾಲಕೃಷ್ಣ ಮಾತನಾಡಿ. ಶ್ರೀ ನೂಲಿಯ ಚಂದಯ್ಯ ಕಾಯಕ ಯೋಗಿಯಾಗಿದ್ದು, ಅವರು ಯಾವುದೇ ಒಂದು ಸಮುದಾಯಕ್ಕೆ ಸೇರಿದ ವ್ಯಕ್ತಿಯಲ್ಲ ಅವರು ಸಮುದಾಯದವರನ್ನು ಒಂದುಗೂಡಿಸಿಕೊಂಡು ಹೋದವರು. ಅಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ಸರ್ಕಾರ ಯಾವ ರೀತಿ ಅಂಬೇಡ್ಕರ್ ಜಯಂತಿ ಹಾಗೂ ಕೆಂಪೇಗೌಡ ಜಯಂತಿ. ಕನಕದಾಸರ ಜಯಂತಿ ಆಚರಣೆ ಮಾಡುತ್ತಾರೆ. ಅದೇ ರೀತಿಯಾಗಿ ಮಾಡಬೇಕೆಂದು ಶಾಸಕಿ ರೂಪಕಲಾ ಶಶಿಧರ್ ರವರಿಗೆ ತಿಳಿಸಿದರು. ಅದೇ ರೀತಿಯಾಗಿ ನಮ್ಮ ಸಮುದಾಯಕ್ಕೆ ಸರ್ಕಾರದಿಂದ ಒಂದು ಎಕರೆ ಜಮೀನು ನೀಡಬೇಕೆಂದು ಸಭೆಯಲ್ಲಿ ಮನವಿ ಸಲ್ಲಿಸಿದರು. ಶಾಸಕರು ಮಾತನಾಡಿ ನೀವು ಹೇಳಿದ ಹಾಗೆ ಜಯಂತಿಯನ್ನು ಮಾಡೋಣ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್. ಭರತ್. ಹೆಚ್. ಜಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ. ವೆಂಕಟೇಶಪ್ಪ. ನಗರಸಭೆ ಪೌರಾಯುಕ್ತರು. ಆಂಜನೇಯಲು. ನಗರಸಭೆ ಅಧ್ಯಕ್ಷರು. ಇಂದಿರಾ ಗಾಂಧಿ. ಸಿ ಡಿ ಪಿ ಓ. ರಾಜೇಶ್. ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷರು. ಎಲ್ .ಎನ್. ನರಸಿಂಹಮೂರ್ತಿ. ಬೆಸ್ಕಾಂ ಅಧಿಕಾರಿ. ಹೇಮಲತಾ. ಕೆಎಸ್ಆರ್ಟಿಸಿ ಅಧಿಕಾರಿ. ನೇತ್ರಾವತಿ. ಆಹಾರ ಇಲಾಖೆ ಮಲ್ಲಿಕಾರ್ಜುನ. ಯಾದವ್ ಸಂಘದ ಜಿಲ್ಲಾ ಮಹಿಳಾ ಮುಖಂಡರು ಮಲತಿ ರಾಧಾಕೃಷ್ಣ. ಉಪ ತಹಶೀಲ್ದಾರ್. ಮಂಜುನಾಥ್. ಯಾದವ ಸಂಘದ ಮುಖಂಡರು ಕೊರಚ ಸಮುದಾಯದ ಮುಖಂಡರು ಭಾಗವಹಿಸಿದ್ದರು...
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
