ಹೆಲ್ಮೆಟ್ ನಮ್ಮ ಜೀವ ರಕ್ಷಕ ಕಡ್ಡಾಯವಾಗಿ ಬಳಕೆ ಮಾಡಿ: ಎಸ್ ಪಿ . ಶಿವಾಂಶೂ ರಜಪೂತ್
ಕೆಜಿಎಫ್: ಹೆಲ್ಮೆಟ್ ನಮ್ಮ ಜೀವ ರಕ್ಷಕ ಕಡ್ಡಾಯವಾಗಿ ಬಳಕೆ ಮಾಡಿ ತಮ್ಮ ಅಮೂಲ್ಯವಾದ ಜೀವವನ್ನು ಉಳಿಸಿಕೊಳ್ಳಿ ಎಂದು ನಗರದ ಮೊಯಿದು ಕಲ್ಯಾಣ ಮಂಟಪದಲ್ಲಿ ಹೆಲ್ಮೆಟ್ ಬಗ್ಗೆ ಜಾಗೃತಿ ಹಾಗೂ ಸಾರ್ವಜನಿಕ ಸಂಪರ್ಕ ಸಭೆ ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್.
ಇದೇ ತಿಂಗಳು 8 ರಿಂದ ಕಡ್ಡಾಯವಾಗಿ ಸಾರ್ವಜನಿಕರು ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯ. ನಿಯಮಪಾಲನೆ ಮಾಡದಿದ್ದರೆ ಭಾರಿ ಮೊತ್ತ ಕಟ್ಟಬೇಕಾಗುತ್ತದೆ. ಆದ್ದರಿಂದ ಸಾರ್ವಜನಿಕರು ಸಹಕಾರ ನೀಡಿ ನಿಯಮ ಪಾಲನೆ ಮಾಡಿ.
ಈಗಿನ ಯುವ ಜನತೆ ದ್ವಿಚಕ್ರ ವಾಹನವನ್ನು ಅಡ್ಡಾದಿದ್ದಾಗಿ ಚಲಾವಣೆ ಮಾಡಿ ಇತರರಿಗೆ ತೊಂದರೆ ನೀಡುತ್ತಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ.
ಸಾರ್ವಜನಿಕರು ಪ್ರವಾಸ ಇತರ ಸ್ಥಳಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಮನೆಯ ಬೀಗವನ್ನು ಭದ್ರವಾಗಿ ಹಾಕಿ ಪಕ್ಕದ ಮನೆಯವರಿಗೆ ಮಾಹಿತಿ ನೀಡಿ ನಂತರ ಪೊಲೀಸ್ ಇಲಾಖೆಯವರ ಗಮನಕ್ಕೆ ತನ್ನಿ ನಮ್ಮ ಸಿಬ್ಬಂದಿಗಳು ದಿನಕ್ಕೆರಡು ಬಾರಿ ನಿಮ್ಮ ಮನೆ ಮೇಲೆ ನಿಗಾ ಇಡುತ್ತಾರೆ. ಈಗ ಚಿನ್ನದ ಬೆಲೆ ಗಗನಕೇರಿ ಆದ್ದರಿಂದ ಚಿನ್ನವನ್ನು ಜೋಪಾನವಾಗಿ ಇಡಿ.
ನಿಮಗೆ ಯಾವುದೇ ಒಂದು ತೊಂದರೆಗಳಾದ ಸಂದರ್ಭದಲ್ಲಿ ನಮ್ಮ ಟೋಲ್ ಫ್ರೀ ನಂಬರ್ 112 ಗೆ ಕರೆ ಮಾಡಿ ಹತ್ತು ನಿಮಿಷದಲ್ಲಿ ನಿಮ್ಮ ಬಾಗಿಲಿಗೆ ಅವನಿಗೆ ಇರುವ ಸ್ಥಳಕ್ಕೆ ಬರುತ್ತಾರೆ ನಿಮ್ಮ ಸಮಸ್ಯೆನೇ ಇರಲಿ ನಾವು ಸದಾ ನಿಮ್ಮ ಸೇವೆ ಮಾಡಲು ಇರುತ್ತೇವೆ ಎಂದರು.
ಇತ್ತೀಚಿನ ದಿನಗಳಲ್ಲಿ ರೌಡಿ ಶೀಟರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾರಕಸ್ತ್ರಗಳಿಂದ ಕೇಕ್ ಕಟ್ ಮಾಡುವುದು ನಮ್ಮ ಗಮನಕ್ಕೆ ಬಂದಿದೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ.
ಈಗಾಗಲೇ ನಾವು ಇಂದು ನಗರದಲ್ಲಿರುವ ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿ ಕೆಲವು ರೌಡಿಗಳ ಮನೆಯಲ್ಲಿ ಮಾರ್ಕಸ್ತ್ರಗಳನ್ನು ವಶಪಡಿಸಿಕೊಂಡು ಅವರನ್ನು ಕೋರ್ಟಿಗೆ ಹಾಜರುಪಡಿಸಿದ್ದೇವೆ.
ಒಟ್ಟಾರೆಯಾಗಿ ನಮ್ಮ ಉದ್ದೇಶ ನಗರದಲ್ಲಿ ಯಾವುದೇ ಒಂದು ಅಯುತಕರ ಘಟನೆಗಳ ನಡೆಯಬಾರದು ರೌಡಿ ಹಾವಳಿ ಇರಬಾರದು. ಸಂಚಾರ ನಿಯಮಗಳು ಅಚ್ಚುಕಟ್ಟಾಗಿ ಪಾಲನೆ ಮಾಡಬೇಕು ಧನ್ಯವಾದಗಳು ಉದ್ದೇಶ ಎಂದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯ. ಸರ್ಕಲ್ ಇನ್ಸ್ಪೆಕ್ಟರ್.ನವೀನ್. ಉರಿಗಾಂ ವೃತ್ತ ನಿರೀಕ್ಷಕರು. ಮಾರ್ಕಂಡಯ್ಯ. ವ್ಯಾಪ್ತಿಯ ಎಲ್ಲಾ ಠಾಣೆಗಳ ಪಿಎಸ್ಐ ಗಳು ಭಾಗವಹಿಸಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
